ಬಿಜೆಪಿ ಯುವ ಮುಖಂಡ ಚೇತನ ಅಂಗಡಿ ಅವರ ಅರ್ಥಪೂರ್ಣ ಜನ್ಮ ದಿನಾಚರಣೆ..
ಉಚಿತ ಆರೋಗ್ಯ ತಪಾಸಣೆ ಹಾಗೂ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ..
ಬೆಳಗಾವಿ : ಮೊದಲಿನಿಂದಲೂ ತಮ್ಮ ಇಶಾನ ಪೌಂಡೇಶನ್ ಕಡೆಯಿಂದ ಸಮಾಜಕ್ಕೆ ಅನೂಕೂಲ ಆಗುವಂತಹ ಅನೇಕ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿಯ ಯುವ ಧುರಿಣರಾದ ಚೇತನ ಅಂಗಡಿ ಅವರು, ತಮ್ಮ ಜನ್ಮ ದಿನದ ಅಂಗವಾಗಿ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳು ಅವರ ಜನಸೇವೆಗೆ ಮತ್ತಷ್ಟು ನಿದರ್ಶನವಾಗಿವೆ.

ಸಮಾಜ ಸೇವೆ, ಸಮುದಾಯದ ಏಳಿಗೆ ಹಾಗೂ ಪಕ್ಷ ಸಂಘಟನೆಯೆಂದು ಸದಾ ಜನರ ಮಧ್ಯೆ ಇರುವ ಚೇತನ ಅಂಗಡಿ ಅವರು ಗುರುವಾರ ದಿನಾಂಕ 09/07/2026ರಂದು ಬೆಳಗಾವಿ ಗ್ರಾಮೀಣ ಭಾಗದ ನಾಗೇರಹಾಳ ಗ್ರಾಮದಲ್ಲಿ ತಮ್ಮ ಇಶಾನ ಪೌಂಡೇಶನ್ ನೇತೃತ್ವದಲ್ಲಿ, ಡಾಕ್ಟರ್ ರವಿ ಪಾಟೀಲ್ ಅವರ ವಿಜಯಾ ಅರ್ಥ್ಥೂ ಅಂಡ್ ಟ್ರೊಮಾ ಸೆಂಟರ್ ಬೆಳಗಾವಿ (ವೋಟ್ಕ) ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ಔಷದಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆಯನ್ನು ಕೂಡಾ ಮಾಡಲಾಗಿದ್ದು, ಇದೆ ರೀತಿಯ ಆರೋಗ್ಯ ತಪಾಸಣಾ ಹಾಗೂ ಬ್ಯಾಗ ವಿತರಣಾ ಕಾರ್ಯಕ್ರಮಗಳು ಶುಕ್ರವಾರ ಹಾಗೂ ಶನಿವಾರಗಳು ಮುಂದುವರೆಯಲಿದ್ದು, ಶುಕ್ರವಾರ ಕೆ ಕೆ ಕೊಪ್ಪ ಗ್ರಾಮದಲ್ಲಿ, ಶನಿವಾರ ಹಾಲಗಿಮರಡಿ ಗ್ರಾಮದಲ್ಲಿ ನಡೆಯಲಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದ್ದಾರೆ.

ಈ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡ ಬಿಜೆಪಿಯ ಯುವ ಧುರಿಣ ಚೇತನ ಅಂಗಡಿ ಅವರು, ನಾವು ಮಾಡುವದು ಇದೇನು ದೊಡ್ಡ ಕೆಲಸವಲ್ಲ, ಜನರಿಗೆ ಒಂದು ಸಣ್ಣ ಸೇವೆ, ಜನತೆಗೆ ಶಿಕ್ಷಣ ಹಾಗೂ ಆರೋಗ್ಯ ಎಂಬುದು ತುಂಬಾ ಮುಖ್ಯವಾಗಿವೆ, ಅದಕ್ಕಾಗಿ ಆ ನಿಟ್ಟಿನಲ್ಲಿ ನಮ್ಮ ಇಶಾನ ಸಂಸ್ಥೆಯಿಂದ ಮೊದಲಿನಿಂದಲೂ ಕೆಲಸ ಮಾಡುತ್ತಾ ಬಂದಿದ್ದೇವೆ ಮುಂದೆಯೂ ಮಾಡುತ್ತೇವೆ, ಬಡ ಮಕ್ಕಳ ಶಿಕ್ಷಣದ ಸಹಾಯಕ್ಕೆ ನಾವು ಸದಾ ಸಿದ್ದರಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಗುರುಹಿರಿಯರು, ಮುಖಂಡರು, ಶಾಲಾ ಸಿಬ್ಬಂದಿಗಳು, ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದು, ಈ ಕಾರ್ಯದಿಂದ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಸಂತಸಗೊಂಡು, ಚೇತನ ಅಂಗಡಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ ಪ್ರಕಾಶ್ ಬಿ ಕೆ..