ಪಾಲಿಕೆಯ ಬಜೆಟ್ ಮಂಡನೆ ಜವಾಬ್ದಾರಿಯುತವಾಗಿರಲಿ..
ಬೆಳಗಾವಿ ಜನತೆ ಕಟ್ಟಿದ ತೆರಿಗೆ ಹಣ ಅಪವ್ಯಯ ಆಗದಿರಲಿ…
ಬೆಳಗಾವಿ : 2026-27ರ ಬೆಳಗಾವಿ ಮಹಾನಗರ ಪಾಲಿಕೆಯ ಬಜೆಟ್ ತಯಾರಿಕೆಗಾಗಿ ಈಗಾಗಲೇ ಎರಡು ಪೂರ್ವಸಿದ್ಧತಾ ಸಭೆಗಳು ಜರುಗಿದ್ದು ಇನ್ನೇನು ಬರುವ ಬುಧವಾರ 25ನೇ ತಾರೀಕಿಗೆ ಬಜೆಟ್ ಮಂಡನೆಯನ್ನು ಮಾಡಲಾಗುವದು ಎಂಬ ಮಾಹಿತಿಯಿದೆ..
ಬೆಳಗಾವಿ ಪಾಲಿಕೆಗೆ ಪ್ರಮುಖವಾಗಿ ಸ್ಥಳೀಯ ಆದಾಯದ ಮೂಲವಾದ ಜನರು ನೀಡುವ ವಿವಿಧ ಬಗೆಯ ತೆರಿಗೆ ಹಾಗೂ ಸೇವಾ ಶುಲ್ಕಗಳೇ ಪಾಲಿಕೆಯ ಆದಾಯದ ಮುಖ್ಯ ಭಾಗವಾಗಿವೆ, ಹೀಗಿರುವಾಗ ಬಜೆಟ್ ಎನ್ನುವದು ಬೆಳಗಾವಿ ನಗರದ ಜನತೆಯ ಅವಶ್ಯಕತೆ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಮಂಡನೆ ಆಗಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.
ಈ ವಿಷಯದಲ್ಲಿ ಪಾಲಿಕೆಯ ನಗರ ಸೇವಕರು ಹಾಗೂ ಅಧಿಕಾರಿಗಳು ಜನರ ಪರವಾಗಿ ಕಾಳಜಿ ಇಟ್ಟುಕೊಂಡು ಬಜೆಟ್ ಪ್ರತಿಯನು ಸಿದ್ದಮಾಡಿದರೆ ಅದರಲ್ಲಿ ಸಾರ್ಥಕತೆ ಇರುತ್ತದೆ, ಯಾರದೋ ಒತ್ತಡಕ್ಕಾಗಿ, ಲಾಭಕ್ಕಾಗಿ, ಜನರ ದುಡ್ಡು ವ್ಯಯ ಮಾಡಿದರೆ, ತಪ್ಪಿನ ಲೆಕ್ಕಕ್ಕೆ ದೇವರು ಇಡುವ ಪ್ರತಿಫಲ ಇದ್ದೆ ಇರುತ್ತದೆ.
ಈಗಾಗಲೇ ಈ ಹಿಂದೆ ಸಾರ್ವಜನಿಕರ ಉಪಯೋಗಕ್ಕಾಗಿ ಇರುವ ಕೋಟಿಯಷ್ಟು ಹಣವನ್ನು ಸಾಮಾನ್ಯ ನಿಧಿಯಿಂದ ಒಂದು ಖಾಸಗಿ ಕೆಲಸಕ್ಕೆ ದುರುಪಯೋಗ ಆಗಿದೆ, ಅಧಿಕಾರಿಗಳು ಆಡಳಿತ ಪಕ್ಷದ ಮೇಲೆ ಹಾಕಿ, ನಿರ್ಣಯ ಹೊರಡಿಸಿದವರು ಅವರು ಎಂದು ಬೊಟ್ಟು ಮಾಡುವರು, ಮುಂದೆ ಅದರ ವಿಚಾರಣೆ ವಿವಿಧ ಆಯಾಮಗಳಲ್ಲಿ ಆದರೂ ಆಗಬಹುದು..
ಆದ್ದರಿಂದ ಈ ಬಜೆಟ್ ಅಲ್ಲಿ ಅಂತಹ ಯಾವ ತಪ್ಪುಗಳು ಆಗದಂತೆ, ಜನರ ಸೌಕರ್ಯ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ, ಪಾಲಿಕೆ ಅಧಿಕಾರಿಗಳಿಗೆ ಹಾಗೂ ಜನರು ಆರಿಸಿ ಕಳಿಸಿದ ನಗರ ಸೇವಕರಿಗೆ ಉತ್ತಮ ಹೆಸರು ತರುವಂತಹ ಬಜೆಟ್ ಸಿದ್ದವಾಗಲಿ ಎಂಬುದು ನಮ್ಮ ಆಶಯವಾಗಿದೆ..
ವರದಿ ಪ್ರಕಾಶ್ ಬಿ ಕೆ..