ಪಾಲಿಕೆಯ ಕಂದಾಯ ವಿಭಾಗದಿಂದ ವಿನಾಯಕನಿಗೆ ವಿಜೃಂಭನೆಯ ಪೂಜೆ..
ಸಾಂಪ್ರದಾಯಿಕ ಉಡುಗೆ, ನೈವೇದ್ಯದೊಂದಿಗೆ ಭಕ್ತಿಪೂರ್ವ ಆರಾಧನೆ..
ಪೂಜೆಯಲ್ಲಿ ಭಾಗಿಯಾದ ನೂರಾರು ಭಕ್ತರಿಗೆ ಸೀರೆ ಹಾಗೂ ಟಿಶರ್ಟ್ ಉಡುಗೊರೆ..
ಬೆಳಗಾವಿ : ಗಣೇಶೋತ್ಸವದ ಅಂಗವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ವತಿಯಿಂದ ಆರನೇ ದಿನವಾದ ಶನಿವಾರದಂದು ವಿಘ್ನ ವಿನಾಯಕನಿಗೆ ಸಕಲ ವಿಧಿ–ವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಕಂದಾಯ ವಿಭಾಗದ ಉಪ ಆಯುಕ್ತರಾದ ಡಾ ಸಿದ್ದು ಹುಲ್ಲೋಳ್ಳಿ ಅವರ ಮಾರ್ಗದರ್ಶನದಲ್ಲಿ ಕಂದಾಯ ವಿಭಾಗದ ಎಲ್ಲ ಸಿಬ್ಬಂದಿಗಳು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ಭಕ್ತಿಭಾವದಿಂದ ಗಣಪತಿಗೆ ಪೂಜೆ ಸಲ್ಲಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ಮೊದಲಿಗೆ ಸಿಬ್ಬಂದಿಗಳಿಂದ ಗಣೇಶ ಭಕ್ತಿ ಗೀತೆಗಳ ಗಾಯನ ಜರುಗಿದ್ದು, ನಂತರ ವಿವಿಧ ಧಾರ್ಮಿಕ ಪೂಜಾ ವಿಧಿ–ವಿಧಾನಗಳನ್ನು ನೆರವೇರಿಸಿ, ವಿಘ್ನ ವಿನಾಯಕನಿಗೆ ವಿಶೇಷ ಆರಾಧನೆ ಮಾಡಲಾಯಿತು. ಪೂಜೆಯ ಬಳಿಕ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಘ್ನ ವಿನಾಯಕನಲ್ಲಿ ಪ್ರಾರ್ಥಿಸಿ, ನಗರದ ಹಾಗೂ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯ ಕರುಣಿಸುವಂತೆ ವಿನಾಯಕನಲ್ಲಿ ಬೇಡಿಕೊಂಡರು.

ಗಣೇಶೋತ್ಸವದ ಹಿನ್ನೆಲೆಯಲ್ಲಿ ನಡೆದ ಈ ವಿಶೇಷ ಪೂಜಾ ಕಾರ್ಯಕ್ರಮವು ಭಕ್ತಿಭಾವದ ವಾತಾವರಣದಲ್ಲಿ ಮೊಳಗಿದ್ದು, ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿದರು.

ಪೂಜಾ ಕಾರ್ಯದಲ್ಲಿ ಭಾಗಿಯಾದ ಪಾಲಿಕೆಯ ಎಲ್ಲಾ ವಿಭಾಗದ ನೂರಾರು ಸಿಬ್ಬಂದಿಗಳಿಗೆ ಸೀರೆ ಹಾಗೂ ಟಿ ಶರ್ಟ್ ನೀಡಿದ್ದು ಎಲ್ಲರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು, ಸಾಂಪ್ರದಾಯಿಕ ತಿಂಡಿಗಳನ್ನು ಪ್ರಸಾದಕ್ಕೆ ಸಿದ್ದಪಡಿಸಿ, ಎಲ್ಲರೂ ಖುಷಿಯಿಂದ ಪ್ರಸಾದ ಸವಿಯುವ ಸನ್ನಿವೇಶವನ್ನು ಕಂದಾಯ ವಿಭಾಗ ಸೃಷ್ಟಿ ಮಾಡಿತ್ತು.

ಸಾರ್ವಜನಿಕರ ಸೇವೆಯ ಜೊತೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಸಂದೇಶವನ್ನು ತೋರಿದ ಈ ಕಂದಾಯ ವಿಭಾಗದ ಪೂಜಾ ಕಾರ್ಯ, ಮನುಜರಾದ ನಾವೆಲ್ಲಾ ಒಂದೇ, ಮನುಜ ಜನ್ಮ ಶ್ರೇಷ್ಠ ಎಂಬ ಸಂದೇಶ ಸಾರುವಂತಿತ್ತು.
ಪ್ರಸಾದ ಪಡೆಯುವ ಹಾಗೂ ಉಡುಗೊರೆ ಸ್ವೀಕರಿಸುವ ವೇಳೆ ಪಾಲಿಕೆಯ ಕಚೇರಿಯ ಆವರಣ ಉತ್ಸವ, ಸಡಗರದಿಂದ ತುಂಬಿದ ಹಬ್ಬದ ಮನೆಯಂತಿತ್ತು.

ಕಂದಾಯ ಉಪ ಆಯುಕ್ತರಾದ ಡಾ ಸಿದ್ದು ಹುಲ್ಲೋಳ್ಳಿ ಅವರು ತಮ್ಮ ಸಕುಟುಂಬ ಪರಿವಾರದೊಂದಿಗೆ ಅತೀ ಸಂತೋಷ ಶೃದ್ದಾ ಭಕ್ತಿಯಿಂದ ಪೂಜೆಯಲ್ಲಿ ಭಾಗಿಯಾಗಿ, ಈ ವಿಶೇಷ ಗಣೇಶ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಪೂಜಾ ಕಾರ್ಯ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ವರದಿ ಪ್ರಕಾಶ್ ಬಿ ಕೆ..