ಸ್ಥಾಯಿ ಸಮಿತಿ ಸಭಾಭವನದ ದುರಸ್ತಿ ಕಾರ್ಯ ಪರಿಶೀಲಿಸಿದ ಉಪ ಮಹಾಪೌರರು..

ಸ್ಥಾಯಿ ಸಮಿತಿ ಸಭಾಭವನದ ದುರಸ್ತಿ ಕಾರ್ಯ ಪರಿಶೀಲಿಸಿದ ಉಪ ಮಹಾಪೌರರು..

ದುರಸ್ತಿ ಕಾರ್ಯದ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು.

ಬೆಳಗಾವಿ : ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭೆಗಳು ನಡೆಯುವ ಸಭಾ ಭವನದ ದುರಸ್ತಿ ಕಾರ್ಯ ನಡೆದಿದ್ದು, ದುರಸ್ತಿ ಕಾರ್ಯ ಪರಿಶೀಲನೆ ಮಾಡಿದ ಉಪ ಮಹಾಪೌರಾರದ ಹನಮಂತ ಕೊಂಗಾಲಿ ಅವರು ಅಭಿವೃದ್ಧಿ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಈ ಹಿಂದೆ ಮಾತುಕತೆಯ ಧ್ವನಿ, ಗಾಳಿ ಬೆಳಕು, ಶಿಷ್ಟಚಾರದಂತೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥ ಹೀಗೆ ಹಲವಾರು ಕೊರತೆಗಳು ಇದ್ದಂತಹ ಸ್ಥಾಯಿ ಸಮಿತಿ ಸಭಾ ಭವನದ ದುರಸ್ತಿ ಕಾರ್ಯವನ್ನು ಮೇಯರ ಹಾಗೂ ಉಪಮೇಯರ ಅವರ ಆದೇಶದ ಮೇರೆಗೆ ಪಾಲಿಕೆಯ ಅಭಿವೃದ್ಧಿ ವಿಭಾಗ ದುರಸ್ತಿ ಕಾರ್ಯ ಕೈಗೊಂಡಿತ್ತು.

ಕೆಲಸ ಪ್ರಗತಿಯಲ್ಲಿರುವಾಗ ಉಪ ಮಹಾಪೌರಾರು ಬೇಟಿ ನೀಡಿ ಪರಿಶೀಲಿಸಿದ್ದು, ಅಭಿವೃದ್ಧಿ ವಿಭಾಗದ ಉಪ ಆಯುಕ್ತರಾದ ಲಕ್ಷ್ಮಿ ಸುಳಗೇಕರ ಹಾಗೂ ಅಭಿಯಂತರ ಅಂಕಿತ ಅವರು ಸಭಾಭವನದ ದುರಸ್ತಿ ಕಾರ್ಯದ ವಿನ್ಯಾಸವನ್ನು ವಿವರಿಸಿದ್ದು, ಸಭೆಯಲ್ಲಿ ಚರ್ಚೆಯಾಗುವ ಮಾತುಗಳ ಧ್ವನಿಗಳು ಸ್ಪಷ್ಟವಾಗಿ ಕೇಳಿಸಲು ಅಕೌಸ್ಟಿಕ ವ್ಯವಸ್ಥೆ ಹಾಗೂ ಎರಡು ಹವಾನಿಯಂತ್ರಿತ ಯಂತ್ರಗಳನ್ನು ಅಳವಡಿಸಿರುವ ಬಗ್ಗೆ ವಿವರಿಸಿದರು.

ಸಭಾ ಸದಸ್ಯರ ಆಸನದ ವ್ಯವಸ್ಥೆಯಲ್ಲಿ ಸುಧಾರಿತ ಬದಲಾವಣೆ ಆಗಿದ್ದು, ಮದ್ಯದಲ್ಲಿ ಐದು ಪ್ರಮುಖ ಆಸನಗಳ ವ್ಯವಸ್ಥೆ ಮಾಡಿದ್ದು, ಅದರಲ್ಲಿ ಮೇಯರ, ಉಪ ಮೇಯರ, ಸಮಿತಿಯ ಅಧ್ಯಕ್ಷರು, ಆಡಳಿತ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರಿಗೆ ಆಸನದ ವ್ಯವಸ್ಥೆ ಮಾಡಿದ್ದು, ಬಲಗಡೆಗೆ ಸ್ಥಾಯಿ ಸಮಿತಿಯ 4 ಜನ ಸದಸ್ಯರಿಗೆ, ಎಡಗಡೆ ಇಬ್ಬರು ಸ್ಥಾಯಿ ಸಮಿತಿ ಸದಸ್ಯರಿಗೆ ಹಾಗೂ ಕಮಿಟಿ ಸೇಕ್ರೆಟರಿ, ಕಾನೂನು ಸಲಹೆಗಾರರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು ಇದರಲ್ಲಿ ಶಿಷ್ಟಚಾರವನ್ನು ಪಾಲಿಸಿದಂತಿದೆ.

ಒಟ್ಟಿನಲ್ಲಿ ಎಲ್ಲರ ಬಹುದಿನಗಳ ಕನಸಾಗಿದ್ದ ಸ್ಥಾಯಿ ಸಮಿತಿಯ ಸಭಾ ಭವನದ ದುರಸ್ತಿ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಬೇಗ ಕಾರ್ಯ ಪೂರ್ಣವಾಗಿ ಉತ್ತಮ ಸಭೆಗಳು ಜರುಗಲು ಸಹಕಾರಿಯಾಗಲಿ ಎಂಬುದು ಎಲ್ಲರ ಆಶಯ..