ವಾರ್ಡ ಸಂಖ್ಯೆ 4ರಲ್ಲಿ ಗಣೇಶ ಹಬ್ಬದ ವಿಶೇಷ ಆಚರಣೆ..
ಉಚಿತ ಕಣ್ಣಿನ ತಪಾಸಣೆಗೆ ಜನರ ಉತ್ತಮ ಸ್ಪಂದನೆ..
ಬೆಳಗಾವಿ : ಮಹಾನಗರ ಪಾಲಿಕೆಯ ವಾರ್ಡ್ ನಂ. 4ರಲ್ಲಿ ಮಂಗಳವಾರ
ಗಣೇಶ ಹಬ್ಬದ ನಿಮಿತ್ತವಾಗಿ
ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಯಶಸ್ವಿಯಾಯಿತು.
ವಾರ್ಡ್ ಸಂಖ್ಯೆ 4ರ ನಗರ ಸೇವಕರಾದ ಜಯತೀರ್ಥ ಸವದತ್ತಿಯವರ ನೇತೃತ್ವದಲ್ಲಿ ನಡೆದ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆಯ ಜೊತೆಗೆ ಎಲಬು ತಪಾಸಣೆ ಜರುಗಿತು.

ಈ ಅರ್ಥಪೂರ್ಣ ಕಾರ್ಯಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆಯೂ ದೊರಕಿತು.
ಶಿಬಿರವನ್ನು ಯಶಸ್ವಿಗೊಳಿಸಿದ ಇಬ್ಬರು ನುರಿತ ತಜ್ಞವೈದ್ಯರು, ಆರೋಗ್ಯ ತಪಾಸಣೆಯ ಜೊತೆಗೆ ಯಾವ ರೀತಿಯಾಗಿ ಪ್ರತಿನಿತ್ಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದರ ಕುರಿತಾಗಿ ಸಲಹೆ ಸೂಚನೆಗಳನ್ನು ನೀಡಿದರು.
ಬೆಳಗ್ಗೆ ಕಣ್ಣಿನ ತಪಾಸಣೆ ಶಿಬಿರದಲ್ಲಿ ಸುಮಾರು 68 ಜನರು ಪಾಲ್ಗೊಂಡಿದ್ದರು. ಇದರಲ್ಲಿ ಸುಮಾರು ಹತ್ತು ಜನರಿಗೆ ಉಚಿತ ಚಿಕಿತ್ಸೆಯನ್ನು ಮಾಡಿಸಲು ನಿರ್ಧರಿಸಲಾಯಿತು.
ನಂತರ ಮಧ್ಯಾಹ್ನ ನಡೆದ ಎಲಬು ಮೂಳೆಗಳ ತಪಾಸಣೆ ಶಿಬಿರದಲ್ಲಿ ಸುಮಾರು 54 ಜನರು ಪಾಲ್ಗೊಂಡು ಈ ಉಚಿತ ಶಿಬಿರದ ಲಾಭವನ್ನು ಪಡೆದುಕೊಂಡರು.