ಮಹಾನಗರ ಪಾಲಿಕೆಯಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಶ್ರೀಗಣೇಶ, ಶ್ರೀಸತ್ಯನಾರಾಯಣ ಪೂಜೆ.

ಮಹಾನಗರ ಪಾಲಿಕೆಯಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಶ್ರೀಗಣೇಶ
ಶ್ರೀಸತ್ಯನಾರಾಯಣ ಪೂಜೆ…

ಬೆಳಗಾವಿ : ಮಹಾನಗರ ಪಾಲಿಕೆಯಲ್ಲಿ ಪ್ರತಿಷ್ಠಾಪಿಸಲಾದ
ಶ್ರೀ ಗಣೇಶನೊಂದಿಗೆ
ಶ್ರೀ ಸತ್ಯನಾರಾಯಣ ಪೂಜೆ
ಬುಧವಾರ ಶ್ರದ್ಧಾ ಭಕ್ತಿಯಿಂದ ಜರುಗಿತು.

ಮೇಯರ್ ಪ್ರೀತಿ ಕಾಮಕರ್ ದಂಪತಿಗಳು
ಹಾಗೂ ಉಪಮಹಾಪೌರ
ಹನುಮಂತ ಕೊಂಗಾಲಿ
ಪೂಜಾ ವಿಧಿ ವಿಧಾನಗಳನ್ನು
ನೆರವೇರಿಸಿದರು.
ಆಯುಕ್ತ ಕಾರ್ತಿಕ್ ಎಂ. ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೆಕರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ನಗರಸೇವಕರು, ಕಂದಾಯ ವಿಭಾಗದ ಉಪ ಆಯುಕ್ತ ಡಾ.ಸಿದ್ದು ಹುಲ್ಲೋಳಿ, ಅಭಿವೃದ್ಧಿ ವಿಭಾಗದ ಉಪ ಆಯುಕ್ತೆ ಲಕ್ಷ್ಮೀ ಸುಳಗೇಕರ, ಆಡಳಿತ ವಿಭಾಗದ ಉಪ ಆಯುಕ್ತ ಉದಯ ಕುಮಾರ ಟಿ.ಬಿ. ಹಾಗೂ ಇತರೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

ಖುದ್ದು ಮೇಯರ, ಉಪಮೇಯರ ಹಾಗೂ ಆಯುಕ್ತರು ಸರ್ವರಿಗೂ ಮಹಾಪ್ರಸಾದ ವಿತರಿಸಿದರು.

Leave a Reply

Your email address will not be published. Required fields are marked *