ಕಂದಾಯ ಶಾಖೆಯ ಅಧಿಕಾರಿ/ ಸಿಬ್ಬಂದಿಗಳ ಮೇಲಿನ ಸುಳ್ಳು ಆರೋಪಗಳನ್ನು ನಿಯಂತ್ರಿಸಿ..
ಪಾಲಿಕೆಯ ಕಂದಾಯ ಸಿಬ್ಬಂದಿಗಳಿಂದ ಆಯುಕ್ತರಿಗೆ ಮನವಿ..
ಬೆಳಗಾವಿ : ಇಲ್ಲಿನ ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕೆಲ ಪ್ರಭಾವಿ ವ್ಯಕ್ತಿಗಳು ಹಾಗೂ ಖಾಸಗಿಯವರು ನಮ್ಮ ಮೇಲೆ ಇಲ್ಲ ಸಲ್ಲದ ಸುಳ್ಳು ಅರೋಪಿವನ್ನು ಮಾಡಿ ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಅದು ನಿಲ್ಲಬೇಕು ಎಂದು ಶುಕ್ರವಾರ ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಪಾಲಿಕೆಯ ಆಯುಕ್ತ ಎಂ ಕಾರ್ತಿಕ ಅವರಿಗೆ ಮನವಿ ಮಾಡಿದ್ದಾರೆ.
ಪ್ರತಿನಿತ್ಯ ನಾವುಗಳು ಕರ ವಸೂಲಾತಿ ಕಾರ್ಯದೊಂದಿಗೆ ಚುನಾವಣಾ ಸಂಬಂಧಿತ ಕಾರ್ಯ, ಜನಗಣತಿಗೆ ಸಂಬಂಧಿಸಿದ ಕಾರ್ಯ, ಅನಧಿಕೃತ ಬ್ಯಾನರ್ ತೆರವುಗೊಳಿಸುವ ಕಾರ್ಯ, ಮಳೆಗಾಲದ ವಿಪ್ಪತ್ತು ನಿರ್ವಹಣಾ ಕಾರ್ಯಗಳನ್ನು ಮಾಡುತ್ತಿದ್ದು ಅದೇರೀತಿ ಮೇಲಾಧಿಕಾರಿಗಳು ಕಾಲಕಾಲಕ್ಕೆ ಸೂಚಿಸುವ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತೇವೆ.
ಆದರೂ ಕೆಲ ಪ್ರಭಾವಿ ವ್ಯಕ್ತಿಗಳು ಸಿಬ್ಬಂದಿಗಳು ಸರಿಯಾದ ಸಮಯದಲ್ಲಿ ಕಚೇರಿಯಲ್ಲಿ ಲಭ್ಯವಿರುವುದಿಲ್ಲ. ಸರಿಯಾಗಿ ಸಾರ್ವಜನಿಕರ ಕಾರ್ಯಗಳನ್ನು ನಿರ್ವಹಿಸುವುದಿಲ್ಲ ಎಂದು ಅಧಿಕಾರಿ-ಸಿಬ್ಬಂದಿಗಳ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದರಿಂದ ನಮಗೆ ಮಾನಸಿಕ ಹಿಂಸೆ ಆಗುತ್ತಿದ್ದು ಅದರ ನಡುವೆಯೇ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ತಮ್ಮ ಗೋಳು ಹೇಳಿಕೊಂಡಿದ್ದಾರೆ.
ಇದೇ ವೇಳೆ ಕಂದಾಯ ನಿರೀಕ್ಷಕರು ಯಲ್ಲೇಶ್ ಬಚ್ಚಲಪುರಿ ಅವರು ಮಾತನಾಡಿ, ಕಂದಾಯ ಶಾಖೆಯ ಸಿಬ್ಬಂದಿಗಳು ಬಿಸಿಲು, ಮಳೆ, ಚಳಿ ಅಂತಾ ಲೆಕ್ಕಿಸದೇ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇವೆ ಆದರು ನಮ್ಮ ಮೇಲೆ ಅಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆಂದು ಮಹಾನಗರ ಪಾಲಿಕೆಯ ಆಯುಕ್ತ ಕಾರ್ತೀಕ್ ಎಂ. ಅವರಿಗೆ ಮನವಿ ಮಾಡಿಕೊಂಡರು.
ನಮ್ಮ ಮೇಲೆ ಸುಳ್ಳು ಆರೋಪಗಳು ಕೂಡಲೇ ಇಲ್ಲಿಗೆ ನಿಲ್ಲಬೇಕು, ಸುಳ್ಳು ಆರೋಪಿಸುವವರನ್ನು ಪತ್ತೆ ಹಚ್ಚಿ ಹಂತವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಯಲ್ಲೇಶ್ ಬಚ್ಚಲಪುರಿ, ಸಾಗರ ಎಂ ಕಾಂಬ್ಲೆ, ಸಂತೋಷ ಬಿ ಓಸಿ, ಸಂಜು ಪಾಟೀಲ್, ಐ, ಸಿ ಕಲ್ಲಪತ್ರಿ, ಎಂ, ಬಿ ದೊಡ್ಡಮನಿ, ವಿವೇಕ್ ಪಾಟೀಲ, ಎಸ್ ಐ ಕಾಂಬ್ಲೆ, ಎಸ್ ಎಸ್ ತಳಕೇರಿ, ಶ್ರೀಕಾಂತ ಇರಳೆ, ಎಸ್ ಎಚ್ ಮಾನೆ, ಆನಂದ ಇಟಗಿ, ಮನಿಯಾರ, ಪವನ ದೇವರಮನಿ, ಸುರೇಶ ಕಾಂಬ್ಳೆ, ಸುಶಾಂತ, ಗೋಕುಲ್, ತ್ರಿವೇಣಿ ಅಷ್ಟೆಕರ್, ಚಿರಾಗ, ಪ್ರಕಾಶ್ ಸೇತಸನದಿ ಸೇರಿದಂತೆ ಪಾಲಿಕೆಯ ಇತರ ಕಂದಾಯ ಸಿಬ್ಬಂದಿಗಳು ಇದ್ದರು.
ವರದಿ ಪ್ರಕಾಶ ಬಿ ಕೆ..