ಮಳಿಯ ಚಳಿ ತಾಳಲಾರದೆ ಮಹಾನಗರ ಪಾಲಿಕೆಗೆ ಎಂಟ್ರಿ ಕೊಟ್ಟ ಮಂಗಣ್ಣ..
ಬೆಳಗಾವಿ : ನಗರದಲ್ಲಿ ಬುಧವಾರ ಸಂಜೆ ಧಾರಾಕಾರ ಸುರಿದ ಮಳೆಗೆ ಮನೆ, ಕಚೇರಿಗಳ ಒಳಗಿನ ಹಾಗೂ ಹೊರಗಿನ ಎಲ್ಲಾ ಜನರಿಗೂ ಚಳಿಯ ಅನುಭವ ಆಗಿದ್ದು, ಮಹಾನಗರ ಪಾಲಿಕೆಯ ಹೊರ ಆವರಣದಲ್ಲಿ ಇದ್ದ ಮಂಗನಿಗೂ ಚಳಿಯ ಕಾಟ ಶುರುವಾಗಿ, ಬೆಚ್ಚಗಿನ ಸ್ಥಳ ಬೇಕೆಂದು ಏನೋ? ಪಾಲಿಕೆಯ ಕಚೇರಿಯ ಒಳಗಿನ ಗ್ರಂಥಾಲಯ ಆವರಣದಲ್ಲಿ ರಾಜನಂತೆ ಬಂದು ಕುಳಿತುಕೊಂಡಿತ್ತು..
ತನ್ನ ಸುತ್ತ ಮುತ್ತ ನೂರಾರು ಜನ ಓಡಾಡುತ್ತಿದ್ದರೂ, ಕರೆದು ಕಿರಿಕಿರಿ ಮಾಡಿದರೂ, ಫೋಟೋ ತಗೆದರೂ ತಲೆ ಕೆಡಿಸಿಕೊಳ್ಳದೇ ನಿರ್ಭಿತಿಯಿಂದ, ಬೆಚ್ಚನೆಯ ಗಾಜಿನ ಪೆಟ್ಟಿಗೆಯ ಮೇಲೆ ಕೂತಿದ್ದು, ನೋಡುಗರಿಗೆ ಅಪರೂಪದ ಆಶ್ಚರ್ಯದಂತೆ ಕಾಣುತ್ತಿತ್ತು.

ಪಾಲಿಕೆಗೆ ಆಗಮಿಸಿದ ಈ ಅಪರೂಪದ ಅತಿಥಿಗೆ ಕಚೇರಿಯ ಸಿಬ್ಬಂದಿಗಳು ಕೂಡಾ ಉತ್ತಮ ಉಪಚಾರ ಮಾಡಿದ್ದು, ಬಿಸ್ಕಿಟ್ಟು, ಚುನಮರಿ, ಪುಟಾಣಿ, ಶೇಂಗಾ ಎಲ್ಲವನ್ನೂ ತಂದು ಇಟ್ಟಾಗ, ಆರಾಮಾಗಿ ಕುಳಿತು ತಿಂದು, ಅಲ್ಲೇ ಸ್ವಲ್ಪ ನಿದ್ದೆ ಮಾಡಿದರಾಯಿತು ಎಂದು ಮಲಗಿದಂತಿತ್ತು.
ವರದಿ ಪ್ರಕಾಶ್ ಬಿ ಕೆ.