ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಪದಾಧಿಕಾರಿಗಳ ಯಶಸ್ವಿ ಸಭೆ..

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಪದಾದಿಕಾರಿಗಳ ಯಶಸ್ವಿ ಸಭೆ..

ಸಾರಿಗೆ ನೌಕರರ ಬೇಡಿಕೆ ಈಡೇರುವ ತನಕ ಹೋರಾಟ ನಿಲ್ಲದು..

ಮಹೇಶ್ ಎಸ್ ಶಿಗೀಹಳ್ಳಿ, ಗೌರವ ಅದ್ಯಕ್ಷರು ಸಾರಿಗೆ ನೌಕರರ ಕೂಟ..

ಬೆಳಗಾವಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟವು ರಾಜ್ಯದಲ್ಲಿ ಸಾರಿಗೆ ನೌಕರರ ಪಾಲಿಗೆ ನಿಜವಾದ ರಕ್ಷಣೆ, ರಾಜ್ಯದಲ್ಲಿ ಸಾರಿಗೆ ನೌಕರರ ಕಣ್ಣೀರು ಒರೆಸಲು ಕೂಟ ರಚನೆ ಆಗಿದ್ದು, ಕೂಟ ರಚನೆ ಆಗಿದ್ದೆ ಅಚ್ಚರಿ, ಇದು ಸಾರಿಗೆ ನೌಕರರ ನಿಷ್ಠೆ ಅವರ ಅಪಾರವಾದ ನಂಬಿಕೆ ಇದ್ದಿದರಿಂದ ಸಾರಿಗೆ ನೌಕರರು ಕೂಟ ಪ್ರಾರಂಭ ಮಾಡಿದ್ದರು.

ರಾಜ್ಯದಲ್ಲಿ ಸರಿಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ನೌಕರರ ಬೆಂಬಲ ಇದ್ದಿದ್ದು ಇತಿಹಾಸದಲ್ಲಿ ಯಾವ ಸಂಘಟನೆಗಳು ಮಾಡದ ಹೋರಾಟ ಕಟ್ಟು ನಿಟ್ಟು ಶಿಸ್ತು ಮತ್ತು ನೌಕರರ ಕಣ್ಣೀರು ಒರೆಸಲು ಕೂಟ ಸ್ಥಾಪನೆಯಾಯಿತು ಮತ್ತು ನೌಕರರಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಮುಖ್ಯ ಅಂಶಗಳನ್ನು ಬೇಡಿಕೆಗಳನ್ನು ಇಟ್ಟುಕೊಂಡು ಕೂಟ ಪದಾದಿಕಾರಿಗಳು ಸದಸ್ಯರು ನೌಕರರು ಹೇರಾಟಕ್ಕೆ ಸಿದ್ಧರಾಗಿ ರಾಜ್ಯಾದ್ಯಂತ ಸಾರಿಗೆ ಹೋರಾಟದಲ್ಲಿ ಸಾರಿಗೆ ಇಲಾಖೆ ಸಿಡಿದೆದ್ದಿತು.

ಇದು ಕೂಟದ ತಾಕತ್ತು ಎಂದು ರಾಜ್ಯದ ಜನತೆಗೆ ಹಾಗೂ ಉಳಿದ ಪಕ್ಷದ ಸಚಿವ ಶಾಸಕರಿಗೆ ಮಂತ್ರಿಗಳಿಗೆ ತಿಳಿಯಿತು ಆದರೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಅನ್ಯಾಯ ಮಾಡಿದ್ದು ಇದು ಖಂಡನೀಯ ಆದ್ರೂ ಕೂಟ ಇಂದಲ್ಲ ನಾಳೆ ನೌಕರರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಕಾನೂನಾತ್ಮಕವಾಗಿ ಹೋರಾಟದ ಮುಖಾಂತರ ನಿರಂತರ ಪ್ರಯತ್ನ ಮಾಡುತ್ತಲೇ ಇದೆ.

ಈ ನಿಟ್ಟಿನಲ್ಲಿ ಮತ್ತೆ ನೌಕರರ ಧ್ವನಿಯಾಗಿ ನೌಕರರ ಪರವಾಗಿ ಕೂಟ ಇದ್ದೆ ಇರುತ್ತದೆ ಸರ್ಕಾರಕ್ಕೆ ಗಡುವು ಕೊಟ್ಟಾಗಿದೆ ತಾಳ್ಮೆ ಮಿತಿಮೀರುತ್ತಲೇ ಇದೆ ಸರ್ಕಾರಕ್ಕೆ ಸಾರಿಗೆ ನೌಕರರ ತಾಕತ್ತು ತೋರಿಸಲು ಸಾರಿಗೆ ಕಣ್ಣೀರು ಒರೆಸಲು ಸಾರಿಗೆ ನೌಕರರಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕೂಟ ಮತ್ತೆ ಹೋರಾಟ ಮಾಡಲು ಸಿದ್ಧತೆ ಕೈಗೊಂಡಿದ್ದು ಸಾರಿಗೆ ನೌಕರರು ಸಿದ್ಧರಾಗಬೇಕು ಎಂದು ಸಭೆಯಲ್ಲಿ ತಿಳಿಸಿ ನೌಕರರ ಏನೆ ಸಮಸ್ಯೆ ಬಂದರು ಕೂಟದ ಪದಾದಿಕಾರಿಗಳು ನೌಕರರ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ಕೂಟದ ಬೆಳಗಾವಿ ವಿಭಾಗ ಗೌರವ ಅದ್ಯಕ್ಷರು ಮಹೇಶ್ ಶೀಗಿಹಳ್ಳಿ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ಮಾಡಿ ಮುಂದಿನ ಹೋರಾಟ ರೂಪುರೇಷೆಗಳನ್ನು ಕೈಗೊಂಡು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು.

ಈ ಸಂದರ್ಬದಲ್ಲಿ ಕೂಟದ ಪದಾದಿಕಾರಿಗಳು ನೌಕರರು ಸದಸ್ಯರು ಉಪಸ್ಥಿತರಿದ್ದರು.