ಮಹಾನಗರ ಪಾಲಿಕೆಯಿಂದ ಮತ್ತೆ ಆರು ಅಧಿಕಾರಿಗಳ ವರ್ಗಾವಣೆ..
ಪಾಲಿಕೆಯಲ್ಲಿ ಅಧಿಕಾವಧಿಯಿಂದ ಇರುವ ಅಧಿಕಾರಿಗಳಿಗೆ ಮಾತೃ ಇಲಾಖೆಯ ಬುಲಾವ್..
ಬೆಳಗಾವಿ : 2026 27ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗಳು ಚಾಲ್ತಿಯಲ್ಲಿ ಇರುವದರಿಂದ ಬೆಳಗಾವಿ ಮಹಾನಗರ ಪಾಲಿಕೆಗಳಲ್ಲಿ ಅಧಿಕಾವಧಿಯಿಂದ, ಇತರ ಇಲಾಖೆಗಳಿಂದ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಆರು ಅಧಿಕಾರಿಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ದೃಷ್ಟಿಯಿಂದ ಅವರ ಮಾತೃ ಇಲಾಖೆಗೆ ವರ್ಗಾವಣೆಗೊಳಿಸಿ, ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ ಇವರು ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ, ಉದಯಕುಮಾರ ತಳವಾರ, (ಉಪ ಆಯುಕ್ತರು ಆಡಳಿತ) ಹನಮಂತ ಕಲಾದಗಿ, (ಪರಿಸರ ಅಭಿಯಂತರರು) ಪ್ರಿಯಾಂಕಾ ವಿನಾಯಕ್ (ಪರಿಸರ ಅಭಿಯಂತರರು), ಪ್ರವೀಣ್ ಕುಮಾರ ಖಿಲಾರಿ, (ಪರಿಸರ ಅಭಿಯಂತರರು) ಆದಿಲಖಾನ ಪಠಾಣ, ಡಿ ಜಿ ಕೋರಿ, (ತಹಶೀಲ್ದಾರ ಗ್ರೇಡ್ 1) ಇವರನ್ನು ತಮ್ಮ ಮಾತೃ ಇಲಾಖೆಗೆ ಹಿಂದೂರಿಗಿಸಿಕೊಂಡು ಆದೇಶ ಮಾಡಲಾಗಿದೆ.
ಸದರಿ ಅಧಿಕಾರಿಗಳು ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯಿಂದ ಕೂಡಲೇ ಬಿಡುಗಡೆಗೊಂಡು, ಮಾತೃ ಇಲಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳಬೇಕೆಂದು ಆದೇಶದಲ್ಲಿ ಸೂಚಿಸಿದೆ..
ವರದಿ ಪ್ರಕಾಶ್ ಬಿ ಕೆ..