ಮತದಾರ ಪಟ್ಟಿ ಮ್ಯಾಪಿಂಗ್ ಹಾಗೂ ಪ್ರೊಜನಿ ಪರಿಶೀಲನಾ ಸಭೆ..
ಕಡಿಮೆ ಪ್ರಗತಿ ಸಾಧಿಸಿದ ಬಿಎಲ್ಒಗಳಿಗೆ ಅಂತಿಮ ಎಚ್ಚರಿಕೆ..
7 ದಿನಗಳ ಗಡುವು, ಆಗದಿದ್ದರೆ ಅಮಾನತ್ತಿಗೆ ಶಿಫಾರಸ್ಸು..
ಬೆಳಗಾವಿ : ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನಾವು ಪರಿಹಾರ ನೀಡುತ್ತೇವೆ, ನಿಮ್ಮ ಪ್ರಶ್ನೆಗಳಿಗೆ ನಾವು ಉತ್ತರ ನೀಡುತ್ತೇವೆ, ಆದರೆ ನೀವು ಸರಿಯಾಗಿ ತಮಗೆ ನಿಯೋಜಿಸಿದ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದರೆ ಮಾತ್ರ, ಇಲ್ಲವಾದರೆ ನಿಮ್ಮ ಮ್ಯಾಪಿಂಗ್ ಹಾಗೂ ಪ್ರೊಜನಿ ಕಾರ್ಯ ಯಾವತ್ತೂ ಗುರಿ ಮುಟ್ಟುವದಿಲ್ಲ, ಮುಂದೆ ನಿಮ್ಮಮೇಲೆ ಆಗುವ ಕ್ರಮವೂ ತಪ್ಪುವದಿಲ್ಲ ಎಂದು ಬೆಳಗಾವಿ ಉತ್ತರದ ಮತದಾರ ನೊಂದಣಾಧಿಕಾರಿಗಳಾದ ಉದಯಕುಮಾರ ತಳವಾರ ಅವರು ಬಿಎಲ್ಒಗಳಿಗೆ ಕೊನೆಯ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಪಾಲಿಕೆಯ ಸಭಾ ಭವನದಲ್ಲಿ ಜರುಗಿದ ಗಂಭೀರ ಸಭೆಯಲ್ಲಿ, ಶೇಕಡಾ 50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ ಬಿಎಲ್ಒಗಳಿಗೆ ಕ್ಲಾಸ್ ತಗೆದುಕೊಂಡ ಅಧಿಕಾರಿ, ತಮಗೆ ಈಗಾಗಲೇ ನಾಲ್ಕು ತಿಂಗಳು ಸಮಯಾವಕಾಶ ನೀಡಿದ್ದು, ಇನ್ನು ಅರ್ಧದಷ್ಟು ಕೂಡಾ ನೀವು ಕೆಲಸ ಮಾಡಿಲ್ಲ, ನೀವು ಸರಿಯಾಗಿ ಸ್ಥಳಕ್ಕೆ ಹೋಗಿ ಕೆಲಸ ಮಾಡಿದ್ದರೆ ಇಂದು ಈ ಸಮಸ್ಯೆ ಬರಿತ್ತೀರಲಿಲ್ಲ, ಮನೆಯಲ್ಲಿ ಕುಳಿತು ಅಂದಾಜಾಗಿ ಏನೇನೋ ಕಾರಣ ನೀಡಬೇಡಿ, ಇದು ಬಿಡಲಾರದ ಕರ್ಮ, ನೀವು ಮಾಡಲೇಬೇಕು, ಸರ್ಕಾರದ ಸಂಬಳ ಪಡೆಯುವಾಗ ಸರ್ಕಾರದ ಕೆಲಸವನ್ನು ಜವಾಬ್ದಾರಿಯಿಂದ ಮಾಡಲೇಬೇಕು, ಆಗೋಲ್ಲ ಎಂದರೆ ಹೇಳಿ ತಮ್ಮನ್ನು ಅಮಾನತ್ತು ಮಾಡಿ, ಆ ಸ್ಥಳಕ್ಕೆ ಬೇರೆಯವರನ್ನು ನಿಯೋಜನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮ್ಯಾಪಿಂಗ್ ಹಾಗೂ ಪ್ರೊಜನಿಗಾಗಿ ತಮಗೆ ನೀಡಿರುವ ಒಟ್ಟು ಸಂಖ್ಯೆಗೆ, ತಾವು ಈಗಾಗಲೇ ಮಾಡಿರುವ ವರದಿ ಮಾಡಿರುವ ಸಂಖ್ಯೆ, ಗೈರು, ಸ್ಥಳಾoತರ ಹಾಗೂ ಮರಣ ಹೊಂದಿದವರ ಸಂಖ್ಯೆಗಳು ಹೊಂದಾಣಿಕೆ ಆಗಬೇಕು ಆಗ ಮಾತ್ರ ನೀವು ಸರಿಯಾಗಿ ಕೆಲಸ ಮಾಡಿದಂತೆ, ತಮಗೆ ನೀಡಿದ ಒಟ್ಟು ಸಂಖ್ಯೆಗೆ ASDY ಹೊಂದಾಣಿಕೆ ಆಗಲಿಲ್ಲ ಎಂದರೆ ತಾವು ದೇವರ ಸಂಖ್ಯೆ ಹಾಕಿದ್ದೀರಿ ಅಂದರೆ ಅಂದಾಜು ಮಾಡಿಕೊಂಡು ಬಂದಿದ್ದೀರಿ ಎಂದಾಗುತ್ತದೆ ಎಂದಿದ್ದಾರೆ.
ತಮಗೆ ಏನೇ ಸಮಸ್ಯೆ ಇದ್ದರೂ ತಮ್ಮ ಮೇಲ್ವಿಚಾರಕರನ್ನು ಕೇಳಬೇಕಿತ್ತು, ಡಾಟಾ ಓಪರೇಟರ್ ಇದಾರೆ ಅವರನ್ನು ಕೇಳಬೇಕಿತ್ತು, ಡಾಟಾ ಒಪರೇಟರ್ ಮೊಬೈಲ್ ನಂಬರ ತಮ್ಮ ಬಳಿ ಇಲ್ಲಾ, ಇನ್ನು ನಿಮ್ಮ ಸಮಸ್ಯೆ ಹೇಗೆ ಬಗೆಹರಿಯುತ್ತೆ? ಗೈರು, ಸ್ಥಳಾoತರ, ಮರಣ, ಈಗಾಗಲೇ ಬೇರೆ ಯಾರೋ ಮಾಡಿರುವ ಸಂಗತಿಗಳಿದ್ದರೆ ಅದರಲ್ಲಿ ತಮಗೆ ತೊಂದರೆ ಇದ್ದರೆ ನಾವು ತಮಗೆ ಸರಿಪಡಿಸುತ್ತೇವೆ, ಅದು ನೀವು ಅಲ್ಲಿ ಹೋಗಿ ಕೆಲಸ ಮಾಡಿ ಅಲ್ಲಿಯ ಅಂಕಿಅಂಶಗಳನ್ನು ಸಂಗ್ರಹಿಸಿದಾಗ ಮಾತ್ರ ಎಂದಿದ್ದಾರೆ.

ಇದು ಅಂತಿಮ ಸೂಚನೆ, ಕೊನೆಯ ಸಭೆ, ಇನ್ನು ಏಳು ದಿನಗಳ ಒಳಗೆ ನಮಗೆ ಉತ್ತಮ ಪ್ರಗತಿ ನೀಡಬೇಕು, ಇಲ್ಲವಾದರೆ ಮತ್ತೆ ಕಡಿಮೆ ಪ್ರಗತಿ ಸಾಧಿಸಿದ ಬಿಎಲ್ಓಗಳ ಮೇಲೆ ಶಿಸ್ತು ಕ್ರಮ ಖಂಡಿತ ಆಗೇ ಆಗುತ್ತದೆ ಅದಕ್ಕೆ ತಾವು ಸಿದ್ದರಿರಬೇಕು, ಈ ಏಳು ದಿನಗಳಲ್ಲಿ ಆದಷ್ಟು ಎಲ್ಲರೂ ಸರಿಯಾಗಿ ಮಾಡಿಕೊಂಡು ಬನ್ನಿ ಎಂದು ಕಿವಿಮಾತು ಹೇಳಿ ಸಭೆಯನ್ನು ಕೊನೆಗೊಳಿಸಿದರು.
ವರದಿ ಪ್ರಕಾಶ್ ಬಿ ಕೆ..