ಡಾ, ಬಿ ಆರ್ ಅಂಬೇಡ್ಕರ ಅವರ 135ನೇ ಜಯಂತಿ ಆಚರಣೆ…

ಡಾ, ಬಿ ಆರ್ ಅಂಬೇಡ್ಕರ ಅವರ 135ನೇ ಜಯಂತಿ ಆಚರಣೆ…

ಮಾನವ ಜನ್ಮ ಇರುವರೆಗೂ ಉಳಿಯುವ ಮಹಾನ ಗ್ರಂಥ ಬಾಬಾಸಾಹೇಬರ ಸಂವಿದಾನ..

ಯಶವಂತಕುಮಾರ, ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತಿ ಬೆಳಗಾವಿ..

ಬೆಳಗಾವಿ : ನಾಗರೀಕ ಸಮಾಜದಲ್ಲಿ ನಾವು ಹೇಗೆ ಬದುಕಬೇಕು ಎಂಬುದುನ್ನು, ಸಮಾನತೆ ಹಾಗೂ ಬ್ರಾತೃತ್ವದ ಸಂದೇಶದ ಕೊಡುಗೆಯನ್ನು ದೇಶಕ್ಕೆ ನೀಡಿದ ಡಾ ಬಾಬಾಸಾಹೇಬ ಅಂಬೇಡ್ಕರ ಅವರು ಇಡೀ ಮಾನವ ಜನ್ಮ ಇರುವರೆಗೂ ಉಳಿಯುವಂತಹ ಸಂವಿದಾನವೆಂಬ ಮಹಾನ್ ಗ್ರಂಥವನ್ನು ದೇಶದ ಜನತೆಗೆ ನೀಡಿದ್ದಾರೆ ಎಂದು ಬೆಳಗಾವಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ ಅವರು ಹೇಳಿದ್ದಾರೆ.

ಮಂಗಳವಾರ ದಿನಾಂಕ 14/04/2026ರಂದು ಬೆಳಗಾವಿ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಭಾರತರತ್ನ ಡಾ ಬಾಬಾಸಾಹೇಬ ಅಂಬೇಡ್ಕರ ಅವರ 135ನೇ ಜಯಂತಿಯನ್ನು ಆಚರಣೆ ಮಾಡಿ, ಎಲ್ಲರಿಗೂ ಜಯಂತಿಯ ಶುಭಾಶಯ ತಿಳಿಸಿ ಮಾತನಾಡಿದ ಅಧಿಕಾರಿಗಳು, ದೇಶಕ್ಕೆ ಬಾಬಾಸಾಹೇಬರ ಕೊಡುಗೆಗಳು ಅಪಾರ ಇವೆ, ಇಂದು ಇಷ್ಟು ದೊಡ್ಡ ಜನಸಂಖ್ಯೆಯ ಭಾರತ ದೇಶ ಶಾಂತಿಯುತವಾಗಿ ಬಾಳಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರೆ ಅದಕ್ಕೆ ಕಾರಣ ನಮ್ಮ ಸಂವಿಧಾನದಲ್ಲಿರುವ ಮಾನವೀಯ ಮೌಲ್ಯಗಳ ಅಂಶಗಳು ಎಂದಿದ್ದಾರೆ.

ಅಂಬೇಡ್ಕರ ಅವರ ಸಂವಿಧಾನ ನಮಗೆ ಕೆಲ ಹಕ್ಕುಗಳೊಂದಿಗೆ ಜವಾಬ್ದಾರಿಗಳನ್ನೂ ಕೂಡಾ ನೀಡಿದೆ, ಸಮಾನತೆ, ಸಹೋದರತೆ, ಸೌಲಭ್ಯ ಪಡೆಯುವಿಕೆ, ವಾಕ್ ಸ್ವಾತಂತ್ರ್ಯ ಇವೆಲ್ಲವನ್ನೂ ನೀಡಿ ಅವು ಎಷ್ಟರ ಮಟ್ಟಿಗೆ ಇರಬೇಕು ಎಂಬ ಮಿತಿಯ ಗೆರೆಗಳನ್ನೂ ಕೂಡಾ ಸಂವಿಧಾನ ಹಾಕಿದೆ, ಅದಕ್ಕಾಗಿಯೇ ಇಂದು ಹಾಗೂ ಮುಂದೆ ಎಂದೆಂದೂ ನಮ್ಮ ಸಂವಿಧಾನ ಜನತೆಯ ಜೀವನಕ್ಕೆ ಪಾಠವಾಗಿದೆ ಎಂದ ಅವರು, ಸಂವಿಧಾನದ ಆಶಯದಂತೆ ನಾವು ಜಾತೀಯತೆಯನ್ನು ಬಿಡಬೇಕು, ಮಹಾನಾಯಕರನ್ನು ಒಂದೇ ಸಮುದಾಯಕ್ಕೆ ಮೀಸಲೀಡಬಾರದು, ನಾವು ಉತ್ತಮ ನಾಗರಿಕರಾಗಲು ಹಿಂದಿನ ಮಹಾಪುರುಷರ ಕೊಡುಗೆಗಳನ್ನು ನೆನೆಯಬೇಕು, ಸಮಾಜಕ್ಕೆ ದೇಶಕ್ಕೆ ನಮ್ಮಿಂದಲೂ ಉತ್ತಮ ಕೊಡುಗೆ ಆಗಬೇಕು ಎಂಬುದು ಅಂಬೇಡ್ಕರ ಅವರ ಪಾಠವಾಗಿದೆ ಎಂದಿದ್ದಾರೆ.

