ಬೆಳಗಾವಿ ಪಾಲಿಕೆಯಲ್ಲಿ ಮಹಿಳಾ ಕ್ರಿಕೆಟ್ ವಿಶ್ವಕಪ ವಿಜಯದ ಸಂಭ್ರಮ..
ಕೇಕ ಕಟ ಮಾಡಿ ಮಹಿಳಾ ಕ್ರಿಕೆಟ್ ವಿಶ್ವಕಪ ಗೆದ್ದ ಖುಷಿಯ ಆಚರಣೆ..
ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿ ವತಿಯಿಂದ
ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಸರಣಿಯಲ್ಲಿ ಭಾರತ ತಂಡದ ಗೆಲುವಿನ ವಿಜಯೋತ್ಸವವನ್ನು ವಿಭಿನ್ನವಾಗಿ ಆಚರಣೆ ಮಾಡಲಾಗಿದೆ.
ಬೆಳಗಾವಿ ಬಾಲಕಿಯರ ತಂಡದ ಆಟಗಾರರಿಂದ ಕೇಕ್ ಕತ್ತರಿಸುವ ಮೂಲಕ ವಿಜಯೋತ್ಸವವನ್ನು ಆಚರಿಸಲಾಗಿದ್ದು, ಪಾಲಿಕೆಯ ಮಹಾಪೌರರಾದ ಮಂಗೇಶ್ ಪವಾರ್ ಉಪ ಮಹಾಪೌರರಾದ ವಾಣಿ ಜೋಶಿ ಆಯುಕ್ತರಾದ ಬಿ ಶುಭಾ, ಪಾಲಿಕೆಯ ಆಡಳಿತ ಪಕ್ಷದ ನಾಯಕರಾದ ಹಣಮಂತ ಕೊoಗಾಲಿ, ವಿರೋಧ ಪಕ್ಷದ ನಾಯಕರಾದ ಸೊಯಲ್ ಸಂಗೊಳ್ಳಿ ಹಾಗೂ ನಗರ ಸೇವಕರು & ಸೇವಕಿಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕೇಕ್ ಕಟ್ ಮಾಡಿ, ವಿಶ್ವಕಪ್ ಗೆದ್ದ ಸಂಭ್ರಮವನ್ನು ಆಚರಿಸಿದ ಬೆಳಗಾವಿ ಪಾಲಿಕೆಯ ಗಣ್ಯರು, ಮುಂಬರುವ ದಿನಗಳಲ್ಲಿ ಮತ್ತಷ್ಟು ಮಹಿಳಾ ಕ್ರೀಡಾ ಪಟುಗಳು ದೇಶವನ್ನು ಪ್ರತಿನಿದಿಸಲಿ, ಆ ಮೂಲಕ ಕ್ರಿಕೆಟ್ ಅಷ್ಟೇ ಅಲ್ಲದೇ ಮತ್ತಿತರ ಕ್ರೀಡೆಗಳಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರುವಂತ ಕಾರ್ಯವನ್ನು ಈ ದೇಶದ ಬಾಲೆಯರು ಮಾಡಲಿ ಎಂದು ಶುಭ ಹಾರೈಸಿದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..