ಇದ್ದ ಒಬ್ಬ ಅಹಿಂದ ನಾಯಕನನ್ನು ಕೆಳಗಿಳಿಸಿ ಕಾಂಗ್ರೆಸ್ ಸಾಧಿಸಿದ್ದೇನು?
ಕಾಂಗ್ರೆಸ್ ಹೈಕಮಾಂಡ್, ರಾಹುಲ್ ಗಾಂಧಿ “ಕೈ” ಸುಟ್ಟು ಕೊಳ್ಳುವ ದಾರಿ ಹಿಡಿದರೆ?
ಬೆಳಗಾವಿ : ರಾಜಕೀಯದಲ್ಲಿ ಕೆಲವರು ಅಧಿಕಾರಕ್ಕಾಗಿ ಬದುಕುತ್ತಾರೆ, ಆದರೆ ಕೆಲವರು ಜನರ ಹೃದಯದಲ್ಲಿ ಬದುಕುತ್ತಾರೆ. ಅಂತಹ ಅಪರೂಪದ ನಾಯಕತ್ವದ ಹೆಸರು ಸಿದ್ದರಾಮಯ್ಯ ಅವರದ್ದು.
ಧರ್ಮದ ಗೋಡೆಗಳನ್ನೂ, ಜಾತಿಯ ಅಂತರಗಳನ್ನೂ ಮೀರಿ, ಬಡವರ ಕಣ್ಣೀರಿನ ನೋವನ್ನು ತನ್ನದೇ ನೋವಂತೆ ಕಂಡ ನಾಯಕ. ಅನೇಕ ಯುವ ನಾಯಕರಿಗೆ ದಾರಿ ತೋರಿದ ಮಾರ್ಗದರ್ಶಕ.
ಪಕ್ಷಗಳು ಬೇರೆ ಇರಬಹುದು.
ಧ್ವಜಗಳು ಬೇರೆ ಇರಬಹುದು…
ಆದರೆ ಕೆಲ ಸಂಬಂಧಗಳು ರಾಜಕೀಯದ ಗಡಿ ಮೀರಿ ಹೃದಯಗಳಲ್ಲಿ ಕಟ್ಟಲ್ಪಟ್ಟಿರುತ್ತವೆ ಅವುಗಳನ್ನು ಉಳಿಸಿಕೊಂಡವರು ಸಿದ್ದರಾಮಯ್ಯ… ಸಿದ್ದರಾಮಯ್ಯ.
ಸಿದ್ದರಾಮಯ್ಯ ಹಲವಾರು ಬಾರಿ ಹೇಳುತ್ತಿದ್ದ ಒಂದು ಮಾತು “ಜನರ ಜೊತೆ ನಿಂತವನನ್ನು ಜನ ಎಂದಿಗೂ ಕೈ ಬಿಡೋದಿಲ್ಲ ಎಂದು,
ಇಂದು ಒಂದು ಅಧ್ಯಾಯ ಮುಗಿಯಬಹುದು… ಆದರೆ ಜನಪರ ರಾಜಕೀಯದ ಆ ಬೆಳಕು ಮುಂದಿನ ಪೀಳಿಗೆಯಲ್ಲೂ ಮುಂದುವರಿಯಬೇಕು ಎಂಬ ಆಶಯ ಪ್ರತಿಯೊಬ್ಬರಲ್ಲೂ ಇದೆ.
ಆದರೆ ರಾಹುಲ್ ಗಾಂಧಿ ತಪ್ಪು ನಿರ್ಧಾರ, ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹೊಡೆತ ನೀಡುವುದರಲ್ಲಿ ಅನುಮಾನ ಇಲ್ಲ. ಹದಿನೈದು ದಿನಗಳ ಅವಕಾಶ ನೀಡದ ಈ ತರಾತುರಿಯ ರಾಜೀನಾಮೆ ಬೇಕಿತ್ತಾ..?
ಇದ್ದ ಒಬ್ಬ ಅಹಿಂದ ನಾಯಕನನ್ನು ಕೆಳಗಿಳಿಸಿ ಕಾಂಗ್ರೆಸ್ ಸಾಧಿಸಿದ್ದೇನು? ಮುಂದೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸಮಸ್ಯೆ ಆಗಬಹುದು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.