ಮಾರಿಹಾಳ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ..
ಮಾರಿಹಾಳ ಪಿಕೆಪಿಎಸನಿಂದ ಆದ ಆಯೋಜನೆಗೆ ಜನರ ಮೆಚ್ಚುಗೆ..
ಮಾರಿಹಾಳ : ದಿನಾಂಕ : 30-06-2026 ಮಂಗಳವಾರ ಮಾರೀಹಾಳ ಗ್ರಾಮದ ಪಿ.ಕೆ.ಪಿ.ಎಸ್ ಸಂಘದ ವತಿಯಿಂದ ಉಚಿತವಾಗಿ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ನೂರಾರು ಜನರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ.

ಈ ಶಿಬಿರದಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆಯ ವ್ಯವಸ್ಥೆಯನ್ನು ಆಯೋಜಿಸಿದ್ದು ಗ್ರಾಮ ಹಾಗೂ ಸುತ್ತಮುತ್ತಲಿನ ಸದಸ್ಯರು ಬಂದು ತಮ್ಮ ನೇತ್ರ ಸಂಬಂದಿ ಸಮಸ್ಯೆಗಳನ್ನು ತೋರಿಸಿಕೊಂಡಿದ್ದಾರೆ.
ಮಾರಿಹಾಳ, ಕರಡಿಗುದ್ದಿ, ಸುಳೆಬಾವಿ ಹಾಗೂ ಯದ್ದಲಬಾವಿಹಟ್ಟಿ ಗ್ರಾಮಗಳ ಸಾರ್ವಜನಿಕ ಬಂಧುಗಳು ಇದರ ಸದುಪಯೋಗ ಪಡೆದುಕೊಂಡಿದ್ದು ಈ ಆರೋಗ್ಯ ತಪಾಸಣಾ ಶಿಬಿರವನ್ನು
ಮಾರಿಹಾಳ ಗ್ರಾಮದ ಪಿಕೆಪಿಎಸ್ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾದಮ್ಮನವರ ಹಾಗೂ ಅವರ ತಂಡದವರು ಆಯೋಜನೆ ಮಾಡಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
