ಡಾ.ರವಿ ಪಾಟೀಲ ಆರ್ಥೋ, ನ್ಯೂರೋ ಕೇರ್ ಸೆಂಟರ್ ನಲ್ಲಿ ನೂತನ ನೆಪ್ರೋ ಯುರೋಲಜಿ ಘಟಕ ಉದ್ಘಾಟನೆ..
ರೋಗಿಗಳ ಅನುಕೂಲಕ್ಕೆ ಕೇವಲ 500ರೂಪಾಯಿಗೆ ಡಯಾಲಿಸಿಸ್ ಸೇವೆ..
ಡಾ ರವಿ ಪಾಟೀಲ, ನಿರ್ದೇಶಕರು, ಓಎನಸಿಸಿ ಬೆಳಗಾವಿ..
ಬೆಳಗಾವಿ : ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಡಾ. ಡಾ. ರವಿ ಪಾಟೀಲ ಅವರು ಆರೋಗ್ಯ ಸಂಸ್ಥೆಯ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ,
ಇಲ್ಲಿನ ಸಾಂಬ್ರಾ ಏರ್ ಪೋರ್ಟ್ ರಸ್ತೆಯಲ್ಲಿನ ಡಾ.ರವಿ ಪಾಟೀಲ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೆಪ್ರೋ-ಯುರಾಲಜಿ ಘಟಕ ರವಿವಾರ ಲೋಕಾರ್ಪಣೆಗೊಂಡಿತು.
ನೆಪ್ರೋ ಯುರೋಲಜಿ ಘಟಕದ ಉದ್ಘಾಟನೆ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಓಎನ್ಸಿಸಿಯ ನಿರ್ದೇಶಕರಾದ ಡಾ ರವಿ ಪಾಟೀಲ ಅವರು, ಈ ಆಸ್ಪತ್ರೆಯಲ್ಲಿ ಸದ್ಯ ಎಲ್ಲಾ ರೀತಿಯ ಕಾಯಿಲೆಗಳಿಗೆ ಒಂದೇ ಸೂರಿನಡಿ ಅತ್ಯಾಧುನಿಕ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಅದರಲ್ಲಿಯೂ ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ಉಚಿತ ಕನ್ಸಲೇಷನ್ ಸೌಲಭ್ಯವನ್ನು ನೀಡಲಾಗುತ್ತದೆ. ಜೊತೆಗೆ, ರೋಗಿಗಳಿಗೆ ಅನುಕೂಲವಾಗುವಂತೆ ಸಬ್ಸಿಡಿ ದರದಲ್ಲಿ ಕೇವಲ 500 ರೂ.ಗಳಿಗೆ ಡಯಾಲಿಸಿಸ್ ಸೇವೆಯನ್ನು ಒದಗಿಸಲಾಗುತ್ತಿದೆ ಎಂದರು.

ಈ ಸೇವೆಯು ದಿನದ 24 ಗಂಟೆಗಳ ಕಾಲ ಲಭ್ಯವಿರುತ್ತದೆ. ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಡಯಾಲಿಸಿಸ್ ಅಗತ್ಯವಿರುವ ಪ್ರತಿಯೊಬ್ಬ ರೋಗಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ.
ಈ ಆಸ್ಪತ್ರೆಯಲ್ಲಿ ನೆಫ್ರಾಲಜಿಸ್ಟ್, ಯುರಾಲಜಿಸ್ಟ್, ನ್ಯೂರೋಸರ್ಜನ್, ಪ್ಲಾಸ್ಟಿಕ್ ಸರ್ಜನ್. ಫಿಸಿಷಿಯನ್ ಹಾಗೂ ಜನರಲ್ ಸರ್ಜನ್ಗಳು ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರ ಸೇವೆ ಲಭ್ಯವಿದೆ.

ಅದೇ ರೀತಿ, ಅನುಭವಿ ನರ್ಸಿಂಗ್ ಸಿಬ್ಬಂದಿ, ತರಬೇತಿ ಪಡೆದ ಡಯಾಲಿಸಿಸ್ ಟೆಕ್ನಾಲಜಿಸ್ಟ್ಗಳು ಸುಸಜ್ಜಿತ ಐಸಿಯು ಘಟಕ ಹಾಗೂ ಆಪರೇಷನ್ ಥಿಯೇಟರ್ ಸೇರಿದಂತೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಒಂದೇ ಸೂರಿನಡಿ ಲಭ್ಯವಿರುತ್ತವೆ.
ಭಾರತದಲ್ಲಿ ಪ್ರತಿವರ್ಷ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಹೊಸ ಕಿಡ್ನಿ ಫೇಲಿಯರ್ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಇದರ ಪರಿಣಾಮವಾಗಿ, ದೇಶದಲ್ಲಿ ಪ್ರತಿವರ್ಷ ಸುಮಾರು ಮೂರುವರೆ ಕೋಟಿಗೂ ಅಧಿಕ ಡಯಾಲಿಸಿಸ್ ಸೆಷನ್ಗಳ ಅಗತ್ಯ ಉಂಟಾಗುತ್ತಿದೆ.
ಇಷ್ಟು ದೊಡ್ಡ ಸಂಖ್ಯೆಯ ರೋಗಿಗಳಿಗೆ ನಿರಂತರವಾಗಿ ಡಯಾಲಿಸಿಸ್ ಸೇವೆ ಅಗತ್ಯವಿರುವುದರಿಂದ, ಗುಣಮಟ್ಟದ ಹಾಗೂ ಕೈಗೆಟುಕುವ ದರದಲ್ಲಿ ಡಯಾಲಿಸಿಸ್ ಸೌಲಭ್ಯಗಳನ್ನು ಒದಗಿಸುವುದು ಇಂದಿನ ಅತ್ಯಂತ ಪ್ರಮುಖ ಅಗತ್ಯವಾಗಿದೆ ಎಂದಿದ್ದಾರೆ.