ಕನ್ನಡ ಜಾಗೃತಿ ವೇದಿಕೆಗೆ ನೂತನ ಜಿಲ್ಲಾಧ್ಯಕ್ಷರ ನೇಮಕ..

ಕನ್ನಡ ಜಾಗೃತಿ ವೇದಿಕೆಗೆ ನೂತನ ಜಿಲ್ಲಾಧ್ಯಕ್ಷರ ನೇಮಕ..

ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಪ್ರವೀಣ ಪಾಟೀಲ ನೇಮಕ..

ಬೆಳಗಾವಿ : ನಗರದ ಸಾಮಾಜಿಕ ಹೋರಾಟಗಾರ ಹಾಗೂ ಸಮಾಜ ಸೇವಕರಾದ ಪ್ರವೀಣ ಪಾಟೀಲ ಅವರನ್ನು ಕಳೆದ 33 ವರ್ಷಗಳಿಂದ ಕನ್ನಡ ನಾಡು ನುಡಿಗಾಗಿ ಹೋರಾಟದಲ್ಲಿ ಇತಿಹಾಸವಿರುವ ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ ಮಂಜುನಾಥ್ ದೇವ ಅವರು ಕನ್ನಡ ಜಾಗೃತಿ ವೇದಿಕೆಯ ನೂತನ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಪ್ರವೀಣ ಪಾಟೀಲ ಅವರನ್ನು ಆಯ್ಕೆ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪ್ರವೀಣ ಪಾಟೀಲ ಅವರು ವೃತ್ತಿಯಲ್ಲಿ ಪತ್ರಕರ್ತರು ಹಾಗೂ ಸುಮಾರು ವರ್ಷಗಳಿಂದ ಕನ್ನಡ ನಾಡು, ನುಡಿ, ಭಾಷೆಗಾಗಿ ಹೋರಾಟ ಮಾಡಿದವರು ಹಾಗೂ ಜನರ ಕಷ್ಟ ಸುಖದಲ್ಲಿ ಭಾಗಿಯಾದವರು, ಯುವಕರೊಂದಿಗೆ ಬೆರೆತು ಸಾಕಷ್ಟು ಸಲಹೆ ಸೂಚನೆ, ಮಾರ್ಗದರ್ಶನ ಮಾಡುವುದರ ಜೊತೆಗೆ ಕನ್ನಡ ನಾಡು ನುಡಿಗಾಗಿ ಅನೇಕ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ತಮ್ಮ ಹೋರಾಟದ ಮೂಲಕ ಯುವ ಜನರ ಮನಸ್ಸನ್ನು ಗೆದ್ದು ಅವರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದಾರೆ.

ನೂತನ ಜಿಲ್ಲಾಧ್ಯಕ್ಷರಾಗಿ ಹೊಸ ಜವಾಬ್ದಾರಿ ಪಡೆದ ಪ್ರವೀಣ ಪಾಟೀಲ್ ಅವರಿಗೆ ಬೆಳಗಾವಿ ಯುವ ಜನತೆ ಹಾಗೂ ಕನ್ನಡ ಜಾಗೃತಿ ವೇದಿಕೆ ಪಧಾಧಿಕಾರಿಗಳ ವತಿಯಿಂದ ಅಭಿನಂದನೆಗಳು ಸಲ್ಲಿಸಿದ್ದಾರೆ..

Leave a Reply

Your email address will not be published. Required fields are marked *