ಬೆಳಗಾವಿಗೆ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ ನಾಗರಾಜ ಆಗಮನ..

ಬೆಳಗಾವಿಗೆ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ ನಾಗರಾಜ ಆಗಮನ..

ಪಾಲಿಕೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮಕ್ಕೆ ಸಿದ್ಧತೆ..

ಬೆಳಗಾವಿ : ಕನ್ನಡ ಪರವಾದ ನಾಡಿನ ಅತ್ಯಂತ ಹಿರಿಯ ಹೋರಾಟಗಾರರಾದ ವಾಟಾಳ ನಾಗರಾಜ, ಸ ರಾ ಗೋವಿಂದು ಹಾಗೂ ಕೆ ಆರ್ ಕುಮಾರ ಅವರು ಇದೇ ಮಂಗಳವಾರ ದಿನಾಂಕ 26ರಂದು ಬೆಳಗಾವಿಗೆ ಆಗಮಿಸಲಿದ್ದು, ಪಾಲಿಕೆಯಲ್ಲಿ ಕನ್ನಡ ಪರವಾದ ಗೊತ್ತುವಳಿಯನ್ನು ಅಂಗೀಕರಿಸುವ ಸಲುವಾಗಿ ಪಾಲಿಕೆಯನ್ನು ಮುತ್ತಿಗೆ ಹಾಕುವ ಕಾರ್ಯಕ್ರಮ ಇದೆ ಎಂದು ಬೆಳಗಾವಿಯ ಕನ್ನಡ ಕ್ರಿಯಾ ಸಮಿತಿ ಮುಖಂಡರು ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಧಿಕಾರದ ಸದಸ್ಯರಾದ ಅಶೋಕ ಚಂದರಗಿ ಅವರು ಹೇಳಿದ್ದಾರೆ.

ರವಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ಹಿರಿಯ ಹೋರಾಟಗಾರರು ಇಲ್ಲಿ ಬೆಳಗಾವಿಗೆ ಬಂದು ಮೊದಲಿಗೆ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಇರುವ ಹಲ್ಮಿಡಿ ಶಾಸನಕ್ಕೆ ಪೂಜೆ ಸಲ್ಲಿಸುವರು, ನಂತರ ಬೆಳಗಾವಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಇದೆ ಎಂದಿದ್ದಾರೆ.

ಇದಕ್ಕೆ ಸ್ಥಳೀಯ ಕನ್ನಡಪರ ಸಂಘಟನೆಗಳಾದ ನಮ್ಮ ಸಂಪೂರ್ಣ ಬೆಂಬಲ ಇದ್ದು, “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಪಾಲಿಕೆಯಲ್ಲಿ ಗೊತ್ತುವಳಿ ನಿರ್ಣಾಯ ಮಾಡುವ ಹೋರಾಟದ” ಮತ್ತೊಂದು ಮಜಲು. ಈಗಲಾದರೂ ಪಾಲಿಕೆಯಲ್ಲಿ ಅಧಿಕಾರ ಇರುವ ಬಿಜೆಪಿ ಪಕ್ಷ, ಸಾಮಾನ್ಯ ಸಭೆಯನ್ನು ಕರೆದು ಕನ್ನಡಪರ ಗೊತ್ತುವಳಿಯನ್ನು ಅಂಗಿಕರಿಸಿ, ಈ ವಿಷಯವನ್ನು ಸುಕಾಂತ್ಯಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಮಹಾದೇವ ತಳವಾರ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷರಾದ ಬಲರಾಮ ಮಾಸೆನಟ್ಟಿ, ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ಶ್ರೀನಿವಾಸ ತಾಲೂಕರ, ಮಲ್ಲಪ್ಪ ಗುಡಗೇನಟ್ಟಿ, ಈಶ್ವರಗೌಡ ಪಾಟೀಲ್, ಬಾಳಪ್ಪ ಗುಡಗನಟ್ಟಿ, ಶಿವರೆಡ್ಡಿ ಹುಚ್ಚರೆಡ್ಡಿ, ಇರ್ಫಾನ್ ಅತ್ತಾರ, ಠಾಜು ಕೋಲಾ, ಶಿವಾನಂದ ಸಮ್ಮಕ್ಕನವರ, ಸಾಗರ್ ಬೋರಗಲ್ಲ, ಬಸು ತುಬಾಕಿ, ಶರೀಫ ಸನದಿ, ಸಿದ್ದಲಿಂಗಪ್ಪ ಸುನಕುಪ್ಪಿ, ರೋಹಿತ್ ಪದ್ಮಣ್ಣವರ ಮುಂತಾದವರು ಇದ್ದರು..

Leave a Reply

Your email address will not be published. Required fields are marked *