ಕಬ್ಬು ಬೇಸಾಯದಲ್ಲಿ ಎಐ ತಂತ್ರಜ್ಞಾನ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರವು ಜಾರಿಗೆ ತರಲಿ..
ಕುರುಬೂರು ಶಾಂತಕುಮಾರ,
ಬೆಳಗಾವಿ : ಕಳೆದ ಎರಡು ವರ್ಷಗಳಿಂದ ಮಹಾರಾಷ್ಟ್ರ ರಾಜ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ರೈತರು ಕೃತಕ ಬುದ್ಧಿಮತ್ತೆ AI ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಬ್ಬು ಬೇಸಾಯ ಮಾಡುತ್ತಿರುವ ಕಾರಣ ಪ್ರತಿ ಎಕರೆಗೆ 50ರಷ್ಟು ಹೆಚ್ಚು ಇಳುವರಿ ಪಡೆಯುತ್ತಿದ್ದು ಬೇಸಾಯದ ಖರ್ಚು ಕೂಡ ಕಡಿಮೆಯಾಗಿದೆ ಇದರಿಂದ ರೈತರಿಗೆ ಹೆಚ್ಚು ಲಾಭ ಬರುತ್ತಿದೆ AI ತಂತ್ರಜ್ಞಾನ ಅಳವಡಿಸಿಕೊಳ್ಳುವ ರೈತರಿಗೆ ಪ್ರತಿ ಹೆಕ್ಟರಿಗೆ 25,000 ಖರ್ಚು ಬರುತ್ತದೆ. ಈ ಬಾಬ್ತು ಮಹಾರಾಷ್ಟ್ರ ರಾಜ್ಯ ಸರ್ಕಾರ 18,000 ಸಹಾಯಧನ ಕೊಡುತ್ತಿದೆ. ಉಳಿದ 7 ಸಾವಿರ ರೂಗಳನ್ನು ಆಯಾ ಭಾಗದ ಸಕ್ಕರೆ ಕಾರ್ಖಾನೆ ಬರಿಸುತ್ತಿದೆ. ಇಧೇ ಮಾದರಿ ಕರ್ನಾಟಕ ಸರ್ಕಾರವು ಜಾರಿಗೆ ತರಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಅಧ್ಯಯನ ನಡೆಸಲು ನೆನ್ನೆ ಮಹಾರಾಷ್ಟ್ರ ರಾಜ್ಯದ ಬಾರಮತಿ ಕೃಷಿ ವಿಜ್ಞಾನ ಕೇಂದ್ರಕ್ಕೆ ನಮ್ಮ ಸಂಘಟನೆಯ 16 ರೈತರ ತಂಡ ಅಧ್ಯಯನ ನಡೆಸಿ ಬಂದಿದ್ದೇವೆ.

ರಾಜ್ಯದಲ್ಲಿ 50ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಹಣ ಪಾವತಿ ಮಾಡಿಲ್ಲ. ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಕ್ಕರೆ ನಿಯಂತ್ರಣ ಕಾಯ್ದೆ ಅನ್ವಯ ಕಂದಾಯ ವಸೂಲಿ ಬಾಕಿ. ಆರ್ ಸಿ. ನಿಯಮದಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಕ್ಕರೆ ಗೋದಾಮು ಜಪ್ತಿ ಮಾಡಿ ರೈತರ ಹಣ ಕೊಡಿಸಲಿ.
2025-26 ರಲ್ಲಿ ರಾಜ್ಯದ 80 ಸಕ್ಕರೆ ಕಾರ್ಖಾನೆಗಳು 5 ಕೋಟಿ 75 ಲಕ್ಷ ಕಬ್ಬು ನೂರಿಸಿವೆ ಈ ಬಾಬ್ತ ರೈತರಿಗೆ 3000 ಕೋಟಿ ಕಬ್ಬಿನ ಹಣ ಬಾಕಿ ಇದೆ.
ಕಬ್ಬು. ಬತ್ತ. ಜೋಳ. ಬೆಳೆಗಳಿಂದ ಯತನಾಲ್ ಉತ್ಪಾದನೆ ಮಾಡಿ ಮಾರಾಟ ಮಾಡುವ ತಂತ್ರಜ್ಞಾನ ರೈತರಿಗೆ ನೀಡಿ ಇದರಿಂದ ರೈತರಿಗೆ ಹೆಚ್ಚು ಲಾಭ ಸಿಗುತ್ತದೆ ಅಡುಗೆ ಅನಿಲ (ಗ್ಯಾಸ್)ಸಮಸ್ಯೆ ಬಗೆಹರಿಯುತ್ತದೆ.
ಯತನಾಲ್ ಬಳಕೆಯಿಂದ ಪರಿಸರ ಸಂರಕ್ಷಣೆಯಾಗುತ್ತದೆ ವಿದೇಶಿ ವಿನಿಮಯ ಉಳಿಯುತ್ತದೆ. ರೈತರ ಆದಾಯ ದುಪ್ಪಟ್ಟಾಗುತ್ತದೆ. ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಬೆಳಗಾಂಕರ್. . ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಿರೇಮಠ. ಎಸ್ ಬಿ ಸಿದ್ನಾಳ್. ರಾಜ್ಯ ಉಪಾಧ್ಯಕ್ಷ ಎನ್ ಎಚ್ ದೇವಕುಮಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್. ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ. ಬರಡನಪುರ ನಾಗರಾಜ, ಬಾಪುಗೌಡ ಬಸವನಗೌಡ ಪಾಟೀಲ್. ವೀರಣ್ಣಗೌಡ. ಶಿವಪ್ಪ ಭೈರೂಜಿ ಮತ್ತಿತರರು ಇದ್ದರು..