ಶಾಸಕ ಆಸೀಫ್ ಸೇಠ್ ಅವರಿಗೆ ಸಚಿವ ಸ್ಥಾನ‌ ನೀಡಬೇಕೆಂದು ಬೆಂಬಲಿಗರ ಆಗ್ರಹ..

ಶಾಸಕ ಆಸೀಫ್ ಸೇಠ್ ಅವರಿಗೆ ಸಚಿವ ಸ್ಥಾನ‌ ನೀಡಬೇಕೆಂದು ಬೆಂಬಲಿಗರ ಆಗ್ರಹ..

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಬಳಿಕ ರಾಜ್ಯದಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಜೊರಾಗಿ ಕೇಳಿ ಬರುತ್ತಿದ್ದು, ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆ ಬೆಳಗಾವಿ 18 ವಿಧಾನಸಭಾ ಕ್ಷೇತ್ರದವನ್ನು ಒಳಗೊಂಡು, ಮೂರು ಜಿಲ್ಲೆ ಆಗುವಷ್ಟು ದೊಡ್ಡದಾಗಿದೆ. ಅದರಂತೆ ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳನ್ನು ಹೊಂದಿದ್ದು,ಬೆಳಗಾವಿ ನಗರದಿಂದ ಮತ್ತೊಂದು ಮಂತ್ರಿ ಸ್ಥಾನಕ್ಕೆ ಶಾಸಕ ಆಸೀಫ್ ಸೇಠ್ ಅವರನ್ನು ಆಯ್ಕೆ ಮಾಡಬೇಕೆಂದು ದಲಿತ ಸಂಘಟನೆಯ ಮುಖಂಡ ಮಲ್ಲೇಶ್ ಚೌಗಲೇ ಹಾಗೂ ಬೆಂಲಿಗರು ಆಗ್ರಹಿಸಿದರು.

ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ದಶಕಗಳಿಂದ ಬೆಳಗಾವಿ ನಗರದದಿಂದ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇದೆ. ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಅಸೀಫ್ ಸೇಠ್ ಅವರು ಜಾತಿ ಧರ್ಮಗಳನ್ನು ಲೆಕ್ಕಿಸದೆ, ಬಡ ಶ್ರೀಮಂತರು ಎನ್ನದೇ, ನಿರಂತರ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು‌ ಬರುತ್ತಿದ್ದಾರೆ.

ಸಣ್ಣ ಪುಟ್ಟ ಜಿಲ್ಲೆಗಳಿಗೆ ಮಂತ್ರಿಗಳನ್ನು ಮಾಡುವ ಸರ್ಕಾರ ಬೆಳಗಾವಿಯಂತಹ ದೊಡ್ಡ ಜಿಲ್ಲೆಗೆ ಕನಿಷ್ಠ ನಾಲ್ಕೈದು ಜನರನ್ನಾದರು ಮಂತ್ರಿಗಳನ್ನಾಗಿ ಮಾಡಬೇಕು. ಮುಂಬರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತ್ರತ್ವದ ಸರ್ಕಾರದಲ್ಲಿ, ನೂತನ ಕ್ಯಾಬಿನೆಟ್ ಸಭೆಯಲ್ಲಿ ಶಾಸಕ ಆಸೀಫ್ ಸೇಠ್ ಅವರನ್ನು ಮಂತ್ರಿಯನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಬೆಳಗಾವಿ ನಗರದಿಂದ ಶಾಸಕ ಆಸೀಫ್ ಸೇಠ್ ಅವರನ್ನು ಮಂತ್ರಿ ಮಾಡಲಿಲ್ಲ ಅಂದರೆ ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ದಲಿತ ಮುಖಂಡ ಮಲ್ಲೇಶ್ ಚೌಗಲೇ, ನ್ಯಾಯಾವಾದಿ ರಾವಸಾಹೇಬ ಪಾಟೀಲ್, ಸಿದ್ರಾಯಿ ಮೇತ್ರಿ, ಪರಶುರಾಮ ವಗ್ಗಣ್ಣವರ, ಲತಾ ಮಾನೆ, ಮಹೇಶ್ ಗಾಡಿವಡ್ಡರ, ಗಜಾನನ, ರಾಜಾ ಸಲೀಮ್, ಪಿಂಟು, ಸಬ್ರಹ್ಮಣ್ಯ ಕಾಂಬಳೆ ಹಾಗೂ ಕಾಂಗ್ರೆಸ್ಸಿನ ಪದಾಧಿಕಾರಿಗಳು, ಮುಖಂಡರು, ಕಾರ್ಯರ್ತರು ಸೇರಿದಂತೆ ಹಲವಾರು ಜನ ಭಾಗಿಯಾಗಿದ್ದರು..