ಶಿಂದೊಳ್ಳಿ ಗ್ರಾಮಕ್ಕೆ ಕೀರ್ತಿ ತಂದ ಸರ್ಕಾರಿ ಶಾಲಾ ವಿದ್ಯಾರ್ಥಿನಿ ತನ್ವಿ ತಾನಾಜಿ ಅಗಸಿಮನಿ..
ಬಾಲಕಿಯ ಸಾಧನೆ ಪ್ರಸಂಶನೀಯಕ್ಕೆ ಅರ್ಹ..
ಶಿಕ್ಷಣ ಪ್ರೀಮಿ ಹಾಗೂ ಸಮಾಜಸೇವಕ ವೀರಭದ್ರಯ್ಯ..
ಸಿಂದೊಳ್ಳಿ : ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಶಿಂದೋಳ್ಳಿ ಶಾಲೆಯಲ್ಲಿ 1-7ನೇ ತರಗತಿವರೆಗೆ ಕಲಿತು, ಸದ್ಯ ಸರ್ಕಾರಿ ಪ್ರೌಢಶಾಲೆ ಸಾಂಬ್ರಾದಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಶಿಂದೊಳ್ಳಿ ಗ್ರಾಮದ ಹೆಮ್ಮೆಯ ಕುಮಾರಿ, ತನ್ವಿ ತಾನಾಜಿ ಅಗಸಿಮನಿ ಇವಳು ರಾಷ್ಟ್ರಮಟ್ಟದ “ಸ್ಮಾರ್ಟ್ ಇಂಡಿಯಾ ನಿರ್ಮಾಣದಲ್ಲಿ ಯುವಕರ ಪಾತ್ರ” ಕುರಿತಾದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ, ಭಾರತದ ಸನ್ಮಾನ್ಯ ರಾಷ್ಟ್ರಪತಿಯವರಾದ ದ್ರೌಪದಿ ಮುರ್ಮು ಇವರಿಂದ ಇಂದು ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನವನ್ನು ಪಡೆದಿದ್ದಾಳೆ.
ಶಿಂದೊಳ್ಳಿ ಗ್ರಾಮದ ಕೀರ್ತಿ ಹೆಚ್ಚಿಸಿದ ಕುಮಾರಿ ತನ್ವಿ, ಇವಳಿಗೆ ಶಿಕ್ಷಣ ಪ್ರೇಮಿಗಳು ಹಾಗೂ ಸಮಾಜ ಸೇವಕರಾದ ವೀರಭದ್ರಯ್ಯ ಬಾಬು ಪೂಜಾರ ಇವರು ಅಭಿನಂದನೆಗಳನ್ನು ತಿಳಿಸಿ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.

ಶಿಂದೊಳ್ಳಿ ಗ್ರಾಮದ ಹಿರಿಯರು ಮತ್ತು ಸರಕಾರಿ ಶಾಲೆಯ ಮುಖ್ಯೊಪಾದ್ಯಾಯರು ಹಾಗೂ ಶಿಕ್ಷಕರು ಕೂಡ ಕುಮಾರಿ ತನ್ವಿ ತಾನಾಜಿ ಅಗಸಿಮನಿ ಇವರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.