ಕೌಜಲಗಿಯಲ್ಲಿ ನೂತನ ಎಸ್.ಬಿ.ಐ ಶಾಖೆ ಆರಂಭ..

ಕೌಜಲಗಿಯಲ್ಲಿ ನೂತನ ಎಸ್.ಬಿ.ಐ ಶಾಖೆ ಆರಂಭ..

ಸಂಸದ ಜಗದೀಶ ಶೆಟ್ಟರ್..

ಬೆಳಗಾವಿ : ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ನಿವಾಸಿಗಳ ಅನೇಕ ವರ್ಷಗಳ ಬೇಡಿಕೆಯಂತೆ, ನೂತನವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯನ್ನು ಪ್ರಾರಂಭಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಧಾನ ಕಛೇರಿ ಬೆಳಗಾವಿ ಅನುಮತಿಯನ್ನು ನೀಡಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ ಅವರು ತಿಳಿಸಿದ್ದಾರೆ.

ಕೌಜಲಗಿ ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯನ್ನು ಪ್ರಾರಂಭಿಸುವಂತೆ ಅಲ್ಲಿನ ನಿವಾಸಿಗಳ ಅನೇಕ ವರ್ಷಗಳ ಬೇಡಿಕೆಯಾಗಿತ್ತು.

ಪ್ರಸ್ತಾಪಿತ ವಿಷಯವಾಗಿ ಬ್ಯಾಂಕ್ ಅಧಿಕಾರಿಗಳ ಮಾಸಿಕ ಸಭೆಗಳಲ್ಲಿಯೂ ಸಹ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಂಡು, ಕೌಜಲಗಿ ಗ್ರಾಮದಲ್ಲಿ ಎಸ್.ಬಿ.ಐ ಶಾಖೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಲಾಗಿತ್ತು. ಅದರಂತೆ ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೂ ಸಹ ಇದರ ಅವಶ್ಯಕತೆಯ ಬಗ್ಗೆ ತಿಳಿಸಿ, ಪತ್ರದ ಮುಖೇನ ವಿನಂತಿಸಲಾಗಿದ್ದು ಇಲ್ಲಿ ಸ್ಮರಣೀಯ.

ಈ ಹಿನ್ನಲೆಯಲ್ಲಿ ಶನಿವಾರ ದಿನಾಂಕ 17/01/2026 ರಂದು ಎಸ್.ಬಿ.ಐ ಶಾಖೆಯನ್ನು ಕೌಜಲಗಿ ಗ್ರಾಮದಲ್ಲಿ ತೆರೆಯಲು ಅನುಮತಿ ದೊರಕಿದ್ದು, ನನಗೆ ಸಂತಸ ತಂದಿದೆ ಇದರ ಸದೂಪಯೋಗವನ್ನು ಬರುವ ದಿನಗಳಲ್ಲಿ ಕೌಜಲಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳು ಅವಶ್ಯ ಪಡೆದುಕೊಳ್ಳುವಂತೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರು ಜಗದೀಶ ಶೆಟ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.