ಗ್ಯಾರೆಂಟಿ ಹೆಸರಲ್ಲಿ ತಮ್ಮ ಅಭಿವೃದ್ಧಿಯ ಗ್ಯಾರೆಂಟಿ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ಸಿಗರು.

ಗ್ಯಾರೆಂಟಿ ಹೆಸರಲ್ಲಿ ತಮ್ಮ ಅಭಿವೃದ್ಧಿಯ ಗ್ಯಾರೆಂಟಿ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ಸಿಗರು.

ಕನ್ನಡ ಪರವಾದ ಗೊತ್ತುವಳಿ ನಿರ್ಣಯ ಮಾಡಲಿಕ್ಕೆ ಏನು ಸಮಸ್ಯೆ?

ಎನ್ ರವಿಕುಮಾರ, ವಿಧಾನ ಪರಿಷತ ಸದಸ್ಯರು..

ಬೆಳಗಾವಿ : ಗ್ಯಾರೆಂಟಿ ಯೋಜನೆಗಳ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರು ಇಂದು ಗ್ಯಾರೆಂಟಿ ಹೆಸರಲ್ಲಿ ತಮ್ಮ ಅಭಿವೃದ್ಧಿಯ ಗ್ಯಾರೆಂಟಿ ಮಾಡಿಕೊಳ್ಳಿತ್ತಿದ್ದಾರೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗ್ರಹಲಕ್ಷ್ಮಿಯ ಐದು ಸಾವಿರ ಕೋಟಿ ಹಣ ಎಲ್ಲಿ ಹೋಯಿತು, ಇದಕ್ಕೆ ಮುಖ್ಯಮಂತ್ರಿ ಅವರು ಉತ್ತರ ನೀಡಲಿ, ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ ಪ್ರಶ್ನೆ ಮಾಡಿದ್ದಾರೆ.

ರವಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ದುರಾಡಳಿತಕ್ಕೆ ಬರುವ ದಿನಗಳಲ್ಲಿ ಜನರೇ ಉತ್ತರ ನೀಡುತ್ತಾರೆ ಎಂದಿದ್ದಾರೆ. ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲೇ ಇರುವ ಸರ್ಕಾರಕ್ಕೆ ಮೊನ್ನೆ ನಡೆದ ದಾವಣಗೆರೆ ಉಪ ಚುನಾವಣೆಯಲ್ಲಿ ತಮ್ಮದೇ ಸರ್ಕಾರ ಇದ್ದರೂ, ಡಿಕೆ ಶಿವಕುಮಾರ ಆದಿಯಾಗಿ ಎಲ್ಲಾ ನಾಯಕರೂ ಪ್ರಚಾರ ಮಾಡಿದರೂ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ, ಬರುವ ಚುನಾವಣೆಗಾಗಿ ಜನ ಕಾಯುತ್ತಿದ್ದಾರೆ ಎಂದರು.

ಅಭಿವೃದ್ದಿಯಲ್ಲಿ ರಾಜ್ಯ ಸರ್ಕಾರ ಶೂನ್ಯ ಸಾಧನೆ ಮಾಡಿದೆ, ಏಕೆಂದರೆ ನಾನು ಪಕ್ಕದ ರಾಜ್ಯ ಸೊಲ್ಲಾಪುರದಿಂದ ಬಂದೆ ಅಲ್ಲಿನ ರಸ್ತೆಗಳಿಗೂ ಇಲ್ಲಿನ ರಸ್ತೆಗಳಿಗೂ ಅಜಗಜಾoತರ ವ್ಯತ್ಯಾಸಗಳಿವೆ, ಇಲ್ಲಿನ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಸಿಎಂ ಅವರು ಇದಕ್ಕೆಲ್ಲ ಉತ್ತರ ನೀಡಬೇಕು ಇಲ್ಲವಾದರೆ ಜನ ಉತ್ತರ ನೀಡುತ್ತಾರೆ ಎಂದಿದ್ದಾರೆ.

ಇನ್ನು ಪ್ರಟ್ರೋಲ್ ದರ ಏರಿಕೆ ಬಗ್ಗೆ ಉತ್ತರಿಸಿದ ಅವರು ಬೇರೆ ದೇಶಗಳಲ್ಲಿ ಶೇಕಡಾ 80, 50ರಷ್ಟು ದರ ಏರಿದ್ದು, ಭಾರತದಲ್ಲಿ ಕೇವಲ 3% ರಷ್ಟು ಏರಿದೆ, ಪ್ರಧಾನಿ ಮೋದಿ ಅವರು ದೇಶದ ಅಭಿವೃದ್ಧಿಯಲ್ಲಿ ಹಾಗೂ ಸುಭದ್ರ ಭವಿಷ್ಯಕ್ಕಾಗಿ ಅನೇಕ ಕ್ರಿಯಾಶೀಲ ಯೋಜನೆಗಳನ್ನು ತರುತ್ತಿದ್ದಾರೆ, ಅದಕ್ಕಾಗಿಯೇ ದೇಶದ ಜನತೆ ಅವರ ನಿರ್ಧಾರಗಳ ಜೊತೆಗೆ ಇದ್ದಾರೆ ಎಂದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ಕನ್ನಡಪರ ನಿರ್ಣಯವನ್ನು ಅಂಗೀಕರಿಸುವ ಬಗ್ಗೆ ಉತ್ತರಿಸಿದ ಅವರು, ಕನ್ನಡ ಪರವಾಗಿ ಗೊತ್ತುವಳಿ ನಿರ್ಣಯ ಮಾಡಲಿಕ್ಕೆ ಏನು ಸಮಸ್ಯೆ? ಸ್ವಲ್ಪ ಚರ್ಚೆ ಮಾಡುತ್ತೇವೆ, ಶಾಸಕರು ಮಾಜಿ ಶಾಸಕರ ಜೊತೆ ಮಾತನಾಡುತ್ತೇವೆ ಎಂದಿದ್ದಾರೆ.

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *