ಜನಗಣತಿ ತರಬೇತಿ ಕೇಂದ್ರಕ್ಕೆ ಪಾಲಿಕೆ ಆಯುಕ್ತರ ಬೇಟಿ..
ದೇಶದ ಪ್ರಗತಿಗೆ ಜನಗಣತಿ ಎಂಬುದು ನಾವು ಮಾಡುವ ಅಳಿಲು ಸೇವೆ..
ಕಾರ್ತಿಕ ಎಂ, ಆಯುಕ್ತರು ಮಹಾನಗರ ಪಾಲಿಕೆ ಬೆಳಗಾವಿ..
ಬೆಳಗಾವಿ : ಮಂಗಳವಾರ ದಿನಾಂಕ 7-4-2026 ರಂದು ನಗರದ ಶರ್ಮನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜನಗಣತಿ ತರಬೇತಿ ಕೇಂದ್ರಕ್ಕೆ ಪಾಲಿಕೆಯ ಆಯುಕ್ತರಾದ ಕಾರ್ತಿಕ ಎಂ ಅವರು ಭೇಟಿ ನೀಡಿ ಜನಗಣತಿ ಚಾರ್ಜ್ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಿದರು.
ತರಬೇತಿ ಪಡೆಯುತ್ತಿರುವ ಶಿಕ್ಷಕರ ಬಳಿ ತೆರಳಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು ದೇಶದ ಅಭಿವೃದ್ಧಿಯಲ್ಲಿ ನಮ್ಮೆಲ್ಲರ ಒಂದು ಅಳಿಲು ಸೇವೆ ಇದಾಗಿದ್ದು ಸದರಿ ಕಾರ್ಯದಲ್ಲಿ ತಾವೆಲ್ಲರೂ ಅತ್ಯಂತ ಖುಷಿಯಿಂದ ಭಾಗವಹಿಸಿ ಸದರಿ ಕಾರ್ಯವನ್ನು ಯಶಸ್ವಿಗೊಳಿಸಲು ಕೈಜೋಡಿಸುವಂತೆ ಬೆಳಗಾವಿ ಪಾಲಿಕೆಯ ಆಯುಕ್ತರು ಕರೆ ನೀಡಿದರು.

ಈ ವೇಳೆ ಬೆಳಗಾವಿ ನಗರ ಜನಗಣತಿ ಅಧಿಕಾರಿ ಡಾ ಸಿದ್ದು ಹುಲ್ಲೋಳ್ಳಿ, ಏಳು ಜನ ಚಾರ್ಜ್ ಅಧಿಕಾರಿಗಳು, ಏಳು ಜನ ವಿಷಯ ನಿರ್ವಾಹಕರು, 15 ಜನ ನುರಿತ ತರಬೇತಿದಾರರು, ಮೇಲ್ವಿಚಾರಕರು ಹಾಗೂ ಸುಮಾರು 350 ಗಣತಿದಾರರು ಇದ್ದರು.