ಕ.ರಾ.ಸ.ನೌಕರರ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆ..

ಕ.ರಾ.ಸ.ನೌಕರರ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆ..

ಪಾಲಿಕೆ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ ಟೆನಿಸನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ..

ಪಾಲಿಕೆಯ ಹತ್ತು ಹಲವು ಜವಾಬ್ದಾರಿಗಳ ಜೊತೆಗೆ ಸಾಧನೆಗೈದ ಸಾಹಸಿ..

ಬೆಳಗಾವಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತವಾಗಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ ಅವರು ಟೆನ್ನಿಸ್ ಕ್ರೀಡೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪಾಲಿಕೆಯಲ್ಲಿ ಕಂದಾಯ ವಿಭಾಗ, ಪರಿಷತ್ ವಿಭಾಗ, ಜನಗಣತಿ ವಿಭಾಗ, ಚುನಾವಣಾ ವಿಭಾಗ, ಕೆಲ ಸಲ ಆಡಳಿತ ವಿಭಾಗದ ಹೀಗೆ ಪಾಲಿಕೆಯ ಹಲವು ಶಾಖೆಗಳ ಅಧಿಕಾರಿಯಾಗಿ, ಸಕಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ, ರಾಜ್ಯ ಮಟ್ಟದ ಕ್ರೀಡೆಯಲ್ಲಿಯೂ ಇಂತಹ ಸಾಧನೆ ಮಾಡಿರುವದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ವಿಶೇಷ ವ್ಯಕ್ತಿತ್ವ ಉಳಿದ ಸಿಬ್ಬಂದಿಗಳಿಗೆ ಮಾದರಿಯಾಗಿದೆ.

ಈ ಸಾಧನೆಗೆ ಭಾಜನರಾಗಿರುವ ಡಾ. ಸಿದ್ದು ಹುಲ್ಲೋಳಿ ಅವರನ್ನು ಮಹಾನಗರ ಪಾಲಿಕೆಯ ಮೇಯರ ಪ್ರೀತಿ ಕಾಮಕರ, ಉಪಮೇಯರ ಹಣಮಂತ ಕೊಂಗಾಲಿ ಹಾಗೂ ನಗರಸೇವಕರು, ಆಯುಕ್ತ ಕಾರ್ತಿಕ ಎಂ ಹಾಗೂ ಸಿಬ್ಬಂದಿವರ್ಗ
ಸನ್ಮಾನಿಸಿ, ಗೌರವಿಸಿ ಅಭಿನಂದಿಸಿದ್ದಾರೆ.

ವರದಿ ಪ್ರಕಾಶ ಬಿ ಕೆ..

Leave a Reply

Your email address will not be published. Required fields are marked *