ಬೆಳಗಾವಿಯ ಎಸ್ಎಸ್ಎ ಪಿಯು ಕಾಲೇಜಿನಲ್ಲಿ ಅದ್ಭುತ ಫಲಿತಾಂಶ..
ಗುಣಮಟ್ಟದ ಶಿಕ್ಷಣಕ್ಕೆ ಮತ್ತೊಮ್ಮೆ ಸಾಕ್ಷಿಯಾದ ಎನ್ ಕೆ ಶಿಕ್ಷಣ ಸಂಸ್ಥೆ..
ಬೆಳಗಾವಿ : ಎನ್.ಕೆ. ಎಜುಕೇಶನ್ ಸಂಸ್ಥೆಯ ಅಧೀನದಲ್ಲಿರುವ ಎಸ್ಎಸ್ಎ ಪಿಯು ಕಾಲೇಜಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ತನ್ನ ಶೈಕ್ಷಣಿಕ ಮೇಲುಗೈಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ವಿದ್ಯಾರ್ಥಿಗಳ ಈ ಶ್ರೇಷ್ಠ ಸಾಧನೆಯು ಕಾಲೇಜಿಗೆ ಹೆಮ್ಮೆ ತಂದಿದೆ.
ಈ ಫಲಿತಾಂಶದಲ್ಲಿ ಕುಮಾರಿ ಸೋಹಾ ಶೇಖ್ ಅವರು 600ರಲ್ಲಿ 593 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರಿ ಶ್ರಾವಣಿ ಭಂಡಾರಿ ಅವರು 591 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದು, ಕು. ಅನ್ವಿತಾ ಶೆಟ್ ಅವರು 582 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಈ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷರಾದ ನರೇಂದ್ರಕುಮಾರ (ಎನ್.ಕೆ.) ಅವರು ಕಾಲೇಜಿನ ಪ್ರಾಂಶುಪಾಲರು, ಸರ್ವ ಶಿಕ್ಷಕ ವೃಂದ ಹಾಗೂ ಪೋಷಕರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರ ಮುಂದಿನ ಭವಿಷ್ಯಕ್ಕೆ ಆಶೀರ್ವಾದಗಳನ್ನು ಕೋರಿದ್ದಾರೆ.
ವಿದ್ಯಾರ್ಥಿಗಳ ಈ ಯಶಸ್ಸಿನಿಂದ ಕಾಲೇಜಿನಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದ್ದು, ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ.