ಮೇಯರ ಅವರಿಂದ ಕನ್ನಡ ಪರ ಗೊತ್ತುವಳಿ ಅಂಗೀಕಾರ…

ಮೇಯರ ಅವರಿಂದ ಕನ್ನಡ ಪರ ಗೊತ್ತುವಳಿ ಅಂಗೀಕಾರ…

ಸಭಾ ನಿರ್ಣಯಕ್ಕೆ ಸಂತಸದ ಧನ್ಯವಾದ ಹೇಳಿದ ನಾಮನಿರ್ದೇಶಿತ ಸದಸ್ಯರು..

ಕರ್ನಾಟಕ–ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. ಅದನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದು 1988ರ ಮಾರ್ಚ್ 23ರಂದು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ. ಅದೇ ಮಾದರಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲೂ ನಿರ್ಣಯ ಅಂಗೀಕರಿಸಬೇಕು’ ಎಂಬ ಸರ್ಕಾರದ ನಿರ್ದೇಶನವನ್ನು ಪಾಲಿಕೆ ಆಯುಕ್ತ ಎಂ. ಕಾರ್ತಿಕ್ ಸಭೆಯಲ್ಲಿ ಓದಿ ತಿಳಿಸಿದರು.

ನಂತರ ಮೇಯರ್ ಪ್ರೀತಿ ಕಾಮಕರ ಅವರು ಸರ್ಕಾರದ ನಿರ್ದೇಶನದಂತೆ ನಿರ್ಣಯ ಮಂಡಿಸಿದರು. ಸಭೆಯಲ್ಲಿ ಹಾಜರಿದ್ದ 56 ಸದಸ್ಯರು ಮೇಜು ಕುಟ್ಟಿ ಬೆಂಬಲ ವ್ಯಕ್ತಪಡಿಸುವ ಮೂಲಕ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದರು. ಆದರೆ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಸದಸ್ಯರಾದ ರವಿ ಸಾಳುಂಕೆ, ವೈಶಾಲಿ ಭಾತಕಾಂಡೆ ಹಾಗೂ ಶಿವಾಜಿ ಮಂಡೋಳಕರ ಅವರು ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿ, ಏರುಧ್ವನಿಯಲ್ಲಿ ಮಾತನಾಡುತ್ತ ಸಭೆಯಿಂದ ಹೊರನಡೆದರು.

ಈ ನಿರ್ಣಯಕ್ಕಾಗಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಕಳೆದ ಆರು ತಿಂಗಳಿಂದ ನಿರಂತರವಾಗಿ ಹೋರಾಟ ನಡೆಸಿದ್ದವು.

ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮೇಯರ್ ಪ್ರೀತಿ ಕಾಮಕರ ಅವರು ಅಂಗಿಕರಿಸಿದ ಕನ್ನಡಪರ ಗೊತ್ತುವಳಿಗೆ ಸರ್ಕಾರದಿಂದ ನೇಮಕವಾದ ನಾಮನಿರ್ದೇಶಿತ ಸದಸ್ಯರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದು, ಇದು ಕನ್ನಡಿಗರ ಗೆಲುವು, ಇಂತಹ ನಿರ್ಣಯವನ್ನು ಮಂಡಿಸಿದ ಮೇಯರ ಹಾಗೂ ಸಭಾಗೃಹಕ್ಕೆ ಧನ್ಯವಾದ ಎಂದರು.

Leave a Reply

Your email address will not be published. Required fields are marked *