ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿ ಕೋರಿ ಅವರಿಗೆ ವರ್ಗಾವಣೆ…

ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿ ಕೋರಿ ಅವರಿಗೆ ವರ್ಗಾವಣೆ…

ಶಾಂತಮೂರ್ತಿ ಕೊರಿಯವರಿಗೆ ಸಿಬ್ಬಂದಿಗಳಿಂದ ಭಾವನಾತ್ಮಕ ಬೀಳ್ಕೊಡುಗೆ..

ಬೆಳಗಾವಿ : ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಯಾದ ಧರ್ಮನಾಥ ಕೋರಿ ಅವರು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ (ಆಗಾಗ ಆ ಕಡೆ, ಈ ಕಡೆ ವರ್ಗಾವಣೆ ಆಗುತ್ತಾ) ವಿವಿಧ ವಿಭಾಗಗಳಲ್ಲಿ ಸಮರ್ಥವಾಗಿ ಸೇವೆ ಮಾಡುತ್ತಿದ್ದು, ಕಳೆದ ಕೆಲ ದಿನಗಳ ಹಿಂದೆ ತಮ್ಮ ಮಾತೃ ಇಲಾಖೆಯಾದ ಕಂದಾಯ ಇಲಾಖೆಗೆ ವರ್ಗಾವಣೆ ಆಗಿದ್ದು, ಇಂದು ಪಾಲಿಕೆಯ ಕಂದಾಯ ಹಾಗೂ ಇತರ ವಿಭಾಗಗಳ ಸಿಬ್ಬಂದಿಗಳು ಅವರನ್ನು ಆತ್ಮೀಯವಾಗಿ ಗೌರವಿಸಿ, ಸತ್ಕರಿಸಿ ಬೀಳ್ಕೊಟ್ಟಿದ್ದಾರೆ..

ಗುರುವಾರ ನಗರದ ಗೋವಾವೇಸ ನಲ್ಲಿರುವ ಪಾಲಿಕೆಯ ದಕ್ಷಿಣದ ಕಂದಾಯ ವಿಭಾಗದಲ್ಲಿ ಬೀಳ್ಕೊಡುವ ಕಾರ್ಯಕ್ರಮ ಮಾಡಿದ್ದು, ಸ್ಥಳೀಯ ಕೆಲ ನಗರ ಸೇವಕರು ಹಾಗೂ ಪಾಲಿಕೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕೋರಿಯವರ ಸರಳ ಸ್ವಭಾವ ಹಾಗೂ ಜನರ ಪರವಾಗಿ ಅವರು ಮಾಡಿದ ಸೇವೆಯನ್ನು ನೆನೆದು, ಅಂತಹ ಅಧಿಕಾರಿಗಳು ನಮ್ಮ ಪಾಲಿಕೆಗೆ ಇನ್ನಷ್ಟು ದಿನ ಬೇಕಿತ್ತು ಎಂದು ಅವರ ಗುಣಗಾನ ಮಾಡಿದ್ದಾರೆ.

2001ರ ಅಕ್ಟೋಬರ್ ನಲ್ಲಿ ಕಚೇರಿ ಸಹಾಯಕರಾಗಿ ಸಾಮಾನ್ಯ ಆಡಳಿತ ವಿಭಾಗದಲ್ಲಿ ಕೆಲಸ ಶುರು ಮಾಡಿದ ಕೋರಿ ಅವರು ನಂತರ 2023ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ, ಮತ್ತೆ ಬೆಳಗಾವಿಗೆ ನಂತರ ಗುಲ್ಬರ್ಗ ಹೀಗೆ ವರ್ಗಾವಣೆಗಳು ಆಗಿ, ಮತ್ತೆ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಲು ಬಂದು 2023ರಲ್ಲಿ ಪಾಲಿಕೆಯ ದಕ್ಷಿಣ ವಿಭಾಗದ ಕಂದಾಯ ಅಧಿಕಾರಿಯಾದರು, ಈ ವೇಳೆ ಆಸ್ತಿ ತೆರಿಗೆ ಹೆಚ್ಚಿಸುವ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು,

ಕಂದಾಯ ವಿಭಾಗದ ಜವಾಬ್ದಾರಿ ಕಾರ್ಯದ ಜೊತೆಜೊತೆಗೆ ಚುನಾವಣಾ ಕಾರ್ಯ, ಜನಗಣತಿ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದ್ದು, ಇತ್ತೀಚಿಗೆ ದಕ್ಷಿಣದ ವಲಯ ಆಯುಕ್ತರಾಗಿಯೂ ಸಹ ಉತ್ತಮ ಕೆಲಸ ಮಾಡುತ್ತಾ ಸ್ವಲ್ಪ ಎಡವಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳು, ಸಹ ಸಿಬ್ಬಂದಿಗಳು, ಸಾರ್ವಜನಿಕರು ಎಲ್ಲರೂ ಮೆಚ್ಚುವಂತಹ ಕೆಲಸ ಮಾಡುತ್ತಾ, ಯಾವುದಕ್ಕೂ ಅಪೇಕ್ಷೆ ಪಡದೆ ಸಮಾಧಾನವಾಗಿಯೇ ಕೆಲಸ ಮಾಡಿಕೊಂಡು ಹೋಗಿದ್ದ ಶಾಂತಮೂರ್ತಿ ಕೊರಿಯವರಿಗೆ ಇಂದು ಸಿಬ್ಬಂದಿಗಳಿಂದ ಭಾವನಾತ್ಮಕ ಬೀಳ್ಕೊಡುಗೆ ಜರುಗಿದೆ..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *