ಆರ್ಪಿಡಿ ವೃತ್ತ ಪ್ರದೇಶದ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು..
ಶಾಸಕ ಅಭಯ ಪಾಟೀಲ್..
ಬೆಳಗಾವಿ : ಮಂಗಳವಾರ ಶಾಸಕ ಅಭಯ ಪಾಟೀಲ್ ಹಾಗೂ ನಗರ ಸೇವಕ ನಿತಿನ್ ಜಾದವ ಅವರು ಜೊತೆಯಾಗಿ ಆರ್ಪಿಡಿ ಕ್ರಾಸ್ ಬಳಿಯ ಪ್ರದೇಶಕ್ಕೆ ಬೇಟಿ ನೀಡಿ, ಒಳಚರಂಡಿ ವ್ಯವಸ್ಥೆಯ ಸಮಸ್ಯೆಯನ್ನು ಪರಿಶೀಲನೆ ಮಾಡಿದ್ದಾರೆ.
ಈ ವೇಳೆ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದು, ಅಧಿಕಾರಿಗಳ ಮುಂದೆ ಸ್ಥಳೀಯ ಒಳಚರಂಡಿ ವ್ಯವಸ್ಥೆಯ ಸಮಸ್ಯೆಯ ಕುರಿತು ಶಾಸಕರು ಹೇಳಿದ್ದಾರೆ.
ಕಳೆದ ಹಲವಾರು ತಿಂಗಳುಗಳಿಂದ ಆರ್‌ಪಿಡಿ ಕ್ರಾಸ್ ಬಳಿಯ ಒಳಚರಂಡಿ ಬ್ಲಾಕ್ ಆಗಿರುವುದರಿಂದ ಇಲ್ಲಿ ಪ್ರತಿನಿತ್ಯ ಸಂಚರಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆ ಆಗಿತ್ತು, ಸ್ಥಳೀಯ ನಾಗರಿಕರೂ ಕೂಡ ಇದರಿಂದ ತುಂಬಾ ಬೇಸತ್ತು ಹೋಗಿದ್ದರು.
ಈ ಗಂಭೀರ ಸಮಸ್ಯೆಯ ವಿಷಯ ಗಮನಕ್ಕೆ ಬಂದ ನಂತರ ಬೆಳಗಾವಿ ದಕ್ಷಿಣದ ಶಾಸಕ ಅಭಯ್ ಪಾಟೀಲ್ ಅವರು ಅಧಿಕಾರಿಗಳನ್ನು ತಕ್ಷಣ ಕರೆದು ಸಮಸ್ಯೆಯನ್ನು ಆದಷ್ಟು ಬೇಗ ಶಾಶ್ವತ ರೀತಿಯಲ್ಲಿ ಪರಿಹಾರ ಮಾಡಬೇಕೆಂದು ಸೂಚನೆ ನೀಡಿದರು.

ಇನ್ನು ಮುಂದೆ ಸ್ಥಳೀಯರ ಯಾವುದೇ ಸಮಸ್ಯೆ ಇದ್ದರೂ ಆದಷ್ಟು ಬೇಗ ಅವುಗಳ ಪರಿಹಾರ ಆಗಬೇಕು, ನಾಗರಿಕರಿಗೆ ಉತ್ತಮ ಸೌಲಭ್ಯ ನೀಡುವತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ಪ್ರಯತ್ನ ಇರಬೇಕು ಎಂದರು..
ವರದಿ ಪ್ರಕಾಶ್ ಬಿ ಕೆ..