ಪಾಲಿಕೆಯ ಆಡಳಿತ ವಿಭಾಗದಿಂದ ಮೇಯರ್ ಹಾಗೂ ಉಪ ಮೇಯರ ಅವರಿಗೆ ಗೌರವ ಅರ್ಪಣೆ..
ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ನೂತನ ಮಹಾಪೌರ ಹಾಗೂ ಉಪ ಮಹಾಪೌರರಾಗಿ ಆಯ್ಕೆಯಾದ ಪ್ರೀತಿ ಕಾಮಕರ ಹಾಗೂ ಹನಮಂತ ಕೊಂಗಾಲಿ ಅವರಿಗೆ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾದ ಉದಯಕುಮಾರ ತಳವಾರ ಅವರ ನೇತೃತ್ವದಲ್ಲಿ ವಿಭಾಗದ ಎಲ್ಲಾ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಗೌರವ ಸಮರ್ಪಣೆ ಮಾಡಲಾಗಿದೆ.
ಈ ವೇಳೆ ಸನ್ಮಾನ ನೆರವೇರಿಸಿ ಪುಷ್ಪಗುಚ್ಚ ನೀಡಿ ಗೌರವಿಸಲಾಗಿದ್ದು, ಪಾಲಿಕೆಯ ನೂತನ ಸೂತ್ರದಾರಿಗಳ ಆಡಳಿತದಲ್ಲಿ ನಗರ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಇಲ್ಲ ಸಿಬ್ಬಂದಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.

ಇದೇ ವೇಳೆ ವಾಲ್ಮೀಕಿ ಸಮುದಾಯದ ಮುಖಂಡರಾದ ರಾಜಶೇಖರ ತಳವಾರ ಅವರು ಮಾತನಾಡಿ, 1991 ರಲ್ಲಿ ಸಿದ್ದನಗೌಡ ಪಾಟೀಲ್ ಅವರು ಪಾಲಿಕೆಯ ಮಹಾಪೌರರಾಗಿ ದಾಖಲೆ ಮಾಡಿದ್ದರು, ಆಗ ಎಲ್ಲಾ ಕನ್ನಡಿಗರಿಗೂ ತುಂಬಾ ಸಂತಸವಾಗಿತ್ತು, ಅದೇ ರೀತಿ ಇಂದು ಮೇಯರ್ ಹಾಗೂ ಉಪ ಮೇಯರ್ ಇಬ್ಬರೂ ಕನ್ನಡಿಗರು ಆಗಿರುವದು ಹಾಲು ಜೇನು ಸೇರಿದಂತಿದೆ, ಇದು ಬೆಳಗಾವಿ ಕನ್ನಡಿಗರಿಗೆ ಖುಷಿ ತಂದಿದೆ, ಬೆಳಗಾವಿ ಜನತೆಯ ಪರವಾಗಿ, ಕನ್ನಡಪರ ಸಂಘಟನೆ, ಜಿಲ್ಲಾ ವಾಲ್ಮೀಕಿ ಸಮುದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಇವರೆಲ್ಲರ ಪರವಾಗಿ ಈ ಮಹನಿಯರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದಿದ್ದಾರೆ..
ವರದಿ ಪ್ರಕಾಶ ಬಿ ಕುರಗುಂದ..