“ಮಾಝಾ ನಾವ್ ನಾನಾ ಪಾಟೇಕರ್”!!
ಬೆಳಗಾವಿಯ ಹಿರಿಯ ಪತ್ರಕರ್ತ ಅಶೋಕ ಚಂದರಗಿ ಅವರ ಮಾತಿನಂತೆ..
ಬೆಳಗಾವಿ : ನಿನ್ನೆ ಗುರುವಾರ ಗೋವೆಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದ ಖ್ಯಾತ ಮರಾಠಿ, ಹಿಂದಿ ನಟ, ರಂಗಭೂಮಿಯ ನಟಸಾಮ್ರಾಟ ನಾನಾ ಪಾಟೇಕರ ಒಬ್ಬ ಅದ್ಭುತ ಕಲಾವಿದ. ಚಿತ್ರರಂಗಕ್ಕಿಂತ ರಂಗಭೂಮಿಯ ಉತ್ಕೃಷ್ಟ ಕಲಾವಿದ. ಅವರ ನೈಜ ಅಭಿನಯ ಹಾಗೂ ಜನಪರ ಕಾಳಜಿ, ವ್ಯವಸ್ಥೆಯ ವಿರುದ್ಧ ಅವರ ಆಕ್ರೋಶವೇ ಅವರ ಜನಪ್ರಿಯತೆಗೆ ಕಾರಣವಾಗಿತ್ತು.
ಅವರನ್ನು ಮೊದಲು ನಾನು ನೋಡಿದ್ದು 1982 ರಲ್ಲಿ.
“ಸೂತ್ರಧಾರ” ಚಲನಚಿತ್ರದ ಶೂಟಿಂಗ್ ಸಮಯದಲ್ಲಿ.
ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ತಾಲೂಕಿನ ಒಂದು ಪುಟ್ಟ ಹಳ್ಳಿಯಲ್ಲಿ ನಡೆಯುತ್ತಿದ್ದ ಶೂಟಿಂಗ್ ವರದಿ ಮಾಡಲು ಬೆಳಗಾವಿಯಿಂದ ಪತ್ರಕರ್ತರನ್ನು ಕರೆದೊಯ್ಯಲಾಗಿತ್ತು.
ಹಿರಿಯ ಪತ್ರಕರ್ತ ಅಶೋಕ ಯಾಳಗಿ ಅವರು ಕನ್ನಡ ಮತ್ತು ಮರಾಠಿ ಪತ್ರಕರ್ತರನ್ನು ಕರೆದೊಯ್ದಿದ್ದರು.
ಶೂಟಿಂಗ್ ನಡೆದಿತ್ತು, ಖ್ಯಾತ ಸಿನಿಮಾಟೋಗ್ರಾಫರ್ Debar ದೇವ್ ಅವರು ಶೂಟ್ ಮಾಡುತ್ತಿದ್ದರು. ನಾನು ಅಲ್ಲಿದ್ದ ನಟರ ಹೆಸರನ್ನು ನನ್ನ ನೋಟ್ ಪ್ಯಾಡಿನಲ್ಲಿ ಬರೆದುಕೊಳ್ಳುತ್ತಿದ್ದೆ. ನನ್ನ ಹಿಂದಿನಿಂದ ಬಂದ ಒಬ್ಬ ಕಲಾವಿದ ” ಮಾಝಾ ನಾವ್ ನಾನಾ ಪಾಟೇಕರ್”( ನನ್ನ ಹೆಸರು ನಾನಾ ಪಾಟೇಕರ್) ಎಂದರು. ನಾನು ಬರೆದುಕೊಂಡೆ! ಅದೇ ಆಗ ಮರಾಠಿ ರಂಗಭೂಮಿಯಿಂದ ಚಲನಚಿತ್ರ ಕ್ಷೇತ್ರಕ್ಕೆ ಕಾಲಿರಿಸಿ ಸೂತ್ರಧಾರ “ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸೂತ್ರಧಾರ ಸಹ ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿತ್ತು.
ಚಿತ್ರದ ಶೂಟ್ ಮಾಡುತ್ತಿದ Debar dev ಅವರು ಒಬ್ಬ ಅದ್ಭುತ ಸಿನಿಮಾಟೋಗ್ರಾಫರ, ಬಂಗಾಳಿಯಾಗಿದ್ದ ಅವರು ಕನ್ನಡದ ನಾಗಾಭರಣರ “ಆಕ್ಸಿಡೆಂಟ್” ಚಿತ್ರದ ಶೂಟ್ ಮಾಡಿದ್ದರು. ಚಿತ್ರದಲ್ಲಿಯ ಅಪಘಾತದ ದೃಶ್ಯ ಅತ್ಯಂತ ನೈಜವಾಗಿ ಮೂಡಿ ಬಂದಿತ್ತು. ಅವರನ್ನು ಈ ಬಗ್ಗೆ ಕೇಳಿದೆ. ಒಂದು ದೃಶ್ಯವನ್ನು ಮೂರು ಹಗಲು, ಮೂರು ರಾತ್ರಿ ಶೂಟ್ ಮಾಡಬೇಕಾಯಿತೆಂದು ಅವರು ಹೇಳಿದ್ದರು.
ನಾನಾ ಪಾಟೇಕರ್ ಅವರ “ನಟಸಾಮ್ರಾಟ” ಮರಾಠಿ ಚಿತ್ರವು ಅವರ ಅದ್ಭುತ ನೈಜ ನಟನೆಗೆ ಸಾಕ್ಷಿಯಾಗಿದೆ. ಇಂದಿನ ಬಹುತೇಕ ಪತ್ರಿಕೆಗಳಲ್ಲಿ ಈ ಚಿತ್ರದ ಪ್ರಸ್ತಾಪವಿಲ್ಲ.
ಶುಕ್ರವಾರ ಮುಂಜಾನೆ ಗೋವೆಯ ಪೊಲೀಸರು ಪಾಟೇಕರ ಅವರದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರನ್ನು ಮಣಿಪಾಲ್ ಆಸ್ಪತ್ರೆಗೆ ತಂದಾಗ ಅವರು ಮೊದಲೇ ಮೃತಪಟ್ಟಿದ್ದರಂತೆ.
75 ವರ್ಷ ವಯಸ್ಸಿನ ಪಾಟೇಕರ್ ಅವರು ಸದಾ ಕಾಲ ನೆನಪಿನಲ್ಲಿ ಉಳಿಯುವಂತ ಒಬ್ಬ ಜನಪರ ಕೆಲಸಗಾರ ಎನ್ನುವದರಲ್ಲಿ ಎರಡು ಮಾತಿಲ್ಲ ಎಂದು ಹಿರಿಯ ಪತ್ರಕರ್ತ ಅಶೋಕ್ ಚಂದರಗಿ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ..