ಖಾನಾಪುರ ತಾಲೂಕಿನ ತೀರ್ಥಕುಂಡೆ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಸಿ..

ಖಾನಾಪುರ ತಾಲೂಕಿನ ತೀರ್ಥಕುಂಡೆ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಸಿ..

ಜಮೀನುಗಳಲ್ಲಿ ವಾಸಿಸುವ ಜನತೆಗೆ ಮೂಲಭೂತ ಸೌಲಭ್ಯ ಒದಗಿಸಿ..

ಮಹೇಶ ಸಿಗಿಹಳ್ಳಿ..

ಖಾನಾಪುರ : ತಾಲೂಕಿನ ತೀರ್ಥಕುಂಡೆ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಸಂಪರ್ಕ ಇಲ್ಲದೆ ರೈತರು ಹಾಗೂ ಜಮೀನಿನಲ್ಲಿ ವಾಸಿಸುವ ಕುಟುಂಬಗಳಿಗೆ ಹಲವು ಸಮಸ್ಯೆಗಳು ಆಗುತ್ತಿದ್ದು ಆದಕಾರಣ ತೀರ್ಥಕುಂಡೆ ಗ್ರಾಮದ ಜಮೀನುಗಳಲ್ಲಿ ವಾಸಿಸುವ ಕುಟುಂಬಗಳಿಗೆ ದಿನದ 24 ಗಂಟೆಗಳ ಕಾಲ ವಿದ್ಯುತ ಪೂರೈಸುವಂತೆ ಮನವಿ ಮಾಡಲಾಯಿತು.

ಅದೇರೀತಿ ರೈತರಿಗೆ ಹಾಗೂ ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ನೀರು ಪೂರೈಸಲು ದಿನನಿತ್ಯ ನೀಡುವ 7 ಗಂಟೆಗಳ ವಿದ್ಯುತ ಸಂಪರ್ಕವು ಕೂಡ ಕಳೆದ 8 ದಿನಗಳಿಂದ ವಿದ್ಯುತ್ ಪೂರೈಕೆ ನಿಂತಿದ್ದು ಇದರಿಂದ ನೀರಿಲ್ಲದೆ ಮತ್ತು ಪವರ್ ಮ್ಯಾನ್ ಇಲ್ಲದೆ ರೈತರ ಪರಸ್ಥಿತಿ ಹಾಗೂ ಜಮೀನುಗಳಲ್ಲಿ ಇರುವ ಮನೆಗಳಲ್ಲಿ ವಾಸಿಸುವ ರೈತರ ಹಾಗೂ ಜಾನುವಾರ ಕುರಿಗಳ ಪರಸ್ಥಿತಿ ತುಂಬಾ ಹದಗೆಟ್ಟಿದೆ ಹಾಗೂ ಜಮೀನುಗಳಲ್ಲಿ ಇರುವ ಟಿಸಿ ಗಳು ಕೂಡ ಹದಗೆಟ್ಟು ಹೊಸದಾಗಿ ಅಥವಾ ರಿಪೇರಿ ಮಾಡುವ ಪವರ್ ಮ್ಯಾನಗಳ ಯಾವುದೆ ಸ್ಪಂದನೆ ಇರದೆ ಗ್ರಾಮದ ಜನರು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ ಎಂದು ಗ್ರಾಮದ ಪರವಾಗಿ ಕಿತ್ತೂರು ಕರ್ನಾಟಕ ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ್ ಎಸ್ ಶೀಗಿಹಳ್ಳಿ ರವರು ಖಾನಾಪುರ ತಾಲೂಕಿನ AEE ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದರೆ ಖಾನಾಪುರ KEB ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ, ಈ ಸಂದರ್ಬದಲ್ಲಿ ಬಾಳು ಮುತ್ಯನಟ್ಟಿ
ಮಹಾದೇವ ಕೊಡತಿ,
ಸಿದ್ರಾಮ್ ಜಾಂಬೋಟಿ, ರಾಮಲಿಂಗ್ ಮೊರೆ,
ಲಗಮೋಜಿ ಗವನ್ನವರ,
ಮಲ್ಲಿಕಾರ್ಜುನ ಗುಣ್ಣಗೋಳ,
ಉದಯ ಪಾಟೀಲ ಪ್ರಕಾಶ್ ಮಜಗವಿ, ನಂದು ಹೊನಗೆಕರ
ಹಾಗೂ ರೈತ ಬಾಂಧವರು ಉಪಸ್ಥಿತರಿದ್ದರು.