ಕನ್ನಡತಿ ಮೇಯರ್ ಆಗಿ, ಕನ್ನಡ ಪೇಠ ಧರಿಸಿದ್ದು ತುಂಬಾ ಹೆಮ್ಮೆ ಎನಿಸಿದೆ..

ಕನ್ನಡತಿ ಮೇಯರ್ ಆಗಿ, ಕನ್ನಡ ಪೇಠ ಧರಿಸಿದ್ದು ತುಂಬಾ ಹೆಮ್ಮೆ ಎನಿಸಿದೆ..

ಮಹಾಪೌರ ಪ್ರೀತಿ ಕಾಮಕರ ಹರ್ಷ..

ಬೆಳಗಾವಿ : ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಇಂದು ಆಗಮಿಸಿ ನಮ್ಮನ್ನು ಅಭಿನಂದಿಸಿದ್ದು ಸಂತಸ ತಂದಿದೆ, ಕನ್ನಡತಿ ಮೇಯರ ಆಗಿ, ಕನ್ನಡ ಪೇಠ ಧರಿಸುದ್ದು ನನಗೆ ಹೆಮ್ಮೆ ಎನಿಸಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಪ್ರೀತಿ ವಿನಾಯಕ ಕಾಮಕರ ಹೇಳಿದ್ದಾರೆ.

ಶುಕ್ರವಾರ ದಿನಾಂಕ 20/03/2026 ರಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ದೀಪಕ ಗುಡಗನಟ್ಟಿ ಅವರ ಮುಂದಾಳತ್ವದಲ್ಲಿ ಕರವೇ ಸದಸ್ಯರು ಪಾಲಿಕೆಗೆ ಆಗಮಿಸಿ ನೂತನವಾಗಿ ಆಯ್ಕೆಯಾದ ಮಹಾಪೌರ ಪ್ರೀತಿ ಕಾಮಕರ ಹಾಗೂ ಉಪ ಮಹಾಪೌರರಾದ ಹನಮಂತ ಕೊಂಗಾಲಿ ಅವರಿಗೆ ಗೌರವೀಯ ಸನ್ಮಾನವನ್ನು ನೆರವೇರಿಸಿದರು. ಗೌರವ ಸ್ವೀಕರಿಸಿದ ನಂತರ ಮಾತನಾಡಿದ ಮಹಾಪೌರರು ಕನ್ನಡದ ಬಗ್ಗೆ ತಮಗಿರುವ ಕಾಳಜಿಯ ನುಡಿಗಳನ್ನು ಆಡಿದ್ದಾರೆ.

ಇದೇ ವೇಳೆ ಕರವೇ ಜಿಲ್ಲಾಧ್ಯಕ್ಷರಾದ ದೀಪಕ್ ಗುಡಗನಟ್ಟಿ ಅವರು ಮಾತನಾಡಿ, ಬೆಳಗಾವಿ ಪಾಲಿಕೆಗೆ ನೂತನವಾಗಿ ಆಯ್ಕೆ ಆಗಿರುವ ಅಪ್ಪಟ ಕನ್ನಡಿಗರಾದ ಮಹಾಪೌರರಾದ ಪ್ರೀತಿ ಕಾಮಕರ ಹಾಗೂ ಉಪ ಮಹಾಪೌರರಾದ ಹನಮಂತ ಕೊಂಗಾಲಿ ಅವರಿಗೆ ಬೆಳಗಾವಿ ಹಾಗೂ ಇಡೀ ರಾಜ್ಯದ ಕನ್ನಡಿಗರ ಪರವಾಗಿ ಜೊತೆಗೆ ಕರವೇ ಪರವಾಗಿ ಅಭಿನಂದನೆ ತಿಳಿಸುತ್ತೇವೆ ಎಂದರು.

ಇವರ ಅವಧಿಯಲ್ಲಿ ಬೆಳಗಾವಿ ನಗರ ಸಂಪೂರ್ಣ ಅಭಿವೃದ್ಧಿ ಆಗಲಿ ಎಂದು ಬೆಳಗಾವಿ ಜನತೆಯ ಪರವಾಗಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು. ಉಪ ಮಹಾಪೌರರಾದ ಹಣಮಂತ ಕೊಂಗಾಲಿ ಅವರೂ ಕೂಡಾ ರಕ್ಷಣಾ ವೇದಿಕೆಯ ಆತ್ಮೀಯ ಗೌರವಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ದೀಪಕ ಗುಡಗನಟ್ಟಿ
ಸುರೇಶ ಗವನ್ನವರ, ಗಣೇಶ ರೋಕಡೆ,
ಹೊಳೆಪ್ಪ ಸುಲದಾಳ, ಅಡಿವೆಪ್ಪ ತಳ್ಳೋರಿ, ರಮೇಶ್ ಯರಗಣ್ಣವರ
ಪ್ರಕಾಶ ಲಮಾಣಿ, ಸತೀಶ್ ಗುಡದವರ
ಮಂಜುನಾಥ ರಾಠೋಡ್,
ಲೋಕೆಶ ರಾಠೋಡ್, ಅರ್ಜುನ ಕಾಂಬಳೆ, ಅಭಿಷೇಕ್ ಅಗಸಗಿ
ಸಂತೋಷ್ ಚಕ್ರಯಿ
ನಾಗರಾಜ ಲಕ್ಕಪ್ಪಗೊಳ್ ರೂಪಾಲಿ ಬಾರಿಗಡಿ, ಮಧು ಇಟಗಿ ಮುಂತಾದವರು ಇದ್ದರು..

ವರದಿ ಪ್ರಕಾಶ್ ಬಿ ಕೆ..