ಪಾಲಿಕೆಯ ಆಡಳಿತ ಪಕ್ಷ ಬಿಜೆಪಿಯಲ್ಲಿಯೇ ಭಿನ್ನಮತ..

ಪಾಲಿಕೆಯ ಆಡಳಿತ ಪಕ್ಷ ಬಿಜೆಪಿಯಲ್ಲಿಯೇ ಭಿನ್ನಮತ..

ತನಿಖೆ ಮಾಡಿ ತಪ್ಪಿತಸ್ಥ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸಿ ಎನ್ನುವ ಒಬ್ಬ ನಗರ ಸೇವಕಿ..

ತನಿಖೆ ಮಾಡೋ ಅಧಿಕಾರಿ ಮೇಲೆಯೇ ನನ್ನ ಅಪವಾದ ಇದೆ ಎನ್ನುವ ಮತ್ತೊಬ್ಬ ನಗರ ಸೇವಕಿ..

ಬೆಳಗಾವಿ : ಕಳೆದ ಕೆಲ ದಿನಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯ ದಕ್ಷಿಣ ಕಂದಾಯದ ವಿಭಾಗದಲ್ಲಿ ಆಗಿರುವ ಕೆಲ ಸಿಬ್ಬಂದಿಗಳ ಕರ್ತವ್ಯಲೋಪದ ವಿಷಯದಿಂದಾಗಿ, ಪಾಲಿಕೆಯ ಆಡಳಿತ ಪಕ್ಷ, ಶಿಸ್ತಿನ ಪಕ್ಷ ಎನಿಸಿಕೊಂಡಿರುವ ಬಿಜೆಪಿ ಪಕ್ಷದ ನಗರ ಸೇವಕರಲ್ಲಿಯೇ ಭಿನ್ನಮತ ಉಂಟಾಗಿ, ಒಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ, ಇದು ಪಾಲಿಕೆಯ ಆಯುಕ್ತರಾದಿಯಾಗಿ ಕೆಲ ಅಧಿಕಾರಿಗಳಿಗೂ ತಲೆನೋವು ಆಗಿರುವ ಶಂಕೆಯಿದೆ..

ಕಳೆದ ಕೆಲ ದಿನಗಳ ಹಿಂದೆ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿಯಮಬಾಹಿರವಾಗಿ ನೀಡಿರುವ 41 ಪಿಐಡಿಗಳ ವಿಷಯವನ್ನು ವಾರ್ಡ ಸಂಖ್ಯೆ 7ರ ಸ್ವತಂತ್ರ ಅಭ್ಯರ್ಥಿ ನಗರಸೇವಕ ಶಂಕರ್ ಪಾಟೀಲ್ ಪ್ರಸ್ತಾಪಿಸಿದ್ದು, ಇದರ ತನಿಖಾ ವರದಿ ಎಲ್ಲಿಗೆ ಬಂತು, ತಪ್ಪು ಮಾಡಿದ್ದೇವೆ ಎಂದು ಹೇಳುತ್ತಿರುವ ಆ ಸಿಬ್ಬಂದಿಗಳ ಮೇಲೆ ಯಾವಾಗ ಕ್ರಮ ಆಗುತ್ತೆ ಎಂದು ಆಯುಕ್ತರನ್ನು ಪ್ರಶ್ನೆ ಮಾಡಿದರು.

ಅದೇ ವಿಷಯಕ್ಕೆ ಧ್ವನಿಗೂಡಿಸಿದ ವಾರ್ಡ್ ಸಂಖ್ಯೆ 50ರ, ಬಿಜೆಪಿ ಪಕ್ಷದ ನಗರ ಸೇವಕಿ ಸರಿತಾ ಪಾಟೀಲ್ ಅವರು ಇದು ನನ್ನ ವಾರ್ಡಿಗೆ ಬರುವ ಸಮಸ್ಯೆ, ಅಲ್ಲಿನ ಜನರು ಕೇಳುವ ಪ್ರಶ್ನೆಗೆ ನಾನು ಉತ್ತರಿಸಬೇಕಾಗಿದೆ, ಮಾದ್ಯಮದಲ್ಲಿ ಈ ವಿಷಯ ಬರುತ್ತಿದ್ದು, ಇದರ ಬಗ್ಗೆ ಇನ್ನು ಯಾಕೆ ಕ್ರಮ ತಗೆದುಕೊಂಡಿಲ್ಲ, ಇನ್ನು ಎಷ್ಟು ಸಮಯ ಬೇಕು, ಎಂದು ಕೇಳಿದರು.

ಆಗ ಮಧ್ಯಪ್ರವೇಶ ಮಾಡಿದ ವಾರ್ಡ್ ಸಂಖ್ಯೆ 43ರ, ಬಿಜೆಪಿ ಪಕ್ಷದ ನಗರ ಸೇವಕಿ ವಾಣಿ ಜೋಶಿ ಅವರು ಮಾತನಾಡುತ್ತಾ, ಈಗ ಇವರೆಲ್ಲ ಏನು ತನಿಖೆ ಮಾಡಬೇಕು ಎಂದು ಹೇಳುತ್ತಿದ್ದಾರಲ್ಲ, ಆ ತನಿಖಾ ಅಧಿಕಾರಿ ಮೇಲೆ ಮೊದಲು ತನಿಖೆ ಆಗಬೇಕಾಗಿದೆ, ಅಂತವರನ್ನು ತಗೊಂಡು ನೀವು ತನಿಖೆ ಮಾಡುತ್ತಿದ್ದೀರಾ? ತನಿಖೆ ಯಾರು ಮಾಡಬೇಕು? ಯಾರ ಮೇಲೆ ಅಪವಾದ ಇಲ್ಲಾ ಅವರು ಮಾಡಬೇಕು ಎಂದಾಗ, ಅದಕ್ಕೆ ನಗರ ಸೇವಕ ಶಂಕರ ಪಾಟೀಲ ಪ್ರತಿಕ್ರಿಯೆ ನೀಡುತ್ತಾ ತಪ್ಪು ಮಾಡಿದವರೇ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಈಗ ತನಿಖೆ ಮಾಡುತ್ತಿರೋ ಅಧಿಕಾರಿ ಮೇಲೆ ನಾನೇ ಅಪವಾದ ಮಾಡಿದ್ದೇನೆ, ಅವರು ಹೇಗೆ ತನಿಖೆ ಮಾಡುತ್ತಾರೆ? ಆಯುಕ್ತರಾಗಿ ನೀವು ತನಿಖೆ ಮಾಡಿ ನಡೆಯುತ್ತೆ ಎಂದು ಮತ್ತೆ ತಮ್ಮ ವಿಚಾರವನ್ನು ನಗರ ಸೇವಕಿ ವಾಣಿ ಜೋಶಿ ಅವರು ಸಭೆಯಲ್ಲಿ ಹೇಳಿದರು. ಇದಕ್ಕೆ ಉತ್ತರ ನೀಡಿದ ಅದೇ ಪಕ್ಷದ ನಗರ ಸೇವಕಿ ಸಾರಿಕಾ ಪಾಟೀಲ್ ಅವರು ಮೇಡಂ ಇವತ್ತು ನೀವು ಅಪವಾದ ಮಾಡುತ್ತಿದ್ದೀರಿ, ಮೊದಲಿನಿಂದಲೇ ನಾವು ನಾಲ್ಕು ಸಿಬ್ಬಂದಿ ಮೇಲೆ ತನಿಖೆ ಮಾಡಲು ಹೇಳಿದ್ದೇವೆ ಎಂದರು.

ನಂತರ ಮಾತನಾಡಿದ ಬಿಜೆಪಿ ಪಕ್ಷದ ನಗರ ಸೇವಕ ಶ್ರೀಶೈಲ್ ಕಾಂಬ್ಳೆ ಅವರು, ತಪ್ಪು ಮಾಡಿದ ಸಿಬ್ಬಂದಿಗಳ ಜೊತೆ ಯಾರು ಆ ನಿಯಮಬಾಹಿರ ಪಿಐಡಿಗಳನ್ನು ಮಾಡಿಸಿಕೊಂಡಿದ್ದಾರೋ ಅವರ ಮೇಲೇಯೂ ಪ್ರಕರಣ ದಾಖಲು ಮಾಡಬೇಕು, ಅವರ ಮೇಲೇಯೂ ಕ್ರಮ ಆಗಬೇಕು ಎಂದರು, ಹೀಗೆ ದಕ್ಷಿಣ ಕಂದಾಯ ವಿಭಾಗದ ಈ ನಕಲಿ ಪಿಐಡಿಗಳ ವಿಷಯದಲ್ಲಿ ಬಿಜೆಪಿ ಪಕ್ಷದ ನಗರಸೇವಕರು ತಮ್ಮಲ್ಲೇ ಜಟಾಪಟಿ ಮಾಡುತ್ತಿದ್ದರೆ, ಪಾಲಿಕೆ ಬಿಜೆಪಿಯಲ್ಲಿ ಎಲ್ಲಾ ಸರಿ ಇಲ್ಲವೇನೋ ಎಂಬ ಅನುಮಾನ ಮೂಡುತ್ತದೆ, ಇತ್ತ ಪಾಲಿಕೆಯ ಅಧಿಕಾರಿಗಳಿಗೂ ಇದು ದೊಡ್ಡ ತಲೆನೋವು ಆದಂತಾಗಿದೆ..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *