ಗಣಪತಿ ಮೂರ್ತಿ ತಯಾರಿಕಾ ಕೇಂದ್ರಗಳಿಗೆ ಅಧಿಕಾರಿಗಳ ಬೇಟಿ.

ಗಣಪತಿ ಮೂರ್ತಿ ತಯಾರಿಕಾ ಕೇಂದ್ರಗಳಿಗೆ ಅಧಿಕಾರಿಗಳ ಬೇಟಿ.

ರಾಸಾಯನಿಕ ಬಣ್ಣ ಬಳಸದಂತೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ಎಚ್ಚರಿಕೆ..

ಪರಿಸರ ಸ್ನೇಹಿ ಮರಳಿನ ಗಣಪತಿ ತಯಾರಿಕೆಗೆ ಸೂಚನೆ..

ಬೆಳಗಾವಿ : ಇನ್ನೇನು ಕೆಲವೇ ದಿನಗಳಲ್ಲಿ ಆಗಮಿಸುವ ನಾಡಿನ ದೊಡ್ಡ ಹಬ್ಬಗಳಲ್ಲಿ ಒಂದಾದ ಗಣೇಶ ಹಬ್ಬದ ಅಂಗವಾಗಿ ಈಗಾಗಲೇ ಎಲ್ಲಾ ಕಡೆಗೆ ಸಿದ್ಧತೆಗಳು ಅತೀ ವೇಗವಾಗಿ ನಡೆಯುತ್ತಿವೆ, ಅದೇ ರೀತಿ ಹಬ್ಬಕ್ಕೆ ಮುಖ್ಯ ಆಕರ್ಷಣೆ ಎಂದರೆ ಗಣಪತಿ ವಿಗ್ರಹಗಳು, ಗಣೇಶ ಮೂರ್ತಿಗಳ ತಯಾರಿಕೆಗಳು ಕೂಡಾ ಅತೀ ವೇಗವಾಗಿ ಸಂಭ್ರದಿಂದ ಸಾಗುತ್ತಿದ್ದು, ವಿಗ್ರಹ ತಯಾರಿಕಾ ಕೆಲ ಕೇಂದ್ರಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ..

ಗುರುವಾರ ನಗರದ ವಡಗಾವಿ, ಕಪಿಲೇಶ್ವರ ರಸ್ತೆ, ಆಟೋ ನಗರ, ಗುಡ್ ಶೆಡ್ ರಸ್ತೆಗಳಲ್ಲಿಯ ಗಣಪತಿ ವಿಗ್ರಹ ತಯಾರಿಕಾ ಕೇಂದ್ರಗಳಿಗೆ ಕಿರಿಯ ಪರಿಸರ ಅಧಿಕಾರಿ ಹನುಮಂತಪ್ಪ ಎಚ್ ಅವರ ನೇತೃತ್ವದಲ್ಲಿ ಬೇಟಿ ನೀಡಿದ ಸಿಬ್ಬಂದಿ ತಂಡ ವಿಗ್ರಹ ತಯಾರಿಕಾ ಕಾರ್ಯವನ್ನು ಪರಿಶೀಲನೆ ಮಾಡಿ, ಮೂರ್ತಿ ತಯಾರಿಕರಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ.

ಪಿಓಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ವಿಗ್ರಹಗಳನ್ನು ಮಾಡಕೂಡದು, ರಾಸಾಯನಿಕ ಪೌಡರ್ ಬಳಸಿ ತಯಾರಿಸಬಾರದು, ಒಂದು ವೇಳೆ ಬಳಸಿದ್ದೆ ಆದರೆ ಅಂತವರ ಮೇಲೆ ಕ್ರಮ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಣ್ಣಿನಿಂದ ಮಾಡಿದ “ಪರಿಸರ ಸ್ನೇಹಿ” ವಿಗ್ರಹ ತಯಾರಿಸಲು ಸೂಚನೆ ನೀಡಿದ್ದು, ನೀರು ಮಿಶ್ರಿತ ಬಣ್ಣವನ್ನು ಬಳಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಬೇಟಿ ನೀಡಿದ ಎಲ್ಲಾ ವಿಗ್ರಹ ತಯಾರಿಕಾ ಕೆಂಡಗಳಿಂದಲೂ ವಿಗ್ರಹ ತಯಾರಿಕೆಗೆ ಬಳಸುವ ಮಣ್ಣನ್ನು ಪರೀಕ್ಷೆಗೆ ತಂದಿದ್ದಾರೆ, ಈ ಪರಿಶೀಲನಾ ಕಾರ್ಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಕಿರಿಯ ಪರಿಸರ ಅಧಿಕಾರಿಗಳಾದ ಹಣಮಂತಪ್ಪ ಎಚ್, ಕ್ಷೇತ್ರ ಅಧಿಕಾರಿ ರಾಜೇಶ್, ದತ್ತಾoಶ ನಮೂದಕ ರವೀಂದ್ರ ಹಾಗೂ ಇನ್ನಿತರ ಸಿಬ್ಬಂದಿಗಳು ಇದ್ದರು..

ವರದಿ ಪ್ರಕಾಶ್ ಬಿ ಕೆ.