ಮೇ 17ಕ್ಕೆ ಸ್ವಚ್ಚ ಬೆಳಗಾವಿ ಅಭಿಯಾನ..

ಮೇ 17ಕ್ಕೆ ಸ್ವಚ್ಚ ಬೆಳಗಾವಿ ಅಭಿಯಾನ..

25 ಸಾವಿರ ಜನರಿಂದ ಸ್ವಚ್ಛತಾ ಕಾರ್ಯ..

ಶಿವಾನಂದ ನೀಲಣ್ಣವರ..

ಬೆಳಗಾವಿ : ನಗರದಲ್ಲಿ ಮೇ 17ರಂದು 25 ಸಾವಿರ ಕಾರ್ಯಕರ್ತರೊಂದಿಗೆ ಸ್ವಚ್ಛ ಬೆಳಗಾವಿ ಅಭಿಯಾನವನ್ನು ನಡೆಸಲಾಗುವುದು ಎಂದು ಶಿವಂ ಅಸೋಸಿಯೇಷನ್ನಿನ ಶಿವಾನಂದ ನೀಲಣ್ಣವರ ಹೇಳಿದರು.

ಸೋಮವಾರ ಬೆಳಗಾವಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 17 ರಂದು ಸ್ವಚ್ಛ ಬೆಳಗಾವಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸ್ವಚ್ಛ ಬೆಳಗಾವಿ ಅಭಿಯಾನದ ಕಾರ್ಯದಲ್ಲಿ ಸುಮಾರು 25 ಸಾವಿರ ಜನರು ಭಾಗಿಯಾಗಿ ಬೆಳಗಾವಿ ಸಂಪೂರ್ಣ ಸ್ವಚ್ಛತೆಗೆ ಶ್ರಮಿಸಲಿದ್ದಾರೆ. ಬೆಳಿಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆ ಸ್ವಚ್ಛತಾ ಅಭಿಯಾನ ನಡೆಯಲಿದೆ.

ಮಧ್ಯಾಹ್ನದ ನಂತರ 25 ಸಾವಿರ ಕಾರ್ಯಕರ್ತರಿಗೆ ಭೋಜನದ ವ್ಯವಸ್ಥೆ ಏರ್ಪಡಿಸಲಾಗಿದೆ. ರಾತ್ರಿ ನಗರದ ಸರ್ದಾ‌ರ್ ಮೈದಾನದಲ್ಲಿ ಮನೋರಂಜನ ಕಾರ್ಯಕ್ರಮದ ಜೊತೆಗೆ ಭೋಜನದ ಕೂಟವನ್ನು ಏರ್ಪಡಿಸಲಾಗಿದೆ. ಬೆಳಗಾವಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ನಗರದ ಸೇರಿದಂತೆ ಜಿಲ್ಲೆಯಿಂದ ಜನತೆಯು ಭಾಗಿ ಯಾಗಲಿದ್ದಾರೆ ಎಂದು ಶಿವಂ ಅಸೋಸಿಯೇಷನ್ ನ ಸಂಸ್ಥಾಪಕ ಶಿವಾನಂದ ನೀಲಣ್ಣವರ ತಿಳಿಸಿದರು.

ಈ ವೇಳೆ ಮಂಜುನಾಥ್ ಗಡ್ಡೆ, ಶಿವಾನಂದ್ ನೀಲಣ್ಣವರ, ಸೇರಿದಂತೆ ಹಲವರು ಇದ್ದರು.