ಬೆಳಗಾವಿ : ಗಣಪತಿ ಹಬ್ಬದ ನಿಮಿತ್ತ ಬುಧವಾರ ರಾತ್ರಿ ವಾರ್ಡ ಸಂಖ್ಯೆ 4ರ ನಗರ ಸೇವಕ ಜಯತೀರ್ಥ ಸವದತ್ತಿ ಅವರ ನೇತೃತ್ವದಲ್ಲಿ ಕಾವೇರಿ ಕೊಡ್ರಿಂಕ್ಸ್ ಎದುರಿನ ರಾಮದೇವ ಗಲ್ಲಿ, ಸಮಾದೇವ ಗಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಹಾಳಾದ ರಸ್ತೆಗಳಿಗೆ ಡಾಂಬರ್ ಹಾಗೂ ಕಾಂಕ್ರೀಟ್ ಹಾಕುವ ಮೂಲಕ ತಗ್ಗು ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತರಾದ ಕಾರ್ತಿಕ ಎಂ, ಬೆಳಗಾವಿ ಉತ್ತರದ ಶಾಸಕರಾದ ಆಶಿಫ್ (ರಾಜು) ಸೇಠ್ ಹಾಗೂ ಪಾಲಿಗೆಯ ಅಭಿವೃದ್ಧಿ ವಿಭಾಗದ ಅಧಿಕಾರಿಗಳಾದ ಜಗದೀಶ್, ಅಶೋಕ್ ನಾಯಕ್, ಲಕ್ಷ್ಮಣ್ ಮೇಟಿ ಹಾಗೂ ಇತರರು ಉಪಸ್ಥಿತರಿದ್ದರು.

ಈ ರಸ್ತೆ ದುರಸ್ಥಿ ಕಾರ್ಯ ರಾತ್ರಿ ಪ್ರಾರಂಭವಾಗಿ ಬೆಳಗ್ಗೆ ಸುಮಾರು 4 ಗಂಟೆವರೆಗೆ ಮಾಡಲಾಗಿದ್ದು, ಇನ್ನುಳಿದ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಇಂದು ಹಾಗೂ ನಾಳೆ ಕೂಡ ಮಾಡಲಾಗುವುದು ಎಂದು ಸ್ಥಳೀಯ ನಗರ ಸೇವಕ ಜಯತೀರ್ಥ ಸವದತ್ತಿ ಅವರು ಮಾಹಿತಿ ನೀಡಿದ್ದಾರೆ.