ಇನ್ನು ತಾಲೂಕು ಪಂಚಾಯತಿ ಸಿಬ್ಬಂದಿ ಶ್ರೀಕಾಂತ್ ಸರದಾರ ಅವರು ಮಾತನಾಡಿ, ಬಾಬಾಸಾಹೇಬರ ಬಾಲ್ಯ ಬಹು ಕಷ್ಟದಿಂದ ಕೂಡಿತ್ತು, ಬಾಲ್ಯದಿಂದಲೇ ಪರಿಸ್ಥಿತಿಯ ವಿರುದ್ದ ಹೋರಾಟ ಮಾಡುತ್ತಲೇ ಬಂದ ಅವರು ಮುಂದೆ ಮಾನವ ಜನಾಂಗಕ್ಕೆ ಯಾವುದೇ ಮೂಲಭೂತ ಸಮಸ್ಯೆಗಳು ಬರಬಾರದು ಎಂದು ನಮ್ಮ ಸಮಾಜಕ್ಕೆ ಸುಭದ್ರ ಭದ್ರ ಬುನಾದಿಯ ಸಂವಿದಾನವನ್ನು ರೂಪಿಸಿದರು, ಸಂವಿದಾನದ ಅಡಿಯಲ್ಲಿ ಇಂದು ನಾವೆಲ್ಲರೂ ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿ ಮಾಡಿಕೊಟ್ಟಿದ್ದು ಅಂಬೇಡ್ಕರ ಅವರ ಪುಣ್ಯ ಎಂದರು.

ತಮ್ಮ ಜೀವನದುದ್ದಕ್ಕೂ ಮೂರು ಅಂಶಗಳನ್ನು ಪಾಲಿಸಿದ ಅವರು ಬರುವ ಪೀಳಿಗೆಗೂ ಆ ಸಂದೇಶ ನೀಡಿದ್ದಾರೆ, ಶಿಕ್ಷಣ, ಸಂಫಟನೆ ಹಾಗೂ ಹೋರಾಟ ಎಂಬ ಮೂರು ತತ್ವಗಳ ಮಹತ್ವವನ್ನು ತಿಳಿಸಿ, ಮುಂಬರುವ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದು ಬಾಬಾಸಾಹೇಬರ ಮಹತ್ವದ ಕೊಡುಗೆಯಾಗಿದೆ. ಯಾವ ಸಮುದಾಯಕ್ಕೂ ವ್ಯಕ್ತಿಗೂ ಕೆಡಕು ಮಾಡದಂತಯ ವ್ಯಕ್ತಿತ್ವ ಅಂಬೇಡ್ಕರ ಅವರದ್ದು, ಅವರು ಅಂತಹ ಮಹಾನ ವ್ಯಕ್ತಿ ಹಾಗೂ ಶಕ್ತಿ ಎಂದು ತಿಳಿದೇ ಇಂದು ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಬಾಬಾಸಾಹೇಬರ ಭಾವಚಿತ್ರ ಇರುತ್ತದೆ ಎಂದರು.

ಜಯಂತಿಯ ಆಚರಣೆಯಲ್ಲಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ ಕಡೆಮನಿ, ಸಿಬ್ಬಂದಿ ಹರ್ಷವರ್ಧನ್ ಹಾಗೂ ಕಚೇರಿಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *