ಮನೆಗಳ ಸಾಮೂಹಿಕ ಗಣೇಶ ವಿಸರ್ಜನೆಗೆ ಪಾಲಿಕೆಯಿಂದ ಸಂಚಾರಿ ವಾಹನಗಳ ವ್ಯವಸ್ಥೆ..

ಮನೆಗಳ ಸಾಮೂಹಿಕ ಗಣೇಶ ವಿಸರ್ಜನೆಗೆ ಪಾಲಿಕೆಯಿಂದ ಸಂಚಾರಿ ವಾಹನಗಳ ವ್ಯವಸ್ಥೆ..

29 ಲಘು ಸಂಚಾರಿ ವಾಹನಗಳು ಸೇವೆಗೆ ಲಭ್ಯ..

ಬೆಳಗಾವಿ : ಗಣೇಶ ಹಬ್ಬದ ಅದ್ದೂರಿ ಆಚರಣೆಗಾಗಿ ಈಗಾಗಲೇ ಬೆಳಗಾವಿ ಮಹಾನಗರ ಪಾಲಿಕೆಯಿಂದ ಅನೇಕ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಅದರ ಜೊತೆಗೆ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಇಟ್ಟಿರುವ ಗಣಪತಿಗಳ ವಿಸರ್ಜನೆಗೆ ಲಘು ಸಂಚಾರಿ ವಾಹನಗಳ ವ್ಯವಸ್ಥೆಯನ್ನು ಮಾಡುವುದರ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿದಂತಾಗಿದೆ.

ಸಾರ್ವಜನಿಕರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಐದು ದಿನಗಳ ಗಣಪತಿಗಳನ್ನು ವಿಸರ್ಜನೆ ಮಾಡುವ ದಿನವಾದ ಇಂದು ಪಾಲಿಕೆಯಿಂದ 14, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 10 ಹಾಗೂ ದಂಡು ಮಂಡಳಿಯಿಂದ 5ಲಘು ವಾಹನಗಳಂತೆ ಒಟ್ಟು 29 ವಾಹನಗಳ ವ್ಯವಸ್ಥೆಯನ್ನು ಮಾಡಿದ್ದು, ಇದರಿಂದ ತಮ್ಮ ಸಾರ್ವಜನಿಕರು ಮನೆಮನೆಗಳಲ್ಲಿ ಇಟ್ಟಿರುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲ ಆಗಿದೆ.

ಮನೆಗಳಿಂದ ನಗರದ ವಿವಿಧ ವಿಸರ್ಜಣಾ ಕೇಂದ್ರಗಳಿಗೆ ತೆರಳುವ ಈ ಲಘು ಸಂಚಾರಿ ವಾಹನಗಳಿಗೆ ಪಾಲಿಕೆಯ ಮುಂಭಾಗದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ (ಪ) ಹನಮಂತ ಕಲಾದಗಿ ಅವರು ಚಾಲನೆ ನೀಡಿದ್ದು, ಆರೋಗ್ಯ ವಿಭಾಗದ ಸಿಬ್ಬಂದಿ ಪರುಶುರಾಮ ಕಾಂಬ್ಳೆ ಕೂಡಾ ಉಪಸ್ಥಿತರಿದ್ದರು.