ಸ್ವಚ್ಛತೆಗಾಗಿ ತಿಂಗಳಿಗೆ 3 ಕೋಟಿ ವೆಚ್ಚ ಮಾಡಿದರೂ ನಗರದಲ್ಲಿ ಅಸ್ವಚ್ಛತೆ..
ವಾರ್ಡ್ 9 ಹಾಗೂ 10 ರಲ್ಲಿ ಗಬ್ಬೆದ್ದು ನಾರುತ್ತಿರುವ ಕಸದ ರಾಶಿಗಳು..
ಪಾಲಿಕೆಯ ಆರೋಗ್ಯ ವಿಭಾಗಕ್ಕೆ ಸಾರ್ವಜನಿಕರಿಂದ ಹಿಡಿಶಾಪ..
ಬೆಳಗಾವಿ : ಪಾಲಿಕೆಯ ಅನುದಾನದಲ್ಲಿ ಅತೀ ಹೆಚ್ಚು ಅಂದರೆ ತಿಂಗಳಿಗೆ ಸುಮಾರು 3 ಕೋಟಿಯಷ್ಟು ಖರ್ಚು ಮಾಡುವದು ನಗರದ ಸ್ವಚ್ಛತೆ ಹಾಗೂ ಕಸದ ವಿಲೇವಾರಿಗಾಗಿ ಹೀಗಿದ್ದರೂ, ಕೆಲ ವಾರ್ಡುಗಳಲ್ಲಿ ಕಸದ ರಾಶಿ ಹಾಗೆ ಇರುವದರಿಂದ ಸಾರ್ವಜನಿಕರಿಗೆ ತೊಂದರೆ ಆಗಿ, ಜನರು ಪಾಲಿಕೆಯ ಆರೋಗ್ಯ ವಿಭಾಗಕ್ಕೆ ಚಿಮಾರಿ ಹಾಕಿ, ಹಿಡಿಶಾಪ ಹಾಕುತ್ತಿದ್ದಾರೆ.

ವಾರ್ಡ್ ಸಂಖ್ಯೆ 9 ಹಾಗೂ 10ರಲ್ಲಿ, ಕಸದ ರಾಶಿಗಳು ಎಲ್ಲೆಂದರಲ್ಲಿ ಗೋಚರಿಸುತ್ತಿದ್ದು, ಅನೇಕ ಅರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು ಜೊತೆಗೆ ಬೆಳಗಾವಿ ಇದೊಂದು ಅಸ್ವಚ್ಛತೆಯ, ಕಸದ ನಗರ ಎಂದು ಜನರಿಗೆ ಗೋಚರಿಸುತ್ತಿದೆ. ಸದರಿ ವಾರ್ಡಿನಲ್ಲಿ ಎಷ್ಟು ಸ್ವಚ್ಛತಾ ಸಿಬ್ಬಂದಿಗಳು ಇದ್ದಾರೆ? ಎಷ್ಟು ಅವಧಿ ಕಾರ್ಯ ಮಾಡುತ್ತಾರೆ? ಕಸ ಸಂಗ್ರಹಣೆ ವಿಲೇವಾರಿ ಸಮಯಕ್ಕೆ ಸರಿಯಾಗಿ ಯಾಕೆ ಆಗುತ್ತಿಲ್ಲ? ಜನರಿಗೆ ಸ್ವಚ್ಛತೆ ನೀಡದಿದ್ದರೆ ನಿಮಗೆ ನೌಕರಿ ಏಕೆ? ಸಂಬಳ ಏಕೆ? ಎಂಬ ಸಾರ್ವಜನಿಕರ ಪ್ರಶ್ನೆಗೆ ಸ್ಥಳೀಯ ಆರೋಗ್ಯ ನೀರಿಕ್ಷಕ ಹಾಗೂ ಪಾಲಿಕೆಯ ಅರೋಗ್ಯ ಅಧಿಕಾರಿ ಉತ್ತರ ನೀಡಬೇಕು..

ತಾನಾಜಿ ಗಲ್ಲಿಯ ರೇಲ್ವೆ ಹಳಿಯ ಪಕ್ಕದ ಸಾರ್ವಜನಿಕ ವಸತಿ ಪ್ರದೇಶದಲ್ಲಿ, ಬೀಟ್ ಕಚೇರಿಯ ಎದುರಿಗೆ ಇರುವ ಕಪಿಲೇಶ್ವರ ದೇವಸ್ಥಾನದ ಎದುರಿನ ಹೊಂಡದಲ್ಲಿ, ರೇಲ್ವೆ ಸ್ಟೇಷನ್ ರಸ್ತೆಯ, ಮುಜಾವರ ಗಲ್ಲಿಯ ಕಾರ್ನರ್, ಕೆನರಾ ಬ್ಯಾಂಕಿನ ಎದುರಿಗೆ, ಸಂಭಾಜಿ ಮೈದಾನದ ಅಕ್ಕಪಕ್ಕ, ಪುಲಭಾಗಲ್ಲಿಯಲ್ಲಿ ಚರಂಡಿಯಿಂದ ತಗೆದ ಕಸವನ್ನು ಜನರು ಓಡಾಡುವ ರಸ್ತೆಯ ಮೇಲೆಯ ಹಾಕಿದ್ದು ಹೀಗೆ ಇವರ ಬೇಜವಾಬ್ದಾರಿ ಕೆಲಸಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಮುಂಜಾನೆ ವೇಳೆಯಲ್ಲಿ ಶಾಲಾ ಮಕ್ಕಳು ಶಾಲೆಗೆ, ಸಾರ್ವಜನಿಕರು ತಮ್ಮ ಕೆಲಸಗಳಿಗೆ ಸಾಗುವಾಗ ಎದುರಿಗೆ ಇಂತಹ ಕಸದ ರಾಶಿಗಳು ಇರುತ್ತವೆ, ಜನರು ಎಷ್ಟೋ ಸಲ ಹೇಳಿದರೂ ಕಸ ವಿಲೇವಾರಿ ಆಗುವದಿಲ್ಲ, ಜನರು ಕಟ್ಟುವ ತೆರಿಗೆಗೆ ಅವರಿಗೆ ಸರಿಯಾದ ಸ್ವಚ್ಛತೆಯ ಸೌಲಭ್ಯ ನೀಡದಿದ್ದರೆ ಆರೋಗ್ಯ ವಿಭಾಗ ಇದ್ದು ಏನು ಪ್ರಯೋಜನ? ಕಲಾದಗಿ ಅವರೇ ನಗರ ಸೇವಕರನ್ನು, ಶಾಸಕರನ್ನು ಕರೆದು ಕೇವಲ ಫೋಟೋ ತಗೆಸಿ, ಸ್ವಚ್ಛತಾ ಕಾರ್ಯಕ್ರಮ ಮಾಡೋದು ಅಲ್ಲಾ, ನಗರವನ್ನು ಸ್ವಚ್ಛವಾಗಿ ಇಟ್ಟು, ಜನರಿಗೆ ಸ್ವಚ್ಛತೆಯ ಸೌಲಭ್ಯ ನೀಡಬೇಕು, ಅದರ ಜೊತೆಗೆ ಸ್ವಚ್ಛತಾ ಕೋರ್ಸ್ ಮಾಡಿದವರನ್ನು ಆರೋಗ್ಯ ನೀರಿಕ್ಷಕ ಹುದ್ದೆಗೆ ನಿಯೋಜಿಸಿ, ನಿಮಗೆ ಬೇಕಾದವರನ್ನು ಅಲ್ಲಾ.. ಆಗ ನಗರ ಸ್ವಲ್ಪ ಸ್ವಚ್ಛವಾದರೂ ಆಗುತ್ತದೆ.

ವರದಿ ಪ್ರಕಾಶ್ ಬಿ ಕೆ..