ಪಾಲಿಕೆಯಲ್ಲಿ ಇಇ ಸುರೇಶ ಮೂರ್ತಣ್ಣವರರ ಸೇವಾ ವಯೋನಿವೃತ್ತಿ ಕಾರ್ಯಕ್ರಮ..

ಪಾಲಿಕೆಯಲ್ಲಿ ಇಇ ಸುರೇಶ ಮೂರ್ತಣ್ಣವರರ ಸೇವಾ ವಯೋನಿವೃತ್ತಿ ಕಾರ್ಯಕ್ರಮ..

ಸರ್ಕಾರದ ಕೆಲಸ ದೇವರ ಕೆಲಸ ಎಂದು ಸೇವೆಗೈದ ಒಳ್ಳೆಯ ಅಧಿಕಾರಿ..

ಹನಮಂತ ಕೊಂಗಾಲಿ, ಉಪ ಮಹಾಪೌರ.

ಪಾಲಿಕೆಯ ಒತ್ತಡದ ಸ್ಥಿತಿಯಲ್ಲಿ 30 ವರ್ಷ ಸೇವೆ ಸಾಧರಣವಲ್ಲ..

ಆಯುಕ್ತ ಕಾರ್ತಿಕ ಎಂ..

ಬೆಳಗಾವಿ : ಇಂದು ತಮ್ಮ ಸೇವೆಯಿಂದ ವಯೋನಿವೃತ್ತಿ ಪಡೆಯುತ್ತಿರುವ ಸುರೇಶ ಮುರ್ತೆನ್ನವರ ಅವರು ಸರಳ ಸ್ವಭಾವದ ಒಳೆಯ ಅಧಿಕಾರಿ, ಎಂತಹ ಗಂಭೀರ ವಿಷಯ ಇದ್ದರೂ, ಎಂತಹ ದೊಡ್ಡ ವ್ಯಕ್ತಿಗಳು ಎದುರು ಇದ್ದರೂ, ಅಂತವರ ಮನವೊಲಿಸಿ ತಮ್ಮ ವಿಭಾಗದ ಕೆಲಸ ಮಾಡಿಸಿಕೊಂಡು ಬರುವ ಶಾಂತ ಸ್ವಭಾವದ ಸಮರ್ಥ ಅಧಿಕಾರಿ ಯಾರೆಂದರೆ ಅದು ನಮ್ಮ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರು ಆದ ಸುರೇಶ ಮುರ್ತೆನ್ನವರ ಎಂದು ಪಾಲಿಕೆಯ ಉಪ ಮಹಾಪೌರ ಹನಮಂತ ಕೊಂಗಾಲಿ ಹೇಳಿದ್ದಾರೆ.

ಸೋಮವಾರ ಪಾಲಿಕೆಯ ಪರಿಷತ್ ಸಭಾಭವನದಲ್ಲಿ ಪಾಲಿಕೆಯ ನೌಕರರ ಕ್ಷೇಮಭಿವೃದ್ಧಿ ಸಂಘದಿಂದ ಆಯೋಜನೆಗೊಂಡ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರ ಸುರೇಶ ಮೂರ್ತಣ್ಣವರ ಹಾಗೂ ದಪೆದಾರ ಲಕ್ಷ್ಮಣ ತ್ಯಾನಗೇಕರ ಅವರ ವಯೋ ಸೇವಾನಿವೃತ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈಗ ಮೂರು ವರ್ಷದಲ್ಲಿ ನಾವು ಎಷ್ಟೇ ಸಿಟ್ಟು ಮಾಡಿದರೂ, ಅವರು ಶಾಂತರಾಗಿ ನಮ್ಮ ಮನವೊಲಿಸಿ ಕೆಲಸ ಮಾಡುವ ಸ್ವಭಾವ ಎಲ್ಲರಿಗೂ ಇಷ್ಟ ಆಗಿತ್ತು. ಅದೇರೀತಿ “ಸರ್ಕಾರದ ಕೆಲಸ ದೇವರ ಕೆಲಸ” ಎಂದು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಅವರು ಅವರ ನಿವೃತ್ತಿ ಬದುಕು ಸುಖವಾಗಿರಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್ ಪ್ರೀತಿ ಕಾಮಕರ ಅವರು, ಇಂದು ನಮ್ಮ ಪಾಲಿಕೆಯ ಒಬ್ಬ ಹಿರಿಯ ಉತ್ತಮ ಅಧಿಕಾರಿ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ, ಪಾಲಿಕೆಗೆ ಇಂತಹ ಅಧಿಕಾರಿಗಳು ಬೇಕು, ಈ ಅಧಿಕಾರಿ ಅವರ ಸಾಧನೆಯಲ್ಲಿ ಅವರ ಮನೆಯವರ ಕೊಡುಗೆ ಕೂಡಾ ಅಪಾರವಾಗಿದೆ, ಅವರಿಗೂ ನಾವು ಧನ್ಯವಾದ ಹೇಳುತ್ತೇವೆ, ಒಂದು ಫೋನ್ ಮಾಡಿದರೆ ಸಾಕು ಉತ್ತಮ ಸ್ಪಂದನೆ ನೀಡಿ ಕೆಲಸ ಮಾಡುತ್ತಿದ್ದರು, ಮುಂದಿನ ಅವರ ಜೀವನ ಸುಖಕರವಾಗಿರಲಿ ಎಂದರು.

ಇದಕ್ಕೂ ಮೊದಲು ಪಾಲಿಕೆ ಉಪ ಆಯುಕ್ತ (ಕಂದಾಯ) ಡಾ ಸಿದ್ದು ಹುಲ್ಲೋಳ್ಳಿ ಅವರು ಮಾತನಾಡಿ ನಾವೆಲ್ಲರೂ ಒಂದಾಗಿ ಇಂದು ಒಬ್ಬ ನಿವೃತ್ತಿ ಹೊಂದುತ್ತಿರುವ ಅಧಿಕಾರಿಯ ಬೀಳ್ಕೊಡುಗೆ ಕಾರ್ಯಕ್ರಮ ಮಾಡುತ್ತಿರುವದು ಹೆಮ್ಮೆ ಮತ್ತು ಸಂತಸದ ಸಂಗತಿ ಎಂದರು, ಅವರ ಸೇವಾ ಸಾಧನೆಗೆ ಇಲ್ಲಿ ಸೇರಿದ ಜನರೇ ನಿದರ್ಶನ, ನಮ್ಮ ನಿವೃತ್ತಿ ದಿನದಂದು ನಮ್ಮ ಮನೆಯವರನ್ನು ಇಲ್ಲಿ ಕರೆಯಬೇಕು, ನಮ್ಮ ಕೆಲಸದಲ್ಲಿ ಹೆಂಡತಿಗೂ ಅರ್ಧ ಪಾಲು ಸಿಗಬೇಕು, ನಾನೇ ಎಲ್ಲಾ ಮಾಡಿದ್ದೇನೆ ಎಂದರೆ ಆಗದು, ನಮಗೆ ಸಪೋರ್ಟ್ ಸಿಸ್ಟಮ್ ಮನೆಯಲ್ಲಿ ಇರುತ್ತದೆ, ಅವರಿಗೂ ಅದರ ಶ್ರೇಯಸ್ಸು ಹೋಗಬೇಕು ಎಂದರು.

ಮುರ್ತೆನ್ನವರ ಬೀಳ್ಕೊಡುಗೆ ಸಮಾರಂಭಕ್ಕೆ ಇಂದು ಬಹಳ ಜನ ಕೂಡಿದ್ದೇವೆ, ಪ್ರೀತಿ ಇದ್ದ ಕಾರಣಕ್ಕೆ ಇಷ್ಟೊಂದು ಜನರು ಬಂದಿದ್ದಾರೆ ನಿಮಗೆಲ್ಲ ಧನ್ಯವಾದಗಳು ಎಂದರು. ಉಪ ಆಯುಕ್ತೆ (ಅಭಿವೃದ್ಧಿ) ಲಕ್ಷ್ಮಿ ನಿಪ್ಪಾಣಿಕರ ಅವರು ಮಾತನಾಡಿ, ಪಾಲಿಕೆಯಲ್ಲಿ ನಮಗೆ ಮೊದಲ ಹೆಜ್ಜೆ ಯಾವ ರೀತಿ ಕೆಲಸ ಮಾಡಬೇಕು ಎಂದು ಹೇಳಿಕೊಟ್ಟಿದ್ದು ಮುರ್ತೆನ್ನವರ ಸರ್ ಅವರು, ಆಗ ವರ್ಕ್ ಇನ್ಸಪೆಕ್ಟರ್ ಅಂದ್ರೆ ಒಂದು ಗಾಂಭೀರ್ಯ ಇತ್ತು, ಇಂದು ನಾವು ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಇಷ್ಟೊಂದು ಹೆಸರು ಮಾಡಲು ಅದರಲ್ಲಿ ಮುರ್ತೆನ್ನವರ ಅವರ ಕೊಡುಗೆ ತುಂಬಾ ಇದೆ, ಮೊದಲು ಮಾಲೀಕರ ಜೊತೆ ಮಾತಾಡೋದು, ಅದರ ಮೂಲ ತಿಳಿಯುವದು, ಜನರ ಮನವೊಲಿಸುವದು ಎಲ್ಲವನ್ನು ಮಾಡುತ್ತಿದ್ದರು ಆದರೆ ಯಾವತ್ತೂ ನಾನೇ ಮಾಡಿದ್ದು ಎಂದು ಮುಂದೆ ಬರುತ್ತಿರಲಿಲ್ಲ ಅದು ಅವರ ಸರಳ ಸ್ವಭಾವ ಎಂದರು.

ಇನ್ನು ಪಾಲಿಕೆಯ ಆಯುಕ್ತರಾದ ಕಾರ್ತಿಕ ಎಂ ಅವರು ಮಾತನಾಡಿ, ಪಾಲಿಕೆಯಲ್ಲಿ 25 ವರ್ಷಕ್ಕಿಂತ ಅಧಿಕವಾಗಿ ಸೇವೆ ಸಲ್ಲಿಸುವದು ತುಂಬಾ ಕಠಿಣವಾದ ಕೆಲಸ, ಇದರಲ್ಲಿ ಎಲ್ಲಾ ವಿಧವಾದ ಸಮಸ್ಯೆ, ಸವಾಲುಗಳು ಎದುರಾಗುತ್ತವೆ, ನಾನು ಬಹುತೇಕ ಇಲಾಖೆ ನೋಡಿದ್ದೇನೆ ಆದರೆ ಮಹಾನಗರ ಪಾಲಿಕೆ ಬೇರೆಯೇ ಆಗಿರುತ್ತದೆ. ಇದರಲ್ಲಿ ಜನರ ಹತ್ತಿರ ನಿಂತು ಕೆಲಸ ಮಾಡಬೇಕಾಗುತ್ತದೆ ರಸ್ತೆ, ನೀರು, ದ್ವೀಪ, ಚರಂಡಿ ಏನೇ ಇದ್ದರೂ ತುರ್ತು ಕೆಲಸ ಇರುತ್ತದೆ, ಎಲ್ಲಾ ಕಡೆಯಿಂದ ಒತ್ತಡವು ಇರುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಸತತವಾಗಿ 30 ವರ್ಷ ಸೇವೆ ಸಲ್ಲಿಸಿ ಯಶಸ್ವಿ ನಿವೃತ್ತಿ ಹೊಂದುತ್ತಿರುವುದು ಸಾಧಾರಣ ವಿಷಯವಲ್ಲ, ಅವರ ಸೇವಾ ನಿಷ್ಠೆಗೆ ಧನ್ಯವಾದ ಎಂದರು.

ಇಲ್ಲಿ ವಿವಿಧ ಕ್ಷೇತ್ರಗಳ ಜನ ಸೇರಿದ್ದು ಮತ್ತೊಂದು ವಿಶೇಷ, ಪಾಲಿಕೆಯ ಸಿಬ್ಬಂದಿ ಜೊತೆಗೆ, ಗುತ್ತಿಗೆದಾರರು, ನಗರಸೇವಕರು, ಬೇರೆ ಇಲಾಖೆಯವರು ಸೇರಿದ್ದಾರೆ ಎಂದರೆ ಅವರ ಸೇವೆಯನ್ನು ಎಲ್ಲರೂ ಗುರ್ಥಿಸಿದ್ದಾರೆ ಎಂದರ್ಥ.

ಇನ್ನು ಮುಂದೆ ಅವರ ಮನೆಯವರಿಗೆ, ಮಕ್ಕಳಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಸಮಯ ನೀಡಲಿ, ಅವರಿಗೆ ದೇವರು ಆಯುರಾರೋಗ್ಯ ನೀಡಲಿ, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಕೊನೆಯದಾಗಿ ಸೇವಾ ನಿವೃತ್ತಿ ಹೊಂದುತ್ತಿರುವ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರ ಸುರೇಶ ಮೂರ್ತಣ್ಣವರ ಅವರು ಮಾತನಾಡಿ, ಈ ನನ್ನ ಸೇವಾ ಅವಧಿಯಲ್ಲಿ ನಾನು ಅಲ್ಪ ಸ್ವಲ್ಪ ಕೆಲಸ ಮಾಡಿದ್ದರೆ ಅದು ನನ್ನ ಸಹಪಾಠಿಗಳ ಸಹಕಾರದಿಂದ ಎಂದರು, ಲಕ್ಷ್ಮಿ ನಿಪ್ಪಾಣಿಕರ, ಅಂಕಿತ, ಅನೂಪ್ ಹೀಗೆ ಹಲವರು ನನಗೆ ಉತ್ತಮ ಕೆಲಸ ಮಾಡಲು ಸಾತ್ ನೀಡಿದ್ದಾರೆ, ನನ್ನ ಸೇವಾ ಅವಧಿಯಲ್ಲಿ ಯಾರಿಗಾದರೂ ತೊಂದರೆ ಮಾಡಿದ್ದಾರೆ ಕ್ಷಮೆ ಇರಲಿ ಎಂದು ಬಾವುಕಾವಾಗಿ ಮಾತನಾಡಿದರು..

ವರದಿ ಪ್ರಕಾಶ ಬಿ ಕೆ..