ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಪಾಲಿಕೆಯಿಂದ ನಿರ್ಣಯ ಅಂಗಿಕಾರ ಆಗಲಿ..

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಪಾಲಿಕೆಯಿಂದ ನಿರ್ಣಯ ಅಂಗಿಕಾರ ಆಗಲಿ..

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪರಿಹಾರಕ್ಕೆ ಮಹಾಜನ ವರದಿಯೇ ಅಮತಿಮ..

ಅಶೋಕ್ ಚಂದರಗಿ..

ಬೆಳಗಾವಿ : ಕರ್ನಾಟಕ -ಮಹಾರಾಷ್ಟ್ರ ಗಡಿವಿವಾದ ಪರಿಹಾರಕ್ಕೆ ಮಹಾಜನ ವರದಿಯೇ ಅಂತಿಮ ಹಾಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯಗಳನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅಂಗಿಕರಿಸಬೇಕು ಎಂದು ಕನ್ನಡಪರ ಸಂಘಟನೆಗಳ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಅವರು ಹೇಳಿದ್ದಾರೆ.

ಗುರುವಾರ ಇಲ್ಲಿನ ಮಹಾನಗರ ಪಾಲಿಕೆಗೆ ತೆರಳಿ ನೂತನವಾಗಿ ಆಯ್ಕೆ ಆಗಿರುವ ಕನ್ನಡಿಗರಾದ ಮೇಯರ. ಹಾಗೂ ಉಪಮೇಯರ್ ಅವರಿಗೆ ಹೂಗುಚ್ಚ ನೀಡಿ, ಸತ್ಕರಿಸಿ ಅಭಿನಂಧನೆ ಸಲ್ಲಿಸಿದ ಬಳಿಕ ಪಾಲಿಕೆಯ ಮೇಯರ ಉಪಮೇಯರ ಜೊತೆಗೆ ಕನ್ನಡಪರ ಸಂಘಟನೆ ಸುಮಾರು ೨೦ ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ಸದಸ್ಯರುಗಳು ಸೇರಿ ಸಭೆ ನಡೆಸಿದರು.

2005 ರ ಅಕ್ಟೊಬರ್ 27 ರಂದು ಬೆಳಗಾವಿ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬಹುಮತದಿಂದ ಅಂಗೀಕರಿಸಿದ್ದ, ಮಹಾರಾಷ್ಟ್ರ ಪರ ಗೊತ್ತುವಳಿಯನ್ನು ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟಿನಲ್ಲಿ ತಾನು ದಾಖಲಿಸಿರುವ ದಾವೆಯಲ್ಲಿ ಪೂರಕ ದಾಖಲೆಯಾಗಿ ಸೇರ್ಪಡೆ ಮಾಡಿದ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳು ಕೂಡಾ ಈ ಬೇಡಿಕೆಯನ್ನು ಮಂಡಿಸಿವೆ.

ಗ್ರಾಮವನ್ನು ಘಟಕವನ್ನಾಗಿ ಪರಿಗಣಿಸಿ, ಗಡಿಭಾಗದ ಮಾರಾಠಿಗರ ಇಚ್ಛೆಯ ಅನುಸಾರ ಬೆಳಗಾವಿ ಸಹಿತ ಇತರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು 2005 ರಲ್ಲಿ ಪಾಲಿಕೆಯು ಬಹುಮತದಿಂದ ನಿರ್ಣಯವನ್ನು ಅಂಗಿಕರಿಸಿದ್ದಲ್ಲದೆ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಭಾಲ್ಕಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಸುಪ್ರೀಂ ಕೋರ್ಟ್ ನ್ನು ಕೋರಲು ನಿರ್ಣಯಿಸಲಾಗಿತ್ತು ಎಂದು ಅಂದೀನ ಇತಿಹಾಸವನ್ನು ಅಶೋಕ್ ಚಂದರಗಿ ಅವರು ಬಿಚ್ಚಿಟ್ಟರು.

ಅಂದಿನ ನಿರ್ಣಯ ಸದ್ಯ ಸುಪ್ರೀಂ ಕೋರ್ಟಿನಲ್ಲಿ, ಮಹಾರಾಷ್ಟ್ರದ ದಾವೆಯ ಒಂದು ಭಾಗವಾಗಿದೆ. ಈಗ ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕದ ಪರವಾಗಿರುವ ಸದಸ್ಯರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿದೆ. ಒಟ್ಟು 58 ಸದಸ್ಯರಲ್ಲಿ 55 ಸದಸ್ಯರು ನಮ್ಮವರೇ ಆಗಿದ್ದಾರೆ. ನೂತನ ಮೇಯರ ಉಪಮೇಯರ ಅಪ್ಪಟ ಕನ್ನಡಿಗರಾಗಿದ್ದಾರೆ. ಈ ಸುವರ್ಣ ಅವಕಾಶವನ್ನು ಬಳಸಿಕೊಂಡು ಕರ್ನಾಟಕದ, ವಿಶೇಷವಾಗಿ ಬೆಳಗಾವಿ ಹಿತಾಸಕ್ತಿಯನ್ನು ಸುಪ್ರೀಂ ಕೋರ್ಟಿನಲ್ಲಿ ರಕ್ಷಿಸಲು ನಿರ್ಣಯಗಳನ್ನು ಅಂಗಿಕರಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಕನ್ನಡ ಸಂಘಟನೆಗಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮೇಯರ್ ಪ್ರೀತಿ ಕಾಮಕರ ಮತ್ತು ಉಪಮೇಯರ್ ಹಣಮಂತ ಕೊಂಗಾಲಿ ಅವರು ಶೀಘ್ರವೇ ಈ ಬಗ್ಗೆ ಕ್ರಮ ಕೈಕೊಳ್ಳುವ ಭರವಸೆ ನೀಡಿದರು.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರ ನೇತೃತ್ವದಲ್ಲಿ ಮಹಾಪೌರರ ಕಾರ್ಯಲಯದಲ್ಲಿ ನಡೆದ ಸನ್ಮಾನ ಮತ್ತು ಚರ್ಚೆಯಲ್ಲಿ ಇಪ್ಪತಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳ ಮುಖಂಡರು ಪಾಲ್ಗೊಂಡು ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಗಂಭೀರವಾಗಿ ಚರ್ಚೆಯಲ್ಲಿ ಭಾಗಿಯಾಗಿದ್ದರು.

ಈ ವೇಳೆ ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ನಾಮನಿರ್ದೇಶನಗೊಂಡ ಪಾಲಿಕೆ ಸದಸ್ಯರಾದ ರಮೇಶ ಸೊಂಟಕ್ಕಿ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ, ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣದ) ಜಿಲ್ಲಾಧ್ಯಕ್ಷ ವಾಜಿದ ಹಿರೇಕೋಡಿ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕನ್ನಡ ಹೋರಾಟಗಾರದ ಹುಚ್ಚರೆಡ್ಡಿ ಶಿವರೆಡ್ಡಿ, ಮೈನೋದ್ದಿನ ಮಕಾನದಾರ, ಮಹೇಶ ಶೀಗಿಹಳ್ಳಿ, ಪ್ರೇಮ್ ಚೌಗುಲಾ, ಸಂತೋಷ ಮುಖನವರ ಆನಂದ ಬಿಲಾವರ, ಸೇರಿದಂತೆ ಹಲವು ಕನ್ನಡಪರ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *