ವಿಷ್ಣು ಸೇನಾ ಸುದೀಪ ಸಾಮ್ರಾಜ್ಯ ಅಭಿಮಾನಿ ಬಳಗದಿಂದ ಕಿಚ್ಚ ಸುದೀಪ ಜನ್ಮದಿನ..
ಜನ್ಮದಿನದಲ್ಲಿ ದುಂದುವೆಚ್ಚಕ್ಕಿಂತ ಅನ್ನದಾನ ಶ್ರೇಷ್ಠ ಕಾರ್ಯ..
ಮಹೇಶ ಸಿಗಿಹಳ್ಳಿ..
ಬೆಳಗಾವಿ : ಇವತ್ತು ಕಣಬರಗಿಯ ಕಿಚ್ಚಾ ಸುದೀಪ್ ಅಭಿಮಾನಿಗಳಿಂದ ಸುದೀಪರವರ ಹುಟ್ಟುಹಬ್ಬದ ಅಂಗವಾಗಿ ಕಣಬರಗಿ ಆಟೋನಗರದಲ್ಲಿ ಇರುವ ಅಜಯ ಕಿವುಡ ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ವಸತಿ ಶಾಲೆಯಲ್ಲಿ ಸುದೀಪರವರ ಅಭಿಮಾನದ ಕೇಕ್ ನ್ನು ಕತ್ತರಿಸಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿ ಸಿನಿಮೀಯ ಪ್ರೇಕ್ಷಕರಿಗೆ ಹಾಗೂ ವಿವಿಧ ನಟರ ಅಭಿಮಾನಿಗಳಿಗೆ ಪ್ರೇರಣೆಯಾಗಿದ್ದಾರೆ.
ಈ ಕಾರ್ಯಕ್ರಮ ಮಾಡುವ ಉದ್ದೇಶ ಬಡತನದಲ್ಲಿ ಇರುವ ಮಕ್ಕಳ ಹಸಿವನ್ನು ನೀಗಿಸುವ ಚಿಕ್ಕ ಪ್ರಯತ್ನ ಮತ್ತು ಮಾದರಿಯ ದಾರಿದೀಪವಾಗಬೇಕು ಹಾಗೂ ನಮ್ಮ ರಾಜ್ಯದಲ್ಲಿ ಬಡತನ ನಿರ್ಮೂಲನಕ್ಕೆ ಇದೊಂದು ಚಿಕ್ಕ ಉದಾಹರಣೆಯಾಗಿ ಎಲ್ಲರಿಗೂ ಮಾದರಿಯಾಗಿ ಬಡತನ ಹಾಗೂ ಹಸಿವು ನೀಗಿಸುವ ಇಂತಹ ಪ್ರಯತ್ನ ಎಲ್ಲರಿಂದ ಆಗಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು.
ಹುಟ್ಟುಹಬ್ಬದಂದು ಹಾರ ಹಾಗೂ ಕಟೌಟ್ ಗೆ ಹಾಲು ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಹಣವನ್ನು ವ್ಯರ್ಥ ಮಾಡಬಾರದು ಎನ್ನುವುದು ಕಿಚ್ಚ ಸುದೀಪ್ ಕಣಬರಗಿ ನಗರದ ಅಭಿಮಾನಿಗಳ ಮುಖ್ಯ ಉದ್ದೇಶವಾಗಿದೆ ಎಂದು ಮಹೇಶ್ ಎಸ್ ಶೀಗಿಹಳ್ಳಿ ಅಭಿಮಾನ ವ್ಯಕ್ತಪಡಿಸಿದ್ದು.
ಈ ಸಂದರ್ಭದಲ್ಲಿ
ಅಭಿಮಾನಿಗಳಾದ
ರಾಜು ಹಿತ್ತಲಮನಿ, ಕೈಜರ್ ರಾಮ್, ಪರಶುರಾಮ ಪೂಜಾರಿ, ಸುನೀಲ ನಾಯಕ, ಭರತ ಹಿತ್ತಲಮನಿ, ಅಪ್ಪಯ್ಯ ಬಂಡಿಹೊಳಿ, ಅಭಿ ನಾಯಕ್, ಗೌತಮ ವೀರಗೌಡರ, ಪರಶುರಾಮ ಬಂಡಿಹೊಳಿ, ಅನ್ನು ತಳವಾರ, ಶಿವು ಗಂಡಗುದ್ರಿ , ಸುನಿಲ್ ಮೀಶಿ, ನಾಗರಾಜ್ ಬುದನೂರ, ಭೀಮು ಕಿಚ್ಚಾ , ವಿಶಾಲ್ ಬಂಡಿಹೊಳೆ, ಆಕಾಶ್ ಹೊಸಹೊಳ್ಳಿ, ಅಭಿಷೇಕ್ ಮಣ್ಣೂರ , ನಾಗೇಶ್ ಜಡಗಿ, ಪ್ರವೀಣ್ ಮುಸಲಾಮರಿ, ಅಮಿತ್ ಬಂಗ್ಯಗೋಳ, ಕಿಟ್ಟು ಜಡಗಿ . ಪ್ರಕಾಶ್ ಕೊಲೆನ್ನವರ ಉಪಸ್ಥಿತರಿದ್ದರು..