ಬೆಳಗಾವಿ ಜಿಲ್ಲೆ ಕೃಷಿ ಇಲಾಖೆಗೆ ಐದು ಪ್ರಶಸ್ತಿಗಳು..
ಜಲಾನಯನ ಅಭಿವೃದ್ದಿ ಕಾರ್ಯದಲ್ಲಿನ ಸಾಧನೆಗೆ ಐದು ಪ್ರಶಸ್ತಿಗಳು..
ಬೆಳಗಾವಿ : 2025 – 26ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜಲಾನಯನ ಅಭಿವೃದ್ಧಿ ಚಟುವಟಿಕೆಗಳನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸಿದಕ್ಕಾಗಿ ಬೆಳಗಾವಿ ಜಿಲ್ಲಾ ಕೃಷಿ ಇಲಾಖೆಗೆ ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಐದು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ..
ಬುಧವಾರ ದಿನಾಂಕ 22/04/2026 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗಿದ್ದು, ಬೆಳಗಾವಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಎಚ್ ಡಿ ಕೋಳೆಕರ, ಉಪ ನಿರ್ದೇಶಕರಾದ ಸಲೀಮ್ ಸಂಗತ್ರಾಸ, ಸಹದೇವ ಯರಗೋಪ್ಪ ಅವರಿಗೆ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ಉಪೇಂದ್ರ ಪ್ರಲಾಪ ಸಿಂಗ ಹಾಗೂ ನಿರ್ದೇಶಕರಾದ ಮೊಹಮ್ಮದ ಪರವೇಜ ಬಂಥನಾಳ ಅವರು ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.
1) ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ 2.0 ಕಾರ್ಯಕ್ರಮದ ಅತ್ಯುತ್ತಮ ಸಾಧನೆಗೆ ಪ್ರಥಮ ಸ್ಥಾನ,
2) ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ 2.0 ಅರಣ್ಯ ಘಟಕ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆಗೆ ಪ್ರಥಮ ಸ್ಥಾನ.
3) 2025-26ರಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಸಮಗ್ರ ಅನುಷ್ಠಾನದಲ್ಲಿ ನಿರಂತರ ಪ್ರಗತಿ ಸಾಧಿಸಿದ ಪ್ರಯುಕ್ತ ಪ್ರಥಮ ಸ್ಥಾನ.
4) ಜಲಾನಯನ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಸಮಗ್ರ ಅನುಷ್ಠಾನದಲ್ಲಿ ಬೆಳಗಾವಿ ಕಂದಾಯ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೆ ಪ್ರಥಮ ಸ್ಥಾನ..
5) 2025-26ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾರ್ಯಕ್ರಮ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆಗೆ ದ್ವಿತೀಯ ಪ್ರಶಸ್ತಿ..
ಹೀಗೆ ಐದು ವಿವಿಧ ವಿಭಾಗಗಳಲ್ಲಿ ಬೆಳಗಾವಿ ಕೃಷಿ ಇಲಾಖೆಗೆ ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಪ್ರಶಸ್ತಿಗಳು ದೊರಕಿದ್ದು ಇಲಾಖೆಯ ಸಮರ್ಥ ಕಾರ್ಯಕ್ಕೆ ನಿದರ್ಶನವಾಗಿದ್ದು, ಇಲಾಖೆಯ ಸಿಬ್ಬಂದಿಗಳ ಮೊಗದಲ್ಲಿ ಸಾಧನೆಯ ಮಂದಹಾಸ ಮೂಡಿದೆ..
ವರದಿ ಪ್ರಕಾಶ್ ಬಿ ಕೆ..