ಲೀಜ್ ಮುಗಿದ ಪಾಲಿಕೆ ಆಸ್ತಿಗಳಿಂದ ಪಾಲಿಕೆಗೆ ಹತ್ತಾರು ಕೋಟಿ ನಷ್ಟ…

ಲೀಜ್ ಮುಗಿದ ಪಾಲಿಕೆ ಆಸ್ತಿಗಳಿಂದ ಪಾಲಿಕೆಗೆ ಹತ್ತಾರು ಕೋಟಿ ನಷ್ಟ…

ಪಾಲಿಕೆಗೆ ಹಸ್ತಾಂತರ ಮಾಡದ ಲೀಜ್ ಆಸ್ತಿಗಳಿಗೆ ವಿದ್ಯುತ್ ಹಾಗೂ ನೀರು ಪೂರೈಕೆ ನಿಲ್ಲಿಸಿ..

ರವಿ ದೋತ್ರೆ, ನಗರ ಸೇವಕ ಬೆಳಗಾವಿ ಪಾಲಿಕೆ..

ಬೆಳಗಾವಿ : ಮಹಾನಗರ ಪಾಲಿಕೆಯ ಆಸ್ತಿಗಳ ಲೀಜ್ ಅವಧಿ ಮುಗಿದು ಹಲವು ವರ್ಷಗಳೇ ಆದರೂ ಅವುಗಳನ್ನು ನಾವು ಪಾಲಿಕೆಯ ವಶಕ್ಕೆ ಪಡೆದಿಲ್ಲ, ಇದರಿಂದ ಪಾಲಿಕೆಗೆ ಹತ್ತಾರು ಕೋಟಿ ಹಣ ನಷ್ಟ ಆಗುತ್ತಿದೆ, ಸುಮಾರು 78ಅಸ್ತಿಗಳು ಲೀಜಿನಲ್ಲಿ ಇದ್ದಿದ್ದು, ನ್ಯಾಯಾಲಯದ ಪ್ರಕರಣದ ಆಸ್ತಿಗಳನ್ನು ಹೊರತು ಪಡಿಸಿ ಉಳಿದವುಗಳನ್ನು ಪಾಲಿಕೆಯ ವಶಕ್ಕೆ ಪಡೆಯಿರಿ, ಇತ್ತ ಸರಿಯಾದ ಬಾಡಿಗೇಯೂ ಇಲ್ಲಾ, ಅತ್ತ ಆಸ್ತಿಯೂ ಇಲ್ಲಾ, ಎಂದರೆ ಹೇಗೆ ಎಂದು ನಗರ ಸೇವಕ ರವಿ ದೋತ್ರೆ ಅವರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ..

ಬುಧವಾರ ದಿನಾಂಕ 22/04/2026ರಂದು ಪಾಲಿಕೆಯ ಸ್ಥಾಯಿ ಸಮಿತಿ ಸಭಾಭವನದಲ್ಲಿ ನಡೆದ, ಪಾಲಿಕೆಯ ಲೆಕ್ಕಗಳ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಸಮಿತಿಯ ಸದಸ್ಯರಾದ ರವಿ ದೋತ್ರೆ ಅವರು, ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂದು ಪಾಲಿಕೆಗೆ ಕೋಟಿಗಟ್ಟಲೆ ಆದಾಯ ತರುವ ಪಾಲಿಕೆಯ ಲೀಜ್ ಆಸ್ತಿಗಳು ಬೇರೆಯವರ ಪಾಲಾಗಿವೆ, ಆದಷ್ಟು ಬೇಗ ಅವುಗಳನ್ನು ಪಾಲಿಕೆ ವಶಕ್ಕೆ ಪಡೆದುಕೊಳ್ಳಬೇಕು, ಪಡೆದುಕೊಳ್ಳುವವರೆಗೆ ಅಂತಹ ಆಸ್ತಿಗಳಿಗೆ ವಿದ್ಯುತ್ ಹಾಗೂ ನೀರು ಪೂರೈಕೆಯನ್ನು ನಿಲ್ಲಿಸಬೇಕು ಎಂದರು, ಈ ನಿರ್ಣಯವನ್ನು ಸಭೆಯ ಅಧ್ಯಕ್ಷರಾದ ಬ್ರಹ್ಮಾನಂದ ಮೀರಜಕರ ಅವರು ಸಭೆಯ ಸರ್ವಾನುಮತದಿಂದ ಅಂಗಿಕರಿಸಿದರು.

ಇನ್ನು ಪಾಲಿಕೆಯ ಬಡತನ ನಿರ್ಮೂಲನ ಕೇಂದ್ರದಿಂದ ಯಾರೇ ಸಹಾಯಧನ ಪಡೆಯಲು ಬಯಸಿದ್ದಲ್ಲಿ ಅವರು ತಮಗೆ ಸಂಬಂಧಪಟ್ಟ ನಿಗಮಗಳಿಂದ ಹಾಗೂ ಕೈಗಾರಿಕಾ ಕೇಂದ್ರದಿಂದ ಈ ಹಿಂದೆ ನಾವು ಯಾವುದೇ ಸಹಾಯದನ ಪಡೆದಿಲ್ಲ ಎಂದು ಎನ್ಓಸಿ ಪ್ರಮಾಣಪತ್ರ ಕಡ್ಡಾಯವಾಗಿ ತರಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ಅಂಗಿಕರಿಸಲಾಯಿತು.

ಇನ್ನೂ ಭೂಬಾಡಿಗೆಯನ್ನು ಈ ಹಿಂದೆ ಇರುವ ಗುತ್ತಿಗೆದಾರನಿಗೆ ಶೇಕಡಾ ಹತ್ತರಷ್ಟು ಹೆಚ್ಚಿಸಿ ಕೊಟ್ಟಿದ್ದೀರಿ, ಅಂತಹ ಕೊಡುವ ಆದೇಶ ಎಲ್ಲಿದೆ? ಬೇರೆ ಟೆಂಡರ್ ಕರೆಯಬೇಕಿತ್ತು, ಯಾಕೆ ಮತ್ತೆ ಅವರಿಗೇನೇ ನೀಡಿದ್ದು? ಹಿಂದಿನ ಆಯುಕ್ತರಿಗೆ , ಕಂದಾಯ ಉಪ ಆಯುಕ್ತರಿಗೆ ಇದರ ಬಗ್ಗೆ ತಿಳಿದಿರಲಿಲ್ಲವೇ? ಪಾಪ ರೈತರು ತಮ್ಮ ತರಕಾರಿ ತಂದು ವ್ಯಾಪಾರ ಮಾಡಿದರೆ ಅವರಿಂದ 50ರೂಪಾಯಿ ತಗೆದುಕೊಂಡರೆ ಹೇಗೆ, ಪುಟ್ ಪಾತ್ ಮೇಲಿನ ಅಂಗಡಿಯವರ ಹತ್ತಿರ ಇವರು ಬೂಬಾಡಿಗೆ ವಸೂಲಿ ಮಾಡುವರು, ಪುಟ್ ಪಾತ್ ತೆರವು ಮಾಡುವಾಗ ನಾವು ಬಾಡಿಗೆ ಕೊಡುತ್ತೇವೆ ಎಂದು ಅವರು ಹೇಳುತ್ತಾರೆ, ಹೀಗಾದರೆ ಹೇಗೆ ಎಂದರು.

ವ್ಯಾಪಾರ ವಲಯಗಳಲ್ಲಿ ಭೂಬಾಡಿಗೆ ಪಡೆಯುತ್ತಾರೆ, ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ಮಾಡಿ ಹಣ ಪಡೆಯುತ್ತಾರೆ, ಐವತ್ತು ನೂರು ರೂಪಾಯಿ ಇವರಿಗೇನೇ ನೀಡಿದರೆ ವ್ಯಾಪಾರಿಗಳು ಏನು ಪಡೆಯುವದು, ಪರಿಷತ್ ಸಭೆಯಲ್ಲಿ ಇದರ ಸಮಗ್ರ ಚರ್ಚೆಯಾಗಲಿ ಎಂದು ನಗರ ಸೇವಕ ರವಿ ದೋತ್ರೆ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿಯ ಮತ್ತೊಬ್ಬ ಸದಸ್ಯ ಮಾತನಾಡಿ ಪಾಲಿಕೆಯಲ್ಲಿ ಕೆಲಸ ಮಾಡುವ ಡಿ ದರ್ಜೆಯ ಗುತ್ತಿಗೆ ನೌಕರರ ವೇತನ ಇನ್ನೂ ಆಗಿಲ್ಲ ಏಕೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಡಿ ಗ್ರೂಪ್ ಸಿಬ್ಬಂದಿಗಳ ಸರಿಯಾದ ಹಾಜರಿ, ಪಿಎಫ್, ಇಎಸ್ಐ ಕಟ್ಟಿರುವ ಮಾಹಿತಿ, ಅವರಿಗೆ ಜಮೆ ಆದ ವೇತನದ ಮಾಹಿತಿ ಸರಿಯಾಗಿ ನೀಡಬೇಕು, ಗುತ್ತಿಗೆದಾರ ಸಿಬ್ಬಂದಿಗಳ ಬಗ್ಗೆ ಸರಿಯಾದ ಮಾಹಿತಿ ನೀಡದೇ ಇರುವಾಗ ಹೇಗೆ ವೇತನ ಬಿಡುಗಡೆ ಮಾಡಬೇಕು, ಮುಂದಿನ ತಿಂಗಳಿನಿಂದ ಸರಿಯಾದ ಮಾಹಿತಿ ನೀಡಲು ಹೇಳಿ, ಗುತ್ತಿಗೆದಾರ ಮೊದಲು ಸಿಬ್ಬಂದಿಗಳಿಗೆ ವೇತನ ನೀಡಬೇಕು, ಅದರ ಸಂಪೂರ್ಣ ಮಾಹಿತಿ ನಮಗೆ ನೀಡಬೇಕು ನಂತರ ನಮ್ಮಿಂದ ಬಿಲ್ ಮಾಡಿಸಿಕೊಳ್ಳಬೇಕು ಎಂದರು.

ಶಿವಬಸವ ನಗರದ ಆರ್ ಎನ್ ಶೆಟ್ಟಿ ಕಾಲೇಜ್ ಎದುರಿಗೆ ಪಾಲಿಕೆಯಿಂದ ನೀಡಲ್ಪಟ್ಟಿರುವ ಅಂಗಡಿಗಳ ಮಾಲೀಕರು ಪುಟ್ ಪಾತನ್ನು ಅತೀಯಾಗಿ ಒತ್ತುವರಿ ಮಾಡಿದ್ದು, ಅದರ ಬಾಡಿಗೆ ಹಾಗೂ ಅವರು ಬಳಸುತ್ತಿರುವ ಸ್ಥಳದ ಬಗ್ಗೆ ಪರಿಶೀಲನೆ ಮಾಡಿ ಬನ್ನಿ ಎಂದು ಕಂದಾಯ ಉಪ ಆಯುಕ್ತರಿಗೆ ನಗರ ಸೇವಕರು ಹೇಳಿದ್ದು, ಪರಿಶೀಲಿಸುವದಾಗಿ ಹೇಳಿದ್ದಾರೆ.

ವರದಿ ಪ್ರಕಾಶ ಬಿ ಕೆ…

Leave a Reply

Your email address will not be published. Required fields are marked *