ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯ ಚುನಾವಣೆ..
ನಾಲ್ಕು ಅಧ್ಯಕ್ಷ ಸ್ಥಾನಗಳ ಮೇಲೆ ಯಾರೆಲ್ಲರ ಕಣ್ಣಿದೆ??
ಉತ್ತರ ಹಾಗೂ ದಕ್ಷಿಣಕ್ಕೆ ಎಷ್ಟೆಷ್ಟು ಸ್ಥಾನ??
ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆಯು ದಿನಾಂಕ 12/08/2025 ರಂದು ನಡೆಯುತ್ತಿದ್ದು, ಒಂದು ಸಮಿತಿಗೆ ತಲಾ 7 ಸದಸ್ಯರಂತೆ ನಾಲ್ಕು ಸಮಿತಿಗಳಿಗೆ 28 ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಸದ್ಯ ಸದಸ್ಯರಾಗಿ ನಂತರ ಅಧ್ಯಕ್ಷ ಪಟ್ಟಕ್ಕೆ ನಗರ ಸೇವಕರ ತೀವ್ರ ಪೈಪೋಟಿ ಶುರುವಾಗಿದ್ದು, ಸಮಿತಿಗಳ ಸದಸ್ಯರ ಹುದ್ದೆಗಳು ಯಾರಿಗೆ ಸಿಗಲಿವೆ ಎಂಬ ಕುತೂಹಲ ದಟ್ಟವಾಗಿದೆ.
ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ,
ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ಹಾಗೂ ಲೆಕ್ಕಗಳ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ನೆಡೆಯುತ್ತಿದ್ದು, ದಕ್ಷಿಣ ಹಾಗೂ ಉತ್ತರ ಭಾಗದ ಹಲವಾರು ನಗರ ಸೇವಕರು ಸದಸ್ಯ ಸ್ಥಾನಕ್ಕೆ ಆಕಾಕ್ಷಿಗಳಾಗಿದ್ದು ಇವರ ಮಧ್ಯ ತೀವ್ರ ಪೈಪೋಟಿ ಶುರುವಾಗಿದೆ.

ಒಂದು ಸಮೀತಿಗೆ ಆಡಳಿತ ಪಕ್ಷದಿಂದ ಐದು ಸದಸ್ಯರು ಹಾಗೂ ವಿರೋಧ ಪಕ್ಷದಿಂದ ಎರಡು ಸದಸ್ಯರ ಆಯ್ಕೆ ನಡೆಯುತ್ತಿದ್ದು, ಮುಂಜಾನೆ 10 ರಿಂದ ಮದ್ಯಾಹ್ನ 12ರ ವರೆಗೆ ನಾಮಪತ್ರ ಪಡೆದು, ತುಂಬಿಕೊಡುವ ಕಾಲಾವಾಕಾಶ ಇದ್ದಿದ್ದು, ಮಧ್ಯಾಹ್ನ 3 ಗಂಟೆಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಸ್ಥಾಯಿ ಸಮಿತಿಗಳ ಸದಸ್ಯರ ಸ್ಥಾನಕ್ಕೆ ಆಡಳಿತ ಪಕ್ಷದಿಂದ ಶ್ರೀಶೈಲ ನಾಕಾಡಿ, ರೂಪಾ ಚಿಕ್ಕಲದಿನ್ನಿ, ಸಂದೀಪ ಜಿರಗ್ಯಾಳ, ಪ್ರಿಯಾ ಸಾತಗೌಡ, ರಾಜು ಬಾತಕಾಂಡೆ, ಶ್ರೀಶೈಲ ಕಾಂಬಳೆ, ಜಯಂತ ಜಾಧವ, ಗಿರೀಶ ದೊಂಗಡಿ, ನೇತ್ರಾವತಿ ಭಾಗವತ, ಸಾರಿಕಾ ಪಾಟೀಲ, ಮಾಧವಿ ರಾಘೋಚೆ, ರೇಷ್ಮಾ ಕಾಮಕರ, ಸವಿತಾ ಪಾಟೀಲ ಇನ್ನಿತರರು ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ವಿರೋಧ ಪಕ್ಷದಿಂದ ಬಸವರಾಜ ಮುತಗೇಕರ, ಮೋದಿನಸಾಬ ಮತವಾಲೆ, ಶಾಹಿದಖಾನ್ ಪಠಾನ, ಶಮುದ್ದಿನ ಪಠಾನ, ಶಿವಾಜಿ ಮಂಡೋಲಕರ, ಅಪ್ರೂಜ್ ಮುಲ್ಲಾ, ಖುರ್ಶಿದ ಮುಲ್ಲಾ, ಲಕ್ಷ್ಮಿ ಲೋಕುರೆ ಮತ್ತಿತರರು ಸದಸ್ಯ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದಾರೆ.

28ಜನ ಸದಸ್ಯರ ಆಯ್ಕೆಯ ನಂತರ ಮುಂದೆ ಅಧ್ಯಕ್ಷರ ಪಟ್ಟಕ್ಕಾಗಿ ತೀವ್ರ ಲಾಭಿ ಶುರುವಾಗಲಿದ್ದು, ಅದರಲ್ಲೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ, ಉತ್ತರದಿಂದ ಸಂದೀಪ್ ಜಿರಗ್ಯಾಳ, ಶ್ರೇಯಸ್ ನಾಕಾಡಿ, ರೂಪಾ ಚಿಕ್ಕಲದಿನ್ನಿ ಆಕಾಂಕ್ಷಿಗಳಾದರೆ, ದಕ್ಷಿಣದಿಂದ ದೀಪಾಲಿ ಟೋಪಗಿ, ರಮೇಶ ಮೈಲಾಗೋಳ, ಸಾರಿಕಾ ಪಾಟೀಲ, ರಾಜು ಬಾಕಾಂಡೆ ಇನ್ನಿತರರು ಆಕಾಂಕ್ಷಿಗಳಾಗಿದ್ದಾರೆ.
ವರದಿ ಪ್ರಕಾಶ್ ಬಿ ಕೆ.