ಯಶಸ್ವಿಯಾದ ಮೂರು ದಿನಗಳ ಪ್ರಥಮ ಹಂತದ ಜನಗಣತಿ ತರಬೇತಿ.

ಯಶಸ್ವಿಯಾದ ಮೂರು ದಿನಗಳ ಪ್ರಥಮ ಹಂತದ ಜನಗಣತಿ ತರಬೇತಿ.

ತರಬೇತಿ ಪಡೆದ ಗಣತಿದಾರರಿಗೆ ಸೇವಾಭಾವ ಪ್ರತಿಜ್ಞೆ ಭೋದನೆ..

ತರಬೇತಿಯಲ್ಲಿ ಸಹಕರಿಸಿದ ಎಲ್ಲಾ ನೌಕರರಿಗೂ ಧನ್ಯವಾದ..

ಡಾ ಸಿದ್ದು ಹುಲ್ಲೋಳ್ಳಿ, ಜನಗಣತಿ ಅಧಿಕಾರಿ ಬೆಳಗಾವಿ ನಗರ..

ಬೆಳಗಾವಿ : ಭಾರತದ ಜನಗಣತಿ 2027ರ ಕಾರ್ಯನಿಮಿತ್ತ, ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಪ್ರಥಮ ಹಂತದ ತರಬೇತಿ ಶಿಬಿರ ಜರುಗಿದ್ದು, ಅದರಲ್ಲಿ ಶಾಲಾ ಶಿಕ್ಷಕರು ಹಾಗೂ ಇತರ ಇಲಾಖೆಗೆಳ ನೌಕರರು ಅತೀ ಉತ್ಸಾಹದಿಂದ ಭಾಗಿಯಾಗಿ ಉತ್ತಮ ತರಬೇತಿ ನೀಡಲು ಸಹಕಾರ ನೀಡಿದ ಎಲ್ಲಾ ನೌಕರರಿಗೂ ಧನ್ಯವಾದಗಳು ಎಂದು ಬೆಳಗಾವಿ ನಗರ ಜನಗಣತಿ ಅಧಿಕಾರಿ ಡಾ ಸಿದ್ದು ಹುಲ್ಲೋಳ್ಳಿ ಹೇಳಿದ್ದಾರೆ.

ರವಿವಾರ ದಿನಾಂಕ 05/04/2026 ರಂದು ಪ್ರಥಮ ಹಂತದ ಮೂರು ದಿನಗಳ ತರಬೇತಿ ಅಂತ್ಯವಾದ ನಂತರ ತರಬೇತಿ ಪಡೆದ ಸುಮಾರು 350 ಗಣತಿದಾರರಿಗೆ ಸೇವಾಭಾವ ಪ್ರತಿಜ್ಞೆಯನ್ನು ಬೋಧಿಸಿದ ಅಧಿಕಾರಿಗಳು, “ಜನಗಣತಿ ಕಾರ್ಯಕ್ಕೆ ನಾನು ನೇಮಕವಾಗಿರುವದಕ್ಕೆ ಹೆಮ್ಮೆ ಪಡುತ್ತಾ, 2027ರ ಜನಗಣತಿ ಕಾರ್ಯವನ್ನು ಶೃದ್ದಾಪೂರ್ವಕವಾಗಿ, ಪ್ರಾಮಾಣಿಕವಾಗಿ, ಭಕ್ತಿ ಹಾಗೂ ನಿಷ್ಠೆಯಿಂದ ನಿರ್ವಹಿಸುತ್ತೇನೆಂದು ತಮ್ಮೆಲ್ಲರ ಸಮ್ಮುಖದಲ್ಲಿ ಸೇವಾಭಾವ ಪ್ರತಿಜ್ಞೆಯನ್ನು ಸ್ವೀಕರಿಸುತ್ತಿದ್ದೇನೆ” ಎಂದು ಪ್ರತಿಜ್ಞಾ ವಿಧಿಯನ್ನು ಬೋದಿಸಿದರು.

ನಂತರ ತರಬೇತಿ ಪಡೆದ ಗಣತಿದಾರರಿಗೆ ಕೆಲ ಸೂಚನೆಗಳನ್ನು ನೀಡಿದ ಅಧಿಕಾರಿಯವರು, ತರಬೇತಿ ನೀಡಿದ ನುರಿತ ಸಿಬ್ಬಂದಿಗಳ ಕಾರ್ಯವನ್ನೂ ಶ್ಲಾಘನೆ ಮಾಡಿದರು ಜೊತೆಗೆ ಚಾರ್ಜ್ ಅಧಿಕಾರಿಗಳಾಗಿ ಕಾರ್ಯ ಮಾಡುತ್ತಿರುವ ಪಾಲಿಕೆಯ ಸಿಬ್ಬಂದಿಗಳ ಕಾರ್ಯಕ್ಕೂ ಮೆಚ್ಚುಗೆ ಸೂಚಿಸಿ, ಇನ್ನೂ ಒಂಬತ್ತು ದಿನಗಳ ಕಾಲ ಮೂರು ಹೊಸ ಬ್ಯಾಚಗಳಿಗೆ ಇದೆ ರೀತಿಯ ಗುಣಮಟ್ಟದ ತರಬೇತಿಯನ್ನು ನೀಡಬೇಕೆಂದು ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದರು..

ಹೋಗುವಾಗ ಎಲ್ಲರೂ ತಮ್ಮ ಮೊಬೈಲ್ ಸಂಖ್ಯೆ ಹೆಸರು ಸರಿಯಾಗಿ ನೀಡಿರಬೇಕು, ಮೂರು ದಿನ ಸರಿಯಾಗಿ ಸಹಿ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ, ನಿಮಗೆ ಸಂಬಂಧಪಟ್ಟ ಚಾರ್ಜ್ ಆಫಿಸರ್, ಸೂಪರವೈಜರ, ಡಾಟಾ ಆಪರೇಟರ್ ಹಾಗೂ ಇಬ್ಬರೂ ಫೀಲ್ಡ್ ಟ್ರೇನರಗಳ ಹೆಸರು ಹಾಗೂ ಮೊಬೈಲ್ ನಂಬರಗಳನ್ನು ತಗೆದುಕೊಂಡು ಹೋಗಿ, ಗಣತಿ ಎಂದರೆ ಬಹಳ ಕಡಿಮೆ ಕೆಲಸ, ದೊಡ್ಡ ಕೆಲಸ ಎಂಬ ವಿಚಾರವನ್ನು ತಗೆದುಹಾಕಿ, ಈಗಾಗಲೇ ರಾಜ್ಯದಲ್ಲಿ ಸ್ವ ಜನಗಣತಿ ಆಗುತ್ತಿದೆ, ತಾವು ಮಾಡಿ, ಇತರರಿಗೂ ಮಾಡಲು ಹೇಳಿ ಎಂದು ಕೆಲ ಸೂಚನೆ ನೀಡಿ, ಅವರ ಮುಂದಿನ ಕಾರ್ಯಕ್ಕೆ ಶುಭಕೋರಿದರು..

ವರದಿ ಪ್ರಕಾಶ ಬಿ ಕೆ..

Leave a Reply

Your email address will not be published. Required fields are marked *