ಬಸವನ ಕುಡಚಿಯ ಸಾಯೀಶ ಕಾಲೋನಿಯಲ್ಲಿ ಸಾಯಿಬಾಬಾ ಮಂದಿರದ ಲೋಕಾರ್ಪಣೆ..

ಬಸವನ ಕುಡಚಿಯ ಸಾಯೀಶ ಕಾಲೋನಿಯಲ್ಲಿ ಸಾಯಿಬಾಬಾ ಮಂದಿರದ ಲೋಕಾರ್ಪಣೆ..

ಸಾಯಿಬಾಬಾರ ಸಂದೇಶಗಳು ಸಾರ್ವಕಾಲಿಕ ಮೌಲ್ಯಗಳು..

ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ..

ಬೆಳಗಾವಿ : ಮಾನವ ಕುಲದ ಉದ್ಧಾರಕ್ಕಾಗಿ ಅವತರಿಸಿದ್ದ ಶಿರಡಿ ಸಾಯಿಬಾಬಾ ಅವರ ಸಂದೇಶಗಳು ಸಾರ್ವಕಾಲಿಕ ಮೌಲ್ಯಗಳಾಗಿವೆ ಎಂದು ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಹೇಳಿದರು.

ಗುರುವಾರ ಬಸವನ ಕುಡಚಿಯ ಸಾಯೀಶ ಕಾಲೋನಿಯಲ್ಲಿ ನವಜೀವನ ಫೌಂಡೇಶನ್ ಮುಖ್ಯಸ್ಥ ಡಾ. ಸತೀಶ ಚೌಳಿಗೇರ ಅವರಿಂದ ಸ್ಥಾಪಿಸಲಾದ ಶಿರಡಿ ಶ್ರೀ ಸಾಯಿ ಬಾಬಾ ಮಂದಿರ ಲೋಕಾರ್ಪಣಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಶಾಂತಿ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಧಾರ್ಮಿಕ ಕೇಂದ್ರಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿರಡಿ ಸಾಯಿಬಾಬಾ ಅವರು ಮಾನವಕುಲಕ್ಕೆ ಅಮೂಲ್ಯ ಸಂದೇಶವನ್ನು ನೀಡಿದ್ದಾರೆ ಅವರ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ. ಈ ಹಿನ್ನೆಲೆಯಲ್ಲಿ ಅಂತಹ ಮಹಾತ್ಮರ ಮಂದಿರವನ್ನು ಸ್ಥಾಪಿಸಿರುವ ಡಾ. ಸತೀಶ ಚೌಳಿಗೇರ ಅವರು ಮಾದರಿ ಕಾರ್ಯ ಮಾಡಿ ಬದುಕನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಚನ್ನಮ್ಮನ ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಬೈಲಹೊಂಗಲದ ಪ್ರಭು ನೀಲಕಂಠ ಸ್ವಾಮೀಜಿ, ಯಮಕನಮರಡಿಯ ಸಿದ್ದ ಬಸವ ಸ್ವಾಮೀಜಿ, ತಾರಿಹಾಳದ ಅಡವೇಶ್ವರ ಸ್ವಾಮೀಜಿ, ಪ್ರಣವಂ ಗುರುಕುಲದ ನಿಶ್ಚಲ ಸ್ವರೂಪ ಸ್ವಾಮೀಜಿ, ಡಾ. ನೀಲಕಂಠಯ್ಯ ಶಾಸ್ತ್ರಿ ಹಿರೇಮಠ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಪಾಲಿಕೆ ಉಪಮೇಯರ ಹಣಮಂತ ಕೊಂಗಾಲಿ, ಮಾಜಿ ಶಾಸಕ ಅನೀಲ ಬೆನಕೆ, ರಾಣಿ ಚೆನ್ನಮ್ಮ ವಿವಿ ಕುಲಸಚಿವ ಡಾ. ಸಂತೋಷ ಕಾಮಗೌಡ. ಮಲಗೌಡ ಪಾಟೀಲ, ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ರಾಯವ್ವಗೋಳ, ಮಲ್ಲೇಶ ಚೌಗುಲೆ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಂದಿರ ಸ್ಥಾಪಕ ಡಾ. ಸತೀಶ ಚೌಳಿಗೇರ ದಂಪತಿಗಳನ್ನು ಹಾಗೂ ಮಾಜಿ ಯೋಧ ರುದ್ರಪ್ಪ ಚೌಳಿಗೇರ ಅವರನ್ನು ಸನ್ಮಾನಿಸಲಾಯಿತು.
ಡಾ. ಸತೀಶ ಚೌಳಿಗೇರ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಪ್ರೊ. ಬಸವರಾಜ ಕುಪ್ಪಸಗೌಡ್ರ ನಿರೂಪಿಸಿದರು. ಪ್ರವೀಣ ನಾಯಕ ವಂದಿಸಿದರು.
ಇದಕ್ಕೂ ಮೊದಲು ಮಂದಿರ ಉದ್ಘಾಟನೆ ನಿಮಿತ್ಯ ಹೋಮ ಹವನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಪಾರ ಪ್ರಮಾಣದಲ್ಲಿ ಭಕ್ತಾದಿಗಳು ಸೇರಿದ್ದರು.

ಬೆಳಗಾವಿ ಬಸವನ ಕುಡಚಿಯ ಸಾಯೀಶ ಕಾಲೋನಿಯಲ್ಲಿ ಶ್ರೀ ಸಾಯಿಬಾಬಾ ಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಸಾಯಿಬಾಬಾ ಮಂದಿರ ಸ್ಥಾಪಕ ಡಾ. ಸತೀಶ ಚೌಳಿಗೇರ ಹಾಗೂ ಮಾಜಿ ಯೋಧ ರುದ್ರಪ್ಪ ಚೌಳಿಗೇರ ಅವರನ್ನು ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಚ. ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿಯವರು ಗೌರವಿಸಿ ಆಶೀರ್ವದಿಸಿದರು. ಇತರ ಶ್ರೀಗಳು ಗಣ್ಯರು ಇದ್ದಾರೆ..

Leave a Reply

Your email address will not be published. Required fields are marked *