ಪಾಲಿಕೆಯಲ್ಲಿ ಮತ್ತೆ ಶುರುವಾಯಿತೇ ಅಕ್ರಮ ಪಿಐಡಿಗಳ ಸದ್ದು??

ಪಾಲಿಕೆಯಲ್ಲಿ ಮತ್ತೆ ಶುರುವಾಯಿತೇ ಅಕ್ರಮ ಪಿಐಡಿಗಳ ಸದ್ದು??

ಅನುಮಾನಾಸ್ಪದ ಪಿಐಡಿಗಳ ಕುರಿತು ದಾಖಲೆ ಕೇಳಿದ ನಗರ ಸೇವಕರು..

ಕಂದಾಯ ನೀರಿಕ್ಷಕರ ವಿಶೇಷ ಸಭೆಯಲ್ಲಿ ವಿಚಾರಣೆ..

ಬೆಳಗಾವಿ : ಪಾಲಿಕೆಯಲ್ಲಿ ನಿಯಮಬಾಹಿರ ಆಸ್ತಿ ಸಂಖ್ಯೆ (ಪಿಐಡಿ)ಗಳ ಪ್ರಕರಣಗಳು ನಿಲ್ಲುವಂತ ಲಕ್ಷಣಗಳು ಕಾಣುತ್ತಿಲ್ಲವೇನೊ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಹಿಂದಿನ 31ಪಿಐಡಿಗಳ ಕಥೆ ಮುಗಿಯಿತು ಎನ್ನುವಾಗಲೇ ಈಗ ಮತ್ತೆ 30 ಸಂಶಯಾತ್ಮಕ ಪಿಐಡಿಗಳ ಸುದ್ದಿ ಚರ್ಚೆಗೆ ಬಂದಿದೆ, ಇದು ಎಲ್ಲರ ಕಣ್ಣು ಮತ್ತೆ ಕಂದಾಯ ವಿಭಾಗದ ಕಡೆ ತಿರುಗುವಂತೆ ಮಾಡಿದೆ.

ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡುಗಳಲ್ಲಿ ಸುಮಾರು 30 ಅನುಮಾನಾಸ್ಪದ ಪಿಐಡಿಗಳು ಸಿದ್ದವಾಗಿದ್ದು, ಅವುಗಳಿಗೆ ಸಂಬಂದಿಸಿದ ದಾಖಲೆಗಳನ್ನು ಒದಗಿಸಬೇಕು ಎಂದು ಕಂದಾಯ ನಿರೀಕ್ಷಕರನ್ನು ಕರೆದು ಕಳೆದ ಸೋಮವಾರ ದಿನಾಂಕ 21/09/2026ರ ಮದ್ಯಾಹ್ನ ಒಂದು ವಿಶೇಷ ಸಭೆಯನ್ನು ಮಾಡಲಾಗಿದೆ ಎಂಬ ಮಾಹಿತಿ ಇದ್ದು, ಮುಂದಿನ ದಿನದಲ್ಲಿ ಈ ಸಂಶಯಾಸ್ಪದ ಪಿಐಡಿಗಳ ಕುರಿತು ಯಾವ ರೀತಿಯಲ್ಲಿ ತನಿಖೆ ಆಗುತ್ತದೆ, ಕ್ರಮ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ..

ವರದಿ ಪ್ರಕಾಶ ಬಿ ಕೆ..

Leave a Reply

Your email address will not be published. Required fields are marked *