ಎಐ ತಂತ್ರಜ್ಞಾನ ಬಳಕೆಯ ಒಂದು ದಿನದ ರಾಷ್ಟ್ರೀಯ ಸಮ್ಮೇಳನ..
ನರ್ಸಿಂಗ್ ಶಿಕ್ಷಣ ಹಾಗೂ ಪ್ರಯೋಗಕ್ಕೆ ತುಂಬಾ ಅನುಕೂಲ..
ಡಾ: ನಾಮದೇವ ಮಾಳಗಿ, ಪ್ರಾಂಶುಪಾಲರು ಸರ್ಕಾರಿ ನರ್ಸಿಂಗ್ ಕಾಲೇಜ್ ಬಿಮ್ಸ್ ಬೆಳಗಾವಿ..
ಬೆಳಗಾವಿ: ಪ್ರಸ್ತುತ ದಿನಗಳಲ್ಲಿ ಎಐ ತಂತ್ರಜ್ಞಾನಕ್ಕೆ ಎಲ್ಲಿಲ್ಲದ ಮಹತ್ವ ಬಂದಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಬೀಮ್ಸ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ: ನಾಮದೇವ್ ಮಾಳಗಿ ಹೇಳಿದರು.
ಸಮ್ಮೇಳನದ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಈಗಾಗಲೇ ೨೦೦ಕ್ಕೂ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಆನ್ ಲೈನ್ ಮೂಲಕವೂ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿ ಕೊಂಡು ಭಾಗಿಯಾಗಿದ್ದಾರೆ ಎಂದರು.
ಜೊತೆಗೆ ತೆಲಂಗಾಣ, ಮಹಾರಾಷ್ಟ್ರ ಹಾಗೂ ಬೆಂಗಳೂರಿನಿಂದ ನುರಿತ ಸಂಪನ್ಮೂಲ ವ್ಯಕ್ತಿಗಳೂ ಆಗಮಿಸಿದ್ದಾರೆ. ಸಮ್ಮೇಳನದ ಮೂಲಕ ವಿದ್ಯಾರ್ಥಿಗಳು ಎಂತಹ ಕಠಿಣ ವಿಷಯಗಳನ್ನು, ಸಂಗತಿಗಳನ್ನು ಸುಲಭವಾಗಿ ಹೇಗೆ ಅರ್ಥೈಸಿಕೊಳ್ಳಬೇಕು ಎಂದು ವಿಶೇಷ ಉಪನ್ಯಾಸಗಳ ಮೂಲಕ ವಿವರಿಸಲಿದ್ದಾರೆ ಎಂದರು.

ಇನ್ನು ಮಣ್ಣೂರಿನಲ್ಲಿ ಕಾಲೇಜ್ ಸ್ಥಾಪನೆಗೆ ನಾಲ್ಕು ಎಕರೆ ಜಮೀನು ಮಂಜೂರು ಆಗಿದ್ದು, ಸಂತಸದ ಸಂಗತಿ. ಇದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೇ, ಇಂತಹ ಮಹತ್ವದ ಸಮ್ಮೇಳನ ಹಮ್ಮಿಕೊಳ್ಳಲು ಸಹಕರಿಸಿದ ಬಿಮ್ಸ್ ಕಾಲೇಜಿನ ನಿರ್ದೇಶಕರೂ ಸೇರಿದಂತೆ, ಸಿಬ್ಬಂದಿ, ವಿದ್ಯಾರ್ಥಿಗಳು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಡಾ: ನಾಮದೇವ ಮಾಳಗಿ ಹೇಳಿದರು.

ನರ್ಸಿಂಗ್ ಶಿಕ್ಷಣದಲ್ಲಿ ಎಐ ತಂತ್ರಜ್ಞಾನವನ್ನು ಹೇಗೆ ಉಪಯೋಗಿಸಬೇಕು ಎನ್ನುವ ಒಂದು ದಿನದ ಈ ವಿಶೇಷ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಬಿಮ್ಸ್ ನ ನಿರ್ದೇಶಕರಾದ ಡಾ, ವಿನಯ ದಾಸ್ತಿಕೊಪ್ಪ, ಡಾ, ನಾಮದೇವ ಮಾಳಗಿ, ಕಿರಣ ನಾಯಕ, ಸಂಪನ್ಮೂಲ ವ್ಯಕ್ತಿಗಳಾದ ಡಾ ಶ್ರೀಹರ್ಷ ಸಿ, ಡಾ ಬಾಬಿ ನಾಯಕ, ಡಾ ಪ್ರಕಾಶ್ ನರೇಗಳ, ಡಾ, ಭಾರತಿ ಮುನಿ ನಾರಾಯಣಪ್ಪ, ಡಾ, ಶ್ರೀನಿವಾಸನ ಪಿ, ಬಿಮ್ಸ್ ನರ್ಸಿಂಗ್ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.