ಬಾಂಡ್ ಮೇಲೆ ಪಿಐಡಿ ನೀಡಿದ ಸಿಬ್ಬಂದಿ ಮೇಲೆ ಕ್ರಮ ಯಾವಾಗ?

ಬಾಂಡ್ ಮೇಲೆ ಪಿಐಡಿ ನೀಡಿದ ಸಿಬ್ಬಂದಿ ಮೇಲೆ ಕ್ರಮ ಯಾವಾಗ?

ದಕ್ಷಿಣ ಕಂದಾಯ ವಿಭಾಗದ ಸುಮಾರು 41ನಕಲಿ ಪಿಐಡಿಗಳ ಕಥೆ ಏನು?

ದಕ್ಷಿಣ ವಲಯದ ಆಯುಕ್ತರು ನೀಡಿದ ವರದಿಯಲ್ಲಿ ಏನಿದೆ?

ನಗರ ಸೇವಕ ರವಿ ದೋತ್ರೆ ಅವರ ಗಂಭೀರ ಪ್ರಶ್ನೆ..

ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ದಕ್ಷಿಣ ಕಂದಾಯ ವಿಭಾಗದಲ್ಲಿ 27 ಹಾಗೂ 14ಅಂತ ಸುಮಾರು 41 ಆಸ್ತಿ ಸಂಖ್ಯೆಗಳನ್ನು (ಪಿಐಡಿ) ಬಾಂಡಗಳ ಆಧಾರದ ಮೇಲೆ ನಿಯಮ ಬಾಹಿರವಾಗಿವಾಗಿ ನೀಡಿದ್ದು, ಸಂಬಂಧಧಪಟ್ಟ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮೇಲೆ ಇನ್ನು ಏಕೆ ಕ್ರಮ ಜರುಗಿಸಿಲ್ಲ? ಹಾಗೂ ವಿಚಾರಣೆ ಎಲ್ಲಿವರೆಗೆ ಬಂದಿದೆ ಎಂದು ನಗರ ಸೇವಕ ರವಿ ದೋತ್ರೆ ಅವರು ಪ್ರಶ್ನೆ ಮಾಡಿದ್ದಾರೆ.

ಶನಿವಾರ ದಿನಾಂಕ 18/04/2026 ರಂದು ಪಾಲಿಕೆಯ ಪರಿಷತ್ ಸಭಾ ಭವನದಲ್ಲಿ ಜರುಗಿದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಹಾಪೌರರ ಅನುಮತಿ ಮೇರೆಗೆ, ಆಯುಕ್ತರು ಹಾಗೂ ಕಂದಾಯ ಉಪ ಆಯುಕ್ತರಿಗೆ ಈ ಗಂಭೀರ ಪ್ರಶ್ನೆಯನ್ನು ಕೇಳಿದ ರವಿ ದೋತ್ರೆ ಅವರು, ತನಿಖಾ ಅಧಿಕಾರಿ ಆಗಿರುವ ದಕ್ಷಿಣ ವಲಯದ ಆಯುಕ್ತರು ಏನು ವರದಿ ನೀಡಿದ್ದಾರೆ ಎಂಬುದನ್ನು ಸಭೆಗೆ ತಿಳಿಸಿ, ಭ್ರಷ್ಟಾಚಾರದ ಬಗ್ಗೆ ಎಲ್ಲಾ ನಗರ ಸೇವಕರ ಮೂಲಕ ಜನತೆಗೂ ತಿಳಿಯಬೇಕು, ವರದಿಯಲ್ಲಿ ಏನಿದೆ ಹೇಳಿ ಎಂದು ಪ್ರಶ್ನೆ ಮಾಡಿದರು.

ಆಗ ಉತ್ತರಿಸಿದ ಪಾಲಿಕೆಯ ಕಂದಾಯ ಉಪ ಆಯುಕ್ತರಾದ ಡಾ ಸಿದ್ದು ಹುಲ್ಲೋಳ್ಳಿ ಅವರು, ಆ ಪ್ರಕರಣದಲ್ಲಿ ಮಾಡಲಿಕ್ಕೆ ಅವಕಾಶ ಇಲ್ಲದಿದ್ದರೂ ನಿಯಮಗಳನ್ನು ಮೀರಿ ಮಾಡಿದ್ದೇವೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದಾಗ, ನೀವು ಅಲ್ಲಿ ಸ್ಥಳ ಪರಿಶೀಲನೆ ಮಾಡಿದ್ದೀರಾ? ಹೋಗಬೇಕಿತ್ತು, ಏಕೆಂದರೆ ಅಲ್ಲಿ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ, ಅದು ತಟಸ್ಥ ವಲಯ, ಪಕ್ಕದಲ್ಲಿ ಕಾಲುವೆ ಇದೆ, ರಸ್ತೆ ಇಲ್ಲಾ, ಒಳಚರಂಡಿ ಇಲ್ಲಾ, ಹಾಗಿದ್ದರೂ ಪಿಐಡಿ ಕೊಟ್ಟಿದ್ದಾರೆ..

ಕ್ರಮ ಏನು ಆಗುತೆ, ಆಡಳಿತ ವಿಭಾಗದಿಂದ ಆದಷ್ಟು ಬೇಗ ಕ್ರಮ ಆಗಬೇಕು, ಈಗಾಗಲೇ ಸುದ್ದಿ ಮಾಧ್ಯಮಗಳಲ್ಲಿ ಈ ವಿಷಯ ಬಂದು ಪಾಲಿಕೆಗೆ ಅವಮಾನ ಆಗುತ್ತಿದೆ, ಕ್ರಮ ಆಗದಿದ್ದರೆ ಸಾರ್ವಜನಿಕರು ಬಿಡುವದಿಲ್ಲ, ಇದರ ಬಗ್ಗೆ ಆಯುಕ್ತರು, ಕಂದಾಯ ಅಧಿಕಾರಿಗಳು ಸೂಕ್ತ ರೀತಿಯ ಜವಾಬ್ದಾರಿ ವಹಿಸಬೇಕಿತ್ತು ಎಂದರು.

ಇದಕ್ಕೆ ಉತ್ತರ ನೀಡಿದ ಆಯುಕ್ತರು, ಈಗಾಗಲೇ ವಲಯ ಆಯುಕ್ತರು ನೀಡಿದ ವರದಿ ಆಧರಿಸಿ, ಕಂದಾಯ ವಿಭಾಗದ ಮುಖ್ಯಸ್ಥರಿಗೆ ಕಳುಸಿದ್ದು, ಅಲ್ಲಿಂದ ಅದನ್ನು ಕೊನೆಯ ಹಂತದ ಇಲಾಖೆಯ ತನಿಖೆಗೆ ಕಳಿಸಿದ್ದೇವೆ, ಆದಷ್ಟು ಬೇಗ ಆಡಳಿತ ವಿಭಾಗದಿಂದ ಕ್ರಮದ ಬಗ್ಗೆ ವರದಿ ಬರುತ್ತದೆ ಎಂದಿದ್ದಾರೆ. ಜೊತೆಗೆ ಆ ನಿಯಮಬಾಹಿರ ಪಿಐಡಿಗಳು ಕೂಡಾ ಬ್ಲಾಕ್ ಆಗಬೇಕು ಎಂದು ನಗರ ಸೇವಕ ರವಿ ದೋತ್ರೆ ಅವರು ಹೇಳಿದಾಗ, ಇವತ್ತೇ ಬ್ಲಾಕ್ ಮಾಡುತ್ತೇವೆ ಎಂದು ಕಂದಾಯ ಉಪ ಆಯುಕ್ತರು ಭರವಸೆ ನೀಡಿದರು..

ವರದಿ ಪ್ರಕಾಶ ಬಿ ಕೆ..

Leave a Reply

Your email address will not be published. Required fields are marked